ರೈಲ್ವೆ ಬ್ರಿಡ್ಜ್ ಕಂಬ; Qutub Minar ಗಿಂತಲೂ ಎತ್ತರ
Team Udayavani, Apr 12, 2023, 8:00 AM IST
ಮಿಜೋರಾಂ ಅನ್ನು ದೇಶದ ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸುವಂಥ ಬೈರಾಬಿ-ಸೈರಾಂಗ್ ಹೊಸ ರೈಲ್ವೆ ಲೈನ್ ಯೋಜನೆಯ ಅತಿ ಎತ್ತರದ ಸ್ತಂಭ ನಿರ್ಮಾಣ ಕಾರ್ಯ ಕೊನೆಗೂ ಪೂರ್ಣಗೊಂಡಿದೆ. ತಾನು ನಿರ್ಮಿಸಿರುವ ಈ ಕಂಬದ ಫೋಟೋ ಹಾಗೂ ವೈಶಿಷ್ಟ್ಯ ವನ್ನು ನಾರ್ತ್‌ಈಸ್ಟ್ ಫ್ರಂಟಿಯರ್ ರೈಲ್ವೆ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದೆ.
ಸ್ತಂಭದ ವೈಶಿಷ್ಟ್ಯವೇನು?
ಈ ಸ್ತಂಭವು 104 ಮೀಟರ್ ಎತ್ತರವಿದ್ದು, ದೆಹಲಿಯ ಐತಿಹಾಸಿಕ ಕುತುಬ್ ಮಿನಾರ್‌ಗಿಂತಲೂ 42 ಮೀಟರ್‌ನಷ್ಟು ಹೆಚ್ಚು ಎತ್ತರವನ್ನು ಹೊಂದಿದೆ. ಈ ಕಂಬಗಳನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದ್ದು, ಪೈಲ್ ಕ್ಯಾಪ್‌ಗೆ 4.5 ಮೀ.*8.5 ಮೀ.ನ ನಾಲ್ಕು ಕುಳಿಗಳನ್ನು ನಿರ್ಮಿಸಿ, ಅದರ ಮೂಲಕ ನದಿ ನೀರು ಹಾದುಹೋಗುವಂತೆ ಮಾಡಲಾಗಿದೆ.
……………….
ರೈಲ್ವೆ ಲೈನ್‌ನಲ್ಲಿ ಬಳಸುತ್ತಿರುವ ಸ್ತಂಭದ ಎತ್ತರ – 104 ಮೀಟರ್
ಕುತುಬ್ ಮಿನಾರ್‌ಗಿಂತ ಎಷ್ಟು ಎತ್ತರ? – 42 ಮೀಟರ್
ಸ್ತಂಭದ ಬಾಹ್ಯ ವ್ಯಾಸ – 12 ಮೀಟರ್
ದಪ್ಪ ಎಷ್ಟಿದೆ? – 50-75 ಸೆ.ಮೀ.
ಮಣಿಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ತಂಭದ ಎತ್ತರ- 141 ಮೀ.
…………….
ಹೊಸ ದಾಖಲೆಗೆ ಅಣಿ
ಮಣಿಪುರದಲ್ಲಿ ಜಿರಿಬಾಮ್-ಇಂಫಾಲ್ ಪ್ರಾಜೆಕ್ಟ್ಗೆಂದು ಇಂಥದ್ದೇ ಬೃಹತ್ ಕಂಬಗಳನ್ನು ನಿರ್ಮಿಸಲಾಗುತ್ತಿದೆ. ಇದು ಬರೋಬ್ಬರಿ 141 ಮೀಟರ್ ಎತ್ತರವಿರಲಿದ್ದು, ಜಗತ್ತಿನಲ್ಲೇ ಅತ್ಯಂತ ಎತ್ತರದ ಕಂಬ ಹೊಂದಿರುವ ರೈಲ್ವೆ ಬ್ರಿಡ್ಜ್ ಎಂಬ ಖ್ಯಾತಿಗೆ ಪಾತ್ರವಾಗಲಿದೆ. 14,322 ಕೋಟಿ ರೂ. ವೆಚ್ಚದ ಈ ಯೋಜನೆಯ ಕಾಮಗಾರಿ ಶೇ.93.30ರಷ್ಟು ಪೂರ್ಣಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.