ಯಸಳೂರು ಹೋಬಳಿಯಲ್ಲಿ ತಗ್ಗಿದ ಆನೆಗಳ ಹಾವಳಿ


Team Udayavani, Apr 11, 2023, 4:37 PM IST

tdy-19

ಸಕಲೇಶಪುರ: ಕಾಡಾನೆಗಳ ತವರು ಎಂದು ಕರೆಸಿಕೊಳ್ಳುತ್ತಿದ್ದ ಯಸಳೂರು ಹೋಬಳಿಯಲ್ಲಿ ಕಾಡಾನೆಗಳ ಸಮಸ್ಯೆ ಇಳಿಮುಖಗೊಂಡಿದೆ. ಹೌದು ತಾಲೂಕಿನ ಬೇರೆಲ್ಲ ಹೋಬಳಿಗಳಲ್ಲಿ ಕಾಡಾನೆ ಕಾಟದಿಂದಾಗಿ ಜನರು ಮನೆ ಯಿಂದ ಹೊರಬಾರದಂತ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಕಾಡಾನೆಗಳ ತವರೂರು ಎಂದು ಕರೆಸಿಕೊಳ್ಳುತ್ತಿದ್ದ ಯಸಳೂರು ಹೋಬಳಿಯಲ್ಲಿ ಕಾಡಾನೆಗಳ  ಹಾವಳಿ ಗಣನೀಯವಾಗಿ ತಗ್ಗಿರುವುದು ಹೋಬಳಿಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಆಹಾರ ಅರಸಿ ಗ್ರಾಮಗಳಿಗೆ ಲಗ್ಗೆ: ತಾಲೂಕಿನಲ್ಲಿ 1990ರ ದಶಕದಲ್ಲಿ ಕೂಡಗಿನ ಕೊಡ್ಲಿಪೇಟೆ ಹೋಬಳಿಯಿಂದ ಕಾಡಾನೆಗಳು ತಾಲೂಕಿಗೆ ಕಾಲಿಟ್ಟ ವೇಳೆ ಹೋಬಳಿಯ ಕೆರೋಡಿ, ಕುಂಬ್ರಹಳ್ಳಿ ಗ್ರಾಮದ ಹೇಮಾವತಿ ಹಿನ್ನೀರು ಪ್ರದೇಶದಲ್ಲಿನ ಬಿದಿರು ಮೇವು ಕಾಡಾನೆಗಳ ಆಹಾರ ತಾಣವಾಗಿತ್ತು. ರಾತ್ರಿ ವೇಳೆ ಆಹಾರ ಅರಸಿ ಹಿನ್ನೀರು ಪ್ರದೇಶಕ್ಕೆ ಬರುತ್ತಿದ್ದ ಕಾಡಾನೆಗಳು, ರಾತ್ರಿ ವೇಳೆ ಆಲೂರು ತಾಲೂಕಿ ನ ದೊಡ್ಡಬೆಟ್ಟ ಸೇರಿದಂತೆ ಉಪ ಅರಣ್ಯಗಳಲ್ಲಿ ಬೀಡುಬಿಡುತ್ತಿದ್ದವು. ಹಗಲು ವೇಳೆ ಕಣ್ಣೀಗೆ ಕಾಣದಂತೆ ಮರೆಯಾಗಿರುತ್ತಿದ್ದ ಕಾಡಾನೆಗಳು, ಇವುಗಳ ಸಂಖ್ಯೆ ಹೆಚ್ಚಿದಂತೆ ಹಗಲು ಸಂಚಾರಕ್ಕೆ ಮುಂದಾಗಿದ್ದವು.

