ಮಂಗಳೂರು: Plikula ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ
Team Udayavani, Apr 11, 2023, 6:43 PM IST
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕರ ವೀಕ್ಷಣೆಗೂ ಸಿಗಲಿದೆ.
ಹೌದು ಗುಜರಾತ್ ನ ರಾಜಕೋಟ್ ಮೃಗಾಲಯ ಮತ್ತು ಪಿಲಿಕುಳ ಜೈವಿಕ ಉದ್ಯಾನವನದ ಮಧ್ಯೆ ನಡೆದ ಪ್ರಾಣಿವಿನಿಮಯ ಒಪ್ಪದಂತೆ, ಪಿಲಿಕುಳಕ್ಕೆ ಒಂದು ಏಷ್ಯಾಟಿಕ್ ಸಿಂಹ, ಎರಡು ತೋಳಗಳು, ಎರಡು ಸ್ವರ್ಣ ಬಣ್ಣದ ನರಿಗಳು, ಅಪರೂಪದ ಕೊಂಬ್ ಬಾತು, 3 ಬಣ್ಣದ ಪೆಸೆಂಟ್ ಪಕ್ಷಿಗಳು ಆಗಮಿಸಿದೆ. ಅದರಂತೆ ಪಿಲಿಕುಳ ಮೃಗಾಲಯದಿಂದ ನಾಲ್ಕು ಕಾಡು ನಾಯಿಗಳು, ಒಂದು ಚಿರತೆ, ಎರಡು ಸಿವೆಟ್ ಬೆಕ್ಕು, ನಾಲ್ಕು ರೆಟಿಕ್ಯೂಲೇಟೆಡ್ ಹೆಬ್ಬಾವು, ನಾಲ್ಕು ಮೋಂಟೇನ್ ಹಾವು, ವೈನ್ ಹಾವು, ಮರಳು ಹಾವುಗಳನ್ನು ರಾಜಕೋಟ್ ಗೆ ಕಳುಹಿಸಿ ಕೊಡಲಾಗಿದೆ.
ಪಿಲಿಕುಳಕ್ಕೆ ಆಗಮಿಸಿದ ತೋಳ ಅಪಾಯದಂಚಿನಲ್ಲಿರುವ ಪ್ರಾಣಿ ಎಂದು ಗುರುತಿಸಲ್ಪಟ್ಟಿದೆ. ಈ ಹಿಂದೆ ಸಾಮಾನ್ಯವಾಗಿ ಕಾಣಿಸಿಗುತಿದ್ದ ತೋಳಗಳು ಈಗ ಭಾರತದಲ್ಲಿ ಕಾಣುವುದು ಅಪರೂಪ. ಪಿಲಿಕುಲದಲ್ಲಿ ಅಪಾಯದಂಚಿನಲ್ಲಿರುವ ಪ್ರಾಣಿಗಳಾದ ಕಾಡುನಾಯಿಗಳು, ಹೈನಗಳು ಸಂತಾನಾಭಿವೃದ್ಧಿಗೊಳಿಸುತ್ತಿರುವುದು ಮೃಗಾಲಯದ ಅಧಿಕಾರಿಗಳಿಗೆ ಸಂತಸ ತಂದಿದೆ. ತೋಳಗಳಿಗಾಗಿ ರಿಲಯನ್ಸ್ ಫೌಂಡೇಷನ್ ನೀಡಿದ ದೇಣಿಗೆಯಲ್ಲಿ ವಿಶಾಲವಾದ ಆವರಣ ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಪಿಲಿಕುಳಕ್ಕೆ ಹೊಸದಾಗಿ ಆಗಮಿಸಿದ ಪ್ರಾಣಿಗಳು ಪರಿಸರಕ್ಕೆ ಹೊಂದಿಕೊಳಲು ಕೆಲ ಕಾಲ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: ಚಿಕ್ಕೋಡಿ ಮೂರು ಬಾರಿ “ಪಕ್ಷೇತರರ ಪಾರುಪತ್ಯ”
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.