IPL 2023: ಚೆನ್ನೈ ವಿರುದ್ಧವೇ ಚೆನ್ನೈನ ಸ್ಪಿನ್‌ ಅಸ್ತ್ರ !

ಎದುರಾಳಿ ರಾಜಸ್ಥಾನ್‌ ತಂಡದಲ್ಲಿ ಚೆನ್ನೈನ ಆರ್‌. ಅಶ್ವಿ‌ನ್‌, ಮುರುಗನ್‌ ಅಶ್ವಿ‌ನ್‌

Team Udayavani, Apr 12, 2023, 7:30 AM IST

CSK-RR

ಚೆನ್ನೈ: ಪ್ರಸಕ್ತ ಪಂದ್ಯಾವಳಿ ಯಲ್ಲಿ ಉತ್ತಮ ಲಯದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ಬುಧವಾರ ಮಹತ್ವದ ಪಂದ್ಯದಲ್ಲಿ ಎದುರಾಗಲಿವೆ. ಚೆನ್ನೈನ ಚೆಪಾಕ್‌ ಅಂಗಳದಲ್ಲಿ ನಡೆಯುವ ಈ ಮುಖಾಮುಖೀ ಧೋನಿ ಪಡೆಯ ಪಾಲಿಗೆ ತವರಿನ ತಾಣವಾಗಿದೆ. ಎದುರಾಳಿ ರಾಜಸ್ಥಾನ್‌ ತಂಡದಲ್ಲಿ ಚೆನ್ನೈನ ಇಬ್ಬರು ಪ್ರಬಲ ಸ್ಪಿನ್ನರ್‌ಗಳಿರುವುದು ವಿಶೇಷ.

ಎರಡೂ ತಂಡಗಳು ಈವರೆಗೆ ಸಮಬಲದ ಹೋರಾಟ ದಾಖಲಿಸಿವೆ. 3 ಪಂದ್ಯಗಳನ್ನಾಡಿದ್ದು, ಎರಡರಲ್ಲಿ ಗೆದ್ದಿವೆ. ಒಂದನ್ನು ಸೋತಿವೆ. ಆದರೆ ರನ್‌ರೇಟ್‌ನಲ್ಲಿ ಮುಂದಿರುವ ರಾಜ ಸ್ಥಾನ್‌ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಿ ಯಾಗಿದೆ. ಗೆದ್ದರೆ ಅಗ್ರಸ್ಥಾನಕ್ಕೆ ನೆಗೆಯ ಲಿದೆ. ಚೆನ್ನೈ ಸದ್ಯ 5ನೇ ಸ್ಥಾನದಲ್ಲಿದೆ.
ಉದ್ಘಾಟನ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ಗೆ 5 ವಿಕೆಟ್‌ಗಳಿಂದ ಶರಣಾದ ಬಳಿಕ ಚೆನ್ನೈ ಗೆಲುವಿನ ಟ್ರ್ಯಾಕ್‌ ಏರಿದೆ. ಲಕ್ನೋವನ್ನು 12 ರನ್ನುಗಳಿಂದ, ಮುಂಬೈ ಯನ್ನು ಅವರದೇ ಅಂಗಳ ದಲ್ಲಿ 7 ವಿಕೆಟ್‌ಗಳಿಂದ ಮಣಿಸಿದೆ. ಇದರಲ್ಲಿ ಲಕ್ನೋ ವಿರುದ್ಧದ ಪಂದ್ಯ ಏರ್ಪಟ್ಟದ್ದು ಚೆನ್ನೈಯಲ್ಲೇ. ಧೋನಿ ಟೀಮ್‌ 217 ರನ್‌ ರಾಶಿ ಹಾಕಿದರೂ ಇದನ್ನು ಉಳಿಸಿಕೊಳ್ಳಲು ಭಾರೀ ಪರದಾಟ ನಡೆಸಿತ್ತು. ಲಕ್ನೋ 205ರ ತನಕ ಬಂದಿತ್ತು.

ಮತ್ತೆ 200 ಪ್ಲಸ್‌ ಸ್ಕೋರ್‌?
ರಾಜಸ್ಥಾನ್‌ ವಿರುದ್ಧದ ಪಂದ್ಯವೂ ಇದೇ ಟ್ರ್ಯಾಕ್‌ನಲ್ಲಿ ನಡೆಯಲಿದೆ. ಅರ್ಥಾತ್‌, ಮತ್ತೂಂದು 200 ಪ್ಲಸ್‌ ಮೊತ್ತದ ಮೇಲಾಟವಾಗುವ ಸಾಧ್ಯತೆಯೊಂದು ಗೋಚರಿಸುತ್ತಿದೆ. ಆಗ ರಾಜಸ್ಥಾನ್‌ ಬ್ಯಾಟಿಂಗ್‌ ಲೈನಪ್‌ ಮೇಲುಗೈ ಸಾಧಿಸಬಹುದು. ಆರಂಭಿಕ ರಾದ ಜಾಸ್‌ ಬಟ್ಲರ್‌ ಮತ್ತು ಯಶಸ್ವಿ ಜೈಸ್ವಾಲ್‌ ಪ್ರಚಂಡ ಫಾರ್ಮ್ ನಲ್ಲಿದ್ದಾರೆ. ಕ್ರಮವಾಗಿ 180.95 ಹಾಗೂ 164.47 ಸ್ಟ್ರೈಕ್‌ರೇಟ್‌ ದಾಖಲಿಸಿದ್ದಾರೆ. ಸಂಜು ಸ್ಯಾಮ್ಸನ್‌, ರಿಯಾನ್‌ ಪರಾಗ್‌, ಶಿಮ್ರನ್‌ ಹೆಟ್‌ಮೈರ್‌, ಧ್ರುವ ಜುರೆಲ್‌, ಜೇಸನ್‌ ಹೋಲ್ಡರ್‌ ಅವರಿಂದ ಬ್ಯಾಟಿಂಗ್‌ ಸರದಿ ಬೆಳೆಯುತ್ತದೆ. ಎಲ್ಲರೂ ಅಪಾಯಕಾರಿಗಳೇ.

