Election 2023: ಶುಭ ಸಮಾರಂಭಗಳ ಮೇಲೆ ಆಯೋಗದ ಕಣ್ಣು !
ಮತದಾರರನ್ನು ಸೆಳೆಯಲು ರಾಜಕೀಯ ಅಭ್ಯರ್ಥಿಗಳ ತಂತ್ರ
Team Udayavani, Apr 10, 2023, 7:15 AM IST
ಉಡುಪಿ: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಮತದಾರರ ಗಮನ ಸೆಳೆಯಲು ರಾಜಕೀಯ ಪಕ್ಷದ ಅಭ್ಯರ್ಥಿ ಗಳು ಮತ್ತವರ ಬೆಂಬಲಿಗರು ನಾನಾ ರೀತಿಯ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಈ ಕಾರಣಕ್ಕೆ ಮದುವೆ ಸಹಿತ ಇತರ ಶುಭ ಸಮಾರಂಭಗಳ ಮೇಲೆ ಚುನಾವಣೆ ಆಯೋಗ ತೀವ್ರ ನಿಗಾ ಇರಿಸಿದೆ.
ಶುಭ ಸಮಾರಂಭಗಳಲ್ಲಿ ಊಟೋಪ ಚಾರ, ಉಡುಗೊರೆಗಳ ನೆಪದಲ್ಲಿ ಮತ ದಾರರಿಗೆ ಆಮಿಷ ಒಡ್ಡುವ ಸಾಧ್ಯತೆ ಗಳು ಅಧಿಕವಾಗಿರುವುದರಿಂದ ಫ್ಲೈಯಿಂಗ್ ಸ್ಕ್ವಾಡ್ ಟೀಮ್, ಸ್ಟಾಟಿಕ್ ಸರ್ವೆಲೆನ್ಸ್ ಟೀಮ್, ವೀಡಿಯೋ ಸರ್ವೆಲೆನ್ಸ್ ಟೀಮ್, ಸೆಕ್ಟರ್ ಆಫೀಸರ್ ಟೀಮ್, ವೀಡಿಯೋ ವ್ಹೀವಿಂಗ್ ಟೀಮ್, ಎಂಸಿಸಿ ನೋಡಲ್ ಆಫೀಸರ್, ಅಕೌಂಟ್ ಎಕ್ಸ್ ಪೆಂಡಿಚರ್ ಟೀಮ್‌ಗಳು ಈ ಬಗ್ಗೆ ಕಾರ್ಯೋನ್ಮುಖವಾಗಿದೆ.
ಅಲ್ಲಲ್ಲಿ ನಡೆಯುವ ಶುಭ ಕಾರ್ಯ ಕ್ರಮಗಳಿಗೆ ಆಯೋಗದ ತಂಡ ದಿಢೀರ್ ಭೇಟಿ ನೀಡಿ ಪರಿಶೀಲಿಸಬಹುದು. ಅಗತ್ಯ ಬಿದ್ದಲ್ಲಿ ವೀಡಿಯೋ ಚಿತ್ರೀಕರಣವನ್ನು ಮಾಡಲಿದ್ದು, ಮತಯಾಚನೆ, ರಾಜಕೀಯ ಚಟುವಟಿಕೆ, ಮತ ಪ್ರಚಾರ ಪ್ರಕ್ರಿಯೆಗಳು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕೋಲ, ಜಾತ್ರೆ, ಉತ್ಸವ ನಡೆಸುವವರಿಗೆ ಚುನಾವಣೆ ಪ್ರಕ್ರಿಯೆಗಳಿಂದ ತೊಂದರೆ ಯಾಗದು. ಯಕ್ಷಗಾನ, ಮೆಹಂದಿ ಸಮಾರಂಭಗಳೂ ಸಂಜೆ 6ರಿಂದ 10ರೊಳಗೆ ನಡೆಯಬೇಕು. ಕಲ್ಯಾಣ ಮಂಟಪ, ಸಮುದಾಯ ಭವನ ಗಳಲ್ಲಿ ನಡೆಯುವ ಅದ್ದೂರಿ ಸಮಾರಂಭ ಗಳಿಗೆ ಅನುಮತಿ ಪಡೆಯುವುದು ಅಗತ್ಯ.
ಕುಟುಂಬದೊಳಗಿನ ಕಾರ್ಯಕ್ರಮಕ್ಕೆ ಅನುಮತಿ ಬೇಕಿಲ್ಲ ಕುಟುಂಬದೊಳಗೆ ಮನೆಗಳಲ್ಲಿ ನಡೆ ಯುವ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯವಿಲ್ಲ. ವೈಯಕ್ತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲು ಯಾವುದೇ ಆತಂಕ, ಗೊಂದಲ ಪಡುವ ಅಗತ್ಯವಿಲ್ಲ. ಈ ಕಾರ್ಯಕ್ರಮಗಳು ರಾಜಕೀಯ ಚಟುವಟಿಕೆಯಿಂದ ಮುಕ್ತವಾಗಿರಬೇಕು ಎಂದು ಚುನಾವಣೆ ಆಯೋಗ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.