ಗಣಿಗಾರಿಕೆ ಅನುಮತಿ ಹಿಂಪಡೆಯಲು ಆಗ್ರಹ


Team Udayavani, Apr 9, 2023, 4:20 PM IST

tdy-18

ತುಮಕೂರು: ಗ್ರಾಮಗಳ ಜನ,ಜಾನುವಾರುಗಳ ಬದುಕಿಗೆ ತೊಂದರೆ ನೀಡುವ ಮತ್ತು ಪರಿಸರ ಹಾಳು ಮಾಡುವ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಬಾರದು ಈಗ ಕಲ್ಲು ಗಣಿಗಾರಿಕೆ ಗೆ ನೀಡಿರುವ ಗುತ್ತಿಗೆ ಅನುಮತಿ ಪತ್ರವನ್ನು ವಾಪಸ್‌ ಪಡೆಯಬೇಕು ಎಂದು ನವ ಕರ್ನಾಟಕ ರೈತರ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕಲ್ಲುಗಣಿ ಬಾಧಿತ ಪ್ರದೇಶವಾಗಿರುವ ತಾಲೂಕಿನ ಕೋರಾ ಹೋಬಳಿ ಅಹೋಬಲ ಅಗ್ರಹಾರ ಸ.ನಂ.172ರ ವಾಪ್ತಿಯಲ್ಲಿ ಬರುವ ಓಬಲೇಶ್ವರ ಗುಡ್ಡದ 7 ಎಕರೆ ಪ್ರದೇಶದಲ್ಲಿ ಯೇ ಗ್ರಾಮಸ್ಥರು ಒಟ್ಟಿಗೆ ಸೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರದೇಶದಲ್ಲಿ ಎಂ.ಸ್ಯಾಂಡ್‌ ತಯಾರಿಸುವ ಉದ್ದೇಶಕ್ಕಾಗಿ ತುಮಕೂರಿನ ಮೆ. ಶ್ರೀ ಧನಲಕ್ಷ್ಮೀ ನ್ಪೋನ್‌ ಕ್ರಷರ್‌ ಇವರಿಗೆ ನೀಡಲಾದ ಕಲ್ಲು ಗಣಿಗಾರಿಕೆ ಗಣಿ ಗುತ್ತಿಗೆಯ ನಿರಾಪೇಕ್ಷಣಾ ಅನುಮತಿ ಪತ್ರವನ್ನು ನೀಡಿದ್ದು, ಇದು ಅವೈಜ್ಞಾನಿಕವಾಗಿ ನೀಡಿರುವ ಅನುಮತಿ ಪತ್ರ ಇದನ್ನು ಹಿಂಪಡೆಯುವಂತೆ ನವ ಕರ್ನಾಟಕ ರೈತ ಸಂಘ ಹಾಗೂ ಚಿನ್ನವಾರನಹಳ್ಳಿ ಅನ್ನದಾನ ಶಾಸ್ತ್ರಿಪಾಳ್ಯ, ಮುದ್ದರಾಮಯ್ಯನಪಾಳ್ಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದರು.

ಈ ವಿವಾದಿತ ಪ್ರದೇಶದಲ್ಲಿ ಹೆಚ್ಚು ಪರಿಶಿಷ್ಟ ಜಾತಿ ಮತ್ತು ವರ್ಗದ ಮತ್ತು ಹಿಂದುಳಿದ ವರ್ಗದ ಬಡ ರೈತರ ಕೃಷಿ ಜಮೀನುಗಳಿದ್ದು ಈ ಗ್ರಾಮಗಳ ರೈತರು ತಮ್ಮ ಜಾನುವಾರುಗಳು, ಮೇಕೆ, ಕುರಿ, ಹಸು ಸಾಕಾಣಿಕೆಗೆ ಈ ಗುಡ್ಡವನ್ನೇ ಅವಲಂಬಿಸಿದ್ದಾರೆ. ಈ ಎಲ್ಲಾ ಗ್ರಾಮಗಳು ಈ ಗುಡ್ಡದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಸುಮಾರು 400 ಅಡಿ ಅಂತರದಲ್ಲಿ ಚನ್ನಮುದ್ದನಹಳ್ಳಿ ಕೆರೆಯಿದೆ. ಗಣಿ ಚಟುವಟಿಕೆಗೆ ಅನುಮತಿ ನೀಡಿದ್ದಲ್ಲಿ ಕೆರೆಯ ನೀರು ಕಲುಷಿತಗೊಂಡು ಜಾನುವಾರುಗಳಿಗೆ ಕುಡಿಯಲು ನೀರು ಸಿಗದಂತಾಗುತ್ತದೆ ಎಂದು ತಿಳಿಸಿದ್ದಾರೆ.