ದೇವದತ್ತ ಪಡಿಕ್ಕಲ್‌ ಮಾತ್ರ ಫಾರ್ಮ್ನಲ್ಲಿಲ್ಲ. ರಾಜಸ್ಥಾನ್‌ ತನ್ನ ದ್ವಿತೀಯ ತವರು ಅಂಗಳವಾದ ಗುವಾಹಟಿಯಲ್ಲಿ 2 ಪಂದ್ಯಗಳನ್ನು ಆಡಿತ್ತು. ಇಲ್ಲಿನ ಫ್ಲ್ಯಾಟ್‌ ಟ್ರ್ಯಾಕ್‌ ಬ್ಯಾಟಿಂಗ್‌ಗೆ ಭರಪೂರ ನೆರವು ನೀಡಿತ್ತು. ರಾಜಸ್ಥಾನ್‌ ಆಡಿದ ಮತ್ತೂಂದು ತಾಣ ಹೈದರಾಬಾದ್‌. ಇದು ಕೂಡ ಬ್ಯಾಟಿಂಗ್‌ಗೆ ಸಹಕರಿ ಸಿತ್ತು. ಈಗ ಒಮ್ಮೆಲೇ ಚೆನ್ನೈ ಪಿಚ್‌ನಲ್ಲಿ ಆಡಬೇಕಿದೆ. ಪಂದ್ಯ ಮುಂದುವರಿದಂತೆಲ್ಲ ಇಲ್ಲಿನ ಪಿಚ್‌ ನಿಧಾನ ಗತಿಗೆ ತಿರುಗುತ್ತದೆ. ಮೊಯಿನ್‌ ಅಲಿ, ರವೀಂದ್ರ ಜಡೇಜ ಮತ್ತು ಮಿಚೆಲ್‌ ಸ್ಯಾಂಟ್ನರ್‌ ಅವರ 10-12 ಓವರ್‌ಗಳನ್ನು ನಿಭಾಯಿಸಿ ನಿಲ್ಲುವುದು ಭಾರೀ ಸವಾಲಾಗಬಹುದು. ಕಳೆದ 3 ಪಂದ್ಯಗಳಲ್ಲಿ ಈ ಸ್ಪಿನ್‌ ತ್ರಿವಳಿಗಳು 11 ವಿಕೆಟ್‌ ಕೆಡವಿದ್ದಾರೆ. ಹೀಗಾಗಿ ಟಾಸ್‌ ನಿರ್ಣಾಯಕ.

ರಾಜಸ್ಥಾನ್‌ದಲ್ಲಿ ಚೆನ್ನೈ ಸ್ಪಿನ್ನರ್
ಇತ್ತ ರಾಜಸ್ಥಾನ್‌ ಚೆನ್ನೈಯವರೇ ಆದ ವಿಶ್ವ ದರ್ಜೆಯ ಸ್ಪಿನ್ನರ್‌ ಒಬ್ಬರನ್ನು ಹೊಂದಿರುವುದನ್ನು ಮರೆಯು ವಂತಿಲ್ಲ. ಅವರೇ ರವಿಚಂದ್ರನ್‌ ಅಶ್ವಿ‌ನ್‌. ಚೆನ್ನೈ ಪಿಚ್‌ ಅನ್ನು ಇವರಷ್ಟು ಬಲ್ಲವರು ಮತ್ತೂಬ್ಬರಿಲ್ಲ. ಜತೆಗೆ ಮುರುಗನ್‌ ಅಶ್ವಿ‌ನ್‌ ಕೂಡ ಇದ್ದಾರೆ. ಟೀಮ್‌ ಇಂಡಿಯಾದ ಯಜುವೇಂದ್ರ ಚಹಲ್‌ ಮತ್ತೂಂದು ಅಸ್ತ್ರ. ವೇಗಕ್ಕೆ ಟ್ರೆಂಟ್‌ ಬೌಲ್ಟ್ ಒಬ್ಬರೇ ಸಾಕು.

ಚೆನ್ನೈ ಬ್ಯಾಟಿಂಗ್‌ ಆರಂಭಿಕರಾದ ರುತುರಾಜ್‌ ಗಾಯಕ್ವಾಡ್‌ ಮತ್ತು ಡೇವನ್‌ ಕಾನ್ವೇ ಅವರನ್ನು ಹೆಚ್ಚು ಅವಲಂಬಿಸಿದೆ. ಅಜಿಂಕ್ಯ ರಹಾನೆ ವಾಂಖೇಡೆ ಅಂಗಳದಲ್ಲಿ ಸಿಡಿದು ನಿಂತಿ ದ್ದನ್ನು ಮರೆಯುವಂತಿಲ್ಲ. ಶಿವಂ ದುಬೆ, ಅಂಬಾಟಿ ರಾಯುಡು, ಜಡೇಜ, ಧೋನಿ ಬ್ಯಾಟಿಂಗ್‌ ಸರದಿಯ ಗಟ್ಟಿ ಗರು. ಬೌಲಿಂಗ್‌ ವಿಭಾಗದಲ್ಲಿ ದೀಪಕ್‌ ಚಹರ್‌ ಲಭಿಸದಿರುವುದೊಂದೇ ಚೆನ್ನೈಗೆ ಎದುರಾಗಿರುವ ಸಮಸ್ಯೆ.

ಟಾಪ್ ನ್ಯೂಸ್

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.