ಮೂಳೂರು-ಬೆಳಪು-ಉಚ್ಚಿಲ ಬೈಲ್‌ನಲ್ಲಿ 2 ದಿನಗಳಿಂದ ಬೆಂಕಿ
Team Udayavani, Apr 12, 2023, 6:35 AM IST
ಕಾಪು: ಮೂಳೂರು- ಬೆಳಪು-ಉಚ್ಚಿಲ