![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 11, 2023, 6:01 PM IST
ಕೊರಟಗೆರೆ: ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದ ಡಾ.ಜಿ.ಪರಮೇಶ್ವರ ರವರನ್ನು ಬೆಂಬಲಿಸಿ ವೀರಶೈವ ಲಿಂಗಾಯಿತ ಸಮುದಾಯದ ಬೃಹತ್ ಸಮಾವೇಶವನ್ನು ಎ.13 ರಂದು ಗುರುವಾರ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯದ ಮುಖಂಡ ಹೆಚ್.ಎಂ. ರುದ್ರಪ್ರಸಾದ್ ತಿಳಿಸಿದ್ದಾರೆ.
ಅವರು ಪಟ್ಟಣದ ರಾಜೀವ ಭವನದಲ್ಲಿ ವೀರಶೈವ ಲಿಂಗಾಯಿತ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಕ್ಷೇತ್ರದ ಶೇ.90ರಷ್ಟು ವೀರಶೈವ ಲಿಂಗಾಯಿತ ಸಮುದಾಯ ಡಾ.ಜಿ.ಪರಮೇಶ್ವರ ರವರನ್ನು ಬೆಂಬಲಿಸುತ್ತಾರೆ, ಕಾಂಗ್ರೆಸ್ ಪಕ್ಷವು ಸುಮಾರು 4 ಮಂದಿ ವೀರಶೈವ ಲಿಂಗಾಯಿತ ಸಮುದಾಯದವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದೆ, ವಿರೇಂದ್ರಪಾಟೀಲ್ ರವರನ್ನು ಮುಖ್ಯಮಂತ್ರಿ ಮಾಡಿ ಅವರ ಅನಾರೋಗ್ಯ ಕಾರಣ ಅವರನ್ನು ಪಕ್ಷವು ಗೌರವದಿಂದ ಮನೆಗೆ ಕಳುಹಿಸಿಕೊಟ್ಟಿದೆ, ಆದರೆ ವೀರಶೈವ ಲಿಂಗಾಯಿತ ಮತಗಳನ್ನು ಅವರ ಸ್ವಾರ್ಥಕ್ಕೆ ಬಳಸಿಕೊಳ್ಳುವ ಬಿಜೆಪಿ ಪಕ್ಷವು ನಮ್ಮ ಸಮುದಾಯದ ನಾಯಕರಾದ ಬಿ.ಎಸ್.ಯಡಿಯೂರಪ್ಪರವರನ್ನು ಚುನಾವಣೆಯಲ್ಲಿ ಬಳಸಿಕೊಂಡು ಅನಾರೋಗ್ಯ ನೆಪ ನೀಡಿ ಅವರಿಗೆ ಕಣ್ಣೀರು ಹಾಕಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಜೈಲಿಗೆ ಕಳುಹಿಸಿತು, ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಯಡಿಯೂರಪ್ಪನವರಿಗೆ ವಯಸ್ಸು ಆಗಿರುವುದಿಲ್ಲ ಆದರೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ವಯಸ್ಸಿನ ನೆಪ ಹೇಳುತ್ತರೆ, ವಿಜಯೇಂದ್ರರಿಗೂ ಸಹ ಬಿಜೆಪಿ ಪಕ್ಷವು ಒಳಗಡೆ ಹಿಂಸೆ ನೀಡುತ್ತಿದೆ ಆದ್ದರಿಂದ ವೀರಶೈವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಮಾಜದ ಮುಖಂಡ ಅರಕೆರೆ ಶಂಕರ್ ಮಾತನಾಡಿ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 55 ಮಂದಿ ವೀರಶೈವ ಲಿಂಗಾಯಿತ ರಿಗೆ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದೆ, ಯಾವಾಗಲು ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿರವರು ನಮ್ಮ ನಡೆದಾಡುವ ದೇವರು ಹಾಗೂ ಇಡಿ ಪ್ರಪಂಚದಲ್ಲಿಯೇ ವಿದ್ಯೆ ಮತ್ತು ದಾಸೋಹ ಸೇವೆಗೆ ಹೆಸರುವಾಸಿಯಾಗಿದ್ದ
ಸಿದ್ದಗಂಗಾ ಕ್ಷೇತ್ರದ ಡಾ. ಶೀವಕುಮಾರಸ್ವಾಮಿಯವರಿಗೆ ಭಾರತ ರತ್ನ ನೀಡಲು ಆಗದ ಬಿಜೆಪಿ ಪಕ್ಷದವರಿಗೆ ವೀರಶೈವ ಲಿಂಗಾಯಿತ ಸಮಾಜದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ, ಆದ್ದರಿಂದ ನಾವೆಲ್ಲರೂ ಸೇರಿದಂತೆ ಡಾ.ಜಿ.ಪರಮೇಶ್ವರರವರ ಸಜ್ಜನಿಕೆ, ಅಭಿವೃದ್ದಿ ಕೆಲಸಗಳು ಸೇರಿದಂತೆ ಎಲ್ಲಾ ಇತರ ಜನೋಪಕಾರಿ ಸೇವೆಗೆ ಕ್ಷೇತ್ರದ ವೀರಶೈವರು ಅವರನ್ನು ಬೆಂಬಲಿಸಿ ಎ.13ರ ಗುರವಾರ ದಂದು ಬೃಹತ್ ಸಮಾವೇಶ ನಡೆಸಲಾಗುವುದು ಎಲ್ಲಾ ವೀರಶೈವ ಲಿಂಗಾಯಿತ ಬಂಧುಗಳು ಸಮಾವೇಶಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಮುಖಂಡರುಗಳಾದ ಆರ್.ಎಸ್.ರಾಜಣ್ಣ, ಎಲ್.ರಾಜಣ್ಣ, ಗೀರಿಶ್, ಈಶಪ್ರಸಾದ್, ಕೆ.ಬಿ.ಲೋಕೇಶ್, ಮಂಜುನಾಥ್, ಕೆ.ಎಂ.ಸುರೇಶ್, ಉಮಾಶಂಕರ್, ತ್ರೀಯಂಭಕಾರಾಧ್ಯ, ಮಹೇಶ್, ರಾಜಣ್ಣ, ಮಲ್ಲಿಕಾರ್ಜನ್, ಕಿರಣ್, ಸಿದ್ದರಾಜು, ವಿದ್ಯಾ, ಸಿದ್ದಗಂಗಮ್ಮ, ವೇದಾಂಬ ಸೇರಿದಂತೆ ವೀರಶೈವ ಮುಖಂಡರುಗಳು ಹಾಜರಿದ್ದರು.
Congress: ಹೈಕಮಾಂಡ್ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್.ರಾಜಣ್ಣ
Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ
Tumkur: ಪರಂ, ರಾಜಣ್ಣ ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್
Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ
Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್; ಓರ್ವ ಆರೋಪಿ ಬಂಧನ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.