ಬಿದಿರಿಗೆ ಕಟ್ಟೆ: ಹೋಬಳಿಯ ಯಸಳೂರು ಗ್ರಾ.ಪಂನ ಕೆರೋಡಿ, ಮಾಗಲು, ಕುಂಬ್ರಹಳ್ಳಿ ಗ್ರಾಮಗಳಲ್ಲಿನ ಹಿನ್ನೀರು ಪ್ರದೇಶದಲ್ಲಿನ ಬಿದಿರಿಗೆ 21ನೇ ಶತಮಾನದ ಆರಂಭದಲ್ಲಿ ಕಟ್ಟೆ ರೋಗ ಬಂದು ಸಂಪೂರ್ಣ ಬಿದಿರು ನಾಶವಾದ ನಂತರ ಕಾμತೋಟಗಳಿಗೆ ಲಗ್ಗೆ ಇಡಲು ಆರಂಭಿಸಿದ ಕಾಡಾನೆಗಳು ತೋಟದಲ್ಲಿ ದೊರೆಯುತ್ತಿದ್ದ ಹಲಸು, ಬಾಳೆ, ಬೈನೆಯಂತ ಆಹಾರಕ್ಕೆ ಮಾರು ಹೋಗಿದ್ದವು. ಪರಿಣಾಮ ಹಿನ್ನೀರು ಪ್ರದೇಶದಲ್ಲಿ ಮತ್ತೆ ಬಿದಿರು ಚಿಗುರಿದರು ಬಿದಿರಿಗಿಂತ ತೋಟದಲ್ಲಿನ ಆಹಾರವೆ ಇವುಗಳ ಇಷ್ಟದ ಆಹಾರವಾಗಿ ಕಂಡು ಬಂದ ಕಾರಣ ತೋಟಗಳೆ ಇವುಗಳ ನೆಚ್ಚಿನ ತಾಣವಾಗಿತ್ತು. ಬಿದಿರು ಈಗ ಕಾಡಾನೆಗಳ ಅಪಥ್ಯ ಆಹಾರದ ಸಾಲಿಗೆ ಸೇರಿದೆ. ನಿರಂತರ ಎರಡು ದಶಕ ಗಳ ಕಾಡಾನೆಗಳ ಕಾಟಕ್ಕೆ ಯಸಳೂರು ಹೋಬಳಿಯ ಜನರು ಅಕ್ಷರಶಃ ನಲುಗಿದ್ದು ಮಾತ್ರ ಸುಳ್ಳಲ್ಲ.

ಪಾಳುಬಿದ್ದ ತೋಟಗಳು: ನಿರಂತರ ಕಾಡಾನೆಕಾಟದಿಂದಾಗಿ ತೋಟಕ್ಕೆ ಕಾರ್ಮಿಕರ ಬರಲು ಹಿಂದೇಟು ಹಾಕುತ್ತಿದ್ದರಿಂದ ಕಾಫಿ ತೋಟಗಳನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲದ ಕಾರಣ ಸಾಕಷ್ಟು ಕಾಫಿ ತೋಟಗಳು ಹೋಬಳಿಯ ವಿವಿಧೆಡೆ ಇಂದಿಗೂ ಪಾಳುಬಿದ್ದಿವೆ. ಅದರಲ್ಲೂ ಹೋಬಳಿಯ ಹಲವೇಡೆ ಬೃಹತ್‌ ಪ್ರಮಾಣದ ತೋಟಗಳನ್ನು ಪಾಳುಬಿಟ್ಟಿದ್ದರಿಂದ ಬಹುವರ್ಷಗಳ ಕಾಲ ಕಾಡಾನೆಗಳು ನೆಲೆ ನಿಲ್ಲಲ್ಲು ಕಾರಣವಾಗಿತ್ತು ಎಂಬ ಅಭಿಪ್ರಾಯವು ಕೇಳಿ ಬರುತ್ತಿದೆ.