ರೈತರು ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಈ ಗಣಿಗಾರಿಕೆ ಕ್ರಷರ್‌ನಿಂದ ಬರುವ ಕಲ್ಲಿನ ಪುಡಿ, ಧೂಳು ರೈತರ ಬೆಳೆ ಮೇಲೆ ಕೂರುವುದಿರಂದ ಬೆಳೆ ಹಾಣಿಯಾಗುವುದಲ್ಲದೆ, ಜಾನುವಾರುಗಳಿಗೆ ಮೇವು ಸಹ ಇಲ್ಲದಂತಾಗುತ್ತದೆ. ಗಣಿಗಾರಿಕೆ ಸಂದರ್ಭದಲ್ಲಿ ಡೈನಾಮೆಂಟ್‌ ಇಟ್ಟು ಕಲ್ಲು ಸೀಳುವ ಕೆಲಸ ನಡೆಯುತ್ತದೆ. ಶಬ್ದ ಮಾಲಿನ್ಯ ಮತ್ತು ಕಲ್ಲು ಚೂರುಗಳ ಸಿಟಿತದಿಂದ ಸ್ಥಳಿಯರಿಗೆ ತೊಂದರೆಯಾಗುವ ಸಂಭವವಿದೆ ಎಂದಿದ್ದಾರೆ. ಇದೆಲ್ಲಾ ಗೊತ್ತಿದ್ದೂ ತಮಕೂರು ತಹಸೀಲ್ದಾರ್‌ ಅವರು ನೀಡಿರುವ ಸ್ಥಳ ಪರಿಶೀಲನಾ ವರದಿಯಲ್ಲಿ ಸಮಂಜಸವಾಗಿರುವುದಿಲ್ಲ ಎಂದು ಉಲ್ಲೇಖೀಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಿಂದಾಲಿ, ಪಂಚಾಯಿತಿ ವ್ಯಾಪ್ತಿಯಿಂದ ಅನುಮತಿ ಪಡೆಯದೇ ಜಲ್ಲಿ ಕ್ರಷರ್‌ ನಡೆಸಲು ಮುಂದಾಗಿದಾರೆ ಗ್ರಾಮಸ್ಥರು ದೂರಿದ್ದಾರೆ. ಗಣಿಗಾರಿಕೆಯನ್ನು ರದ್ದುಪಡಿಸದೇ ಹೋದರೆ, ಮುಂದಿನ ದಿನಗಳಲ್ಲಿ ಜಿಲ್ಲಾ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿ ಧರಣಿ ಸತ್ಯಾಗ್ರಹ ನಡೆಸಲಾ ಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರೈತ ಮುಖಂಡರಾದ ಪುಟ್ಟಸಿದ್ದಯ್ಯ, ಬಿ.ಸಿ. ಕೃಷ್ಣಮೂರ್ತಿ, ಸಿ.ಕೆ. ಕುಮಾರ್‌, ಮಧು, ನಾಗಪ್ಪ, ರುದ್ರೇಶ್‌, ರಾಮಯ್ಯ, ಸುಜಾತ, ಯಶೋಧಮ್ಮ, ನವಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ.ಜಗದೀಶ್‌, ರಾಜ್ಯಕಾರ್ಯದರ್ಶಿ ಎಸ್‌. ಮಲ್ಲಿಕಾರ್ಜುನ್‌, ರಾಧಿಕಾ ಸೇರಿದಂತೆ ಗ್ರಾಮಸ್ಥರಿದ್ದರು.