ಸಾವಿನ ಪ್ರಮಾಣ ಹೆಚ್ಚಳ: ಕಾಡಾನೆ ದಾಳಿಗೆ ಮೊದಲು ಕೆರೋಡಿ ಗ್ರಾಮದಲ್ಲಿ ವ್ಯಕ್ತಿ ಬಲಿಯಾದರೆ ಎರಡು ದಶಕ ಗಳಲ್ಲಿ ಕಾಡಾನೆಗಳ ದಾಳಿಗೆ ಹೋಬಳಿಯಲ್ಲೆ 13 ಸಾವುಗಳು ಸಂಭವಿಸಿದೆ. ಅದರಲ್ಲೂ ಕೆರೋಡಿ ಗ್ರಾಮದ ಸುತ್ತಲಿನ ಪ್ರದೇಶದಲ್ಲೆ 10 ವರ್ಷದಲ್ಲಿ ಆರು ಜನರು ಮೃತಪಟ್ಟಿದ್ದು ಸಮಸ್ಯೆ ತೀವ್ರತೆಯನ್ನು ಎತ್ತಿ ತೋರುತಿತ್ತು. ಪ್ರತಿ ವ್ಯಕ್ತಿ ಮೃತಪಟ್ಟ ವೇಳೆ ನಡೆಯುತ್ತಿದ್ದ ಪ್ರತಿಭಟನೆಯಿಂದಾಗಿ ಸರ್ಕಾರ ಹೋಬಳಿಯೊಂದರಲ್ಲೆ ಎರಡು ದಶಕಗಳಲ್ಲಿ 6 ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲಾಗಿತ್ತಾದರು ಸಮಸ್ಯೆ ತೀವ್ರತೆ ತಗ್ಗಿಸಲು ಸಾಧ್ಯವಾಗಿರಲಿಲ್ಲ.

ಅಘೋಷಿತ ಕರ್ಫ್ಯೂ: ಯಸಳೂರು ಹೋಬಳಿಯಲ್ಲಿ 2000 ಸಾಲಿನಿಂದ ರಿಂದ 2020 ರವರಗೂ ಅತಿಯಾಗಿದ್ದ ಕಾಡಾನೆಗಳ ಸಮಸ್ಯೆಯಿಂದ ಕೊಡಗು ಹಾಗೂ ಹಾಸನ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸೇರಿ ದಂತೆ ಹಲವು ಹೋಬಳಿಯ ಪ್ರಮುಖ ರಸ್ತೆಗಳಲ್ಲಿ ಕತ್ತಲಾದ ನಂತರ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿದ್ದರೆ, ಜನರು ಕತ್ತಲಾದ ನಂತರ ತಮ್ಮ ಗ್ರಾಮಗಳಿಗೆ ತೆರಳಲು ಅಂಜುತ್ತಿದ್ದರು. ಇದರಿಂದಾಗಿ ಇಡಿ ಹೋಬಳಿಯಲ್ಲಿ ಎರಡು ದಶಕಗಳ ಕಾಲ ಅಘೋಷಿತ ಕರ್ಫ್ಯೂ ಜಾರಿಯಲ್ಲಿತ್ತು. ತೋಟಗಳ ನಿರ್ವಹಣ ಶೈಲಿ ಬದಲು: ಹೌದು ಕಾಡಾನೆ ಸಮಸ್ಯೆ ಅಲ್ಪಮೆಟ್ಟಿಗೆ ತಗ್ಗಲು ಹೋಬಳಿಯ ಬೆಳೆಗಾರರು ತಮ್ಮ ತೋಟ ದ ನಿರ್ವಹಣ ಶೈಲಿ ಬದಲಿಸಿಕೊಂಡಿರುವುದು ಕಾರಣ ಎನ್ನಲಾಗುತ್ತಿದೆ.

ಆರಂಭದಲ್ಲಿ ಬೈನೆ, ಹಲಸಿನ ನಂತಹ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಕಾಫಿ ತೋಟದಲ್ಲಿ ಬೆಳೆಯಲಾಗುತ್ತಿದ್ದರೆ ಬಾಳೆ ಸೇರಿದಂತೆ ಹಲವು ಉಪಬೆಳೆಗಳು ತೋಟದಲ್ಲಿ ಹೆಚ್ಚಾಗಿದ್ದವು. ಆದರೆ, ಕಾಡಾನೆ ಕಾಟ ಹೆಚ್ಚದಾಂತೆ ಅನಗತ್ಯ ಹಲಸು ಹಾಗೂ ಬೈನೆಯಂತಹ ಮರಗಳನ್ನು ತೋಟದಿಂದಲೇ ಹೊರ ಹಾಕಲಾಗಿದ್ದರೆ ಬಾಳೆಯಂತಹ ಉಪಬೆಳೆಗಳಿಗೆ ತೋಟದಲ್ಲಿ ಸ್ಥಳಲ್ಲದಂತೆ ಮಾಡಲಾಗಿದೆ. ಇದರಿಂದ ಹೆಚ್ಚಿರುವ ಕಾಡಾನೆಗಳಿಗೆ ಹೋಬಳಿಯಲ್ಲಿ ಆಹಾರದ ಕೊರತೆ ಎದುರಾಗಿದ್ದೆ ಬೇರೆಡೆ ವಲಸೆ ಹೋಗಲು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿದೆ.

ಸಮಸ್ಯೆ ಕ್ಷೀಣ: ಆರು ತಿಂಗಳ ಅವಧಿಯಲ್ಲಿ ಹೆತ್ತೂರು ಹೋಬಳಿ ಓರ್ವ ಹಾಗೂ ಬೆಳಗೋಡು ಹೋಬಳಿ ಯಲ್ಲಿ ನಾಲ್ವರು ಕಾಡಾನೆಧಾಳಿಗೆ ಸಿಲುಕಿ ಮೃತಪಟ್ಟಿದ್ದರೆ, ಬೆಳೆಹಾನಿ ಸಮೀಕ್ಷೆ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಇದೆ ಅವಧಿಯಲ್ಲಿ ಯಸಳೂರು ಹೋಬಳಿಯಲ್ಲಿ ಪ್ರಾ ಣಹಾನಿ ಬಗ್ಗೆ ವರದಿಯಾಗಿಲ್ಲದಿರುವುದು, ಬೆಳೆ ಹಾನಿ ತೀರ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಹೋಬಳಿಯಲ್ಲಿ ಕಾಡಾನೆ ಹಾವಳಿ ಸಮಸ್ಯೆ ಕೊಂಚ ತಗ್ಗಿದೆ ಎನ್ನಲು ಕಾರಣವಾಗಿದೆ.

ಹರಿಯುವ ನೀರು ಹಾಗೂ ಹೆಚ್ಚಿನ ಪ್ರಮಾಣದಲ್ಲಿದ್ದ ಕಾರಣ ಯಸಳೂರು ಹೋಬಳಿಯಲ್ಲಿ ಅತಿಹೆಚ್ಚುವರ್ಷ ಕಾಡಾನೆಗಳು ನೆಲೆ ನಿಲ್ಲಲ್ಲು ಕಾರಣ. ಆದರೆ ಇತ್ತೀಚ್ಚಿಗೆ ತೋಟದಲ್ಲಿ ಅವುಗಳ ಇಷ್ಟದ ಆಹಾರಗಳ ಕೊರತೆ ಎದುರಾಗಿರುವುದು ಬೇರೆಡೆ ವಲಸೆ ಹೋಗಲು ಕಾರಣವಿಬಹುದು: ಯೋಗೇಶ್‌, ಕೆರೋಡಿ ಗ್ರಾಮಸ್ಥ

ಯಸಳೂರು ಹೋಬಳಿಯಲ್ಲಿ ಕಾಡಾನೆಗಳ ಸಮಸ್ಯೆ ನಿವಾರಣೆಯಾಗಿದೆ. ಆದರೆ, ಇಲ್ಲಿದ್ದ ಕಾಡಾನೆಗಳು ಹೆತ್ತೂರು ಹೋಬಳಿಯಡೆಗೆ ವಲಸೆ ಬಂದಿದ್ದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿವೆ. ಸುರೇಶ್‌, ಎಸಿಎಫ್, ಸಕಲೇಶಪುರ.

-ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.