ಗಣಿಗಾರಿಕೆ ಎತ್ತಿನಹೊಳೆ ಯೋಜನೆಗೆ ತೊಡಕು : ಈ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆ ಹಾದು ಹೋಗುವುದರಿಂದ ಈ ಗ್ರಾಮಸ್ಥರ ಮನವಿ ಮೇರೆಗೆ ಗುಡ್ಡವನ್ನು ಪರಿಶಿಲಿಸಿ ಗುಡ್ಡದಡಿಯಲ್ಲಿ ಕೊರೆಯಲಾದ ಸುರಂಗ ಮಾರ್ಗವು ಈ ವಿವಾದಿತ ಸ್ಥಳದಿಂದ 350 ಮೀ. ಅಂತರದಲ್ಲಿದೆ. ಈ ಸ್ಥಳದಲ್ಲಿ ಗಣಿಗಾರಿಕೆ ಮಾಡಲು ಆರಂಭಿಸಿದರೆ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯ ಕುಡಿವ ನೀರಿನ ಯೋಜನೆಯ ಸುರಂಗ ಮಾರ್ಗಕ್ಕೆ ಹಾನಿ ಉಂಟಾಗುತ್ತದೆ ಎಂದು ಮುಖ್ಯ ಇಂಜಿನಿಯರ್‌ ನೀಡಿರುವ ಪತ್ರದಲ್ಲಿ ಗ್ರಾಮಸ್ಥರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Reel-Cinema

Film: ಚಲನಚಿತ್ರ ಚೆನ್ನಾಗಿದ್ದರೆ ಮಾತ್ರ ಟಿಕೆಟ್‌ ಖರೀದಿಸಿ

ಆಗಸ್ಟ್‌ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

Augustನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

Zeeka-Virus

Zika Virus: ಗರ್ಭಿಣಿಯರೇ ಝೀಕಾ ಬಗ್ಗೆ ಎಚ್ಚರ: ಸರಕಾರ ಸೂಚನೆ

MBPatil

Airport: ರಾಜಧಾನಿ ಸಮೀಪ ವಿಮಾನ ನಿಲ್ದಾಣಕ್ಕೆ ಜಾಗದ ಹುಡುಕಾಟ: ಎಂ.ಬಿ. ಪಾಟೀಲ್‌

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

Charmadi Ghat: ತಡೆಗೋಡೆ ಅಪಾಯದಲ್ಲಿ: ಕೊಚ್ಚಿ ಹೋಗುತ್ತಿರುವ ಮಣ್ಣು

1-a-da

Rain; ಭಾರತ ಮತ್ತು ದಕ್ಷಿಣ ಆಫ್ರಿಕಾ ವನಿತಾ ಟಿ20 ರದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqe

Koratagere; ಬಸ್ ಗಳ ಸಮಸ್ಯೆ: ಅಳಲು ತೋಡಿಕೊಂಡ ವಿದ್ಯಾರ್ಥಿಗಳು

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

koratagere

Koratagere: ಎರಡು ವಿದ್ಯುತ್‌ ಉಪಸ್ಥಾವರ ಘಟಕಗಳ ಉದ್ಘಾಟನೆ

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Reel-Cinema

Film: ಚಲನಚಿತ್ರ ಚೆನ್ನಾಗಿದ್ದರೆ ಮಾತ್ರ ಟಿಕೆಟ್‌ ಖರೀದಿಸಿ

ಆಗಸ್ಟ್‌ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

Augustನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

1-paris

Paris Olympics; ಅಲ್ಡ್ರಿನ್‌, ಅಂಕಿತಾ ಧ್ಯಾನಿಗೆ ಒಲಿಂಪಿಕ್ಸ್‌ ಟಿಕೆಟ್‌

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

S. T. Somashekhar ಮುಡಾ ಸದಸ್ಯತ್ವಕ್ಕೆ ಬೇರೆಡೆಯ ಶಾಸಕರ ಲಾಬಿ

1-eweweqw

Wrestling; ವಿನೇಶ್‌ ಫೋಗಾಟ್‌ ಗೆ ಸ್ವರ್ಣ ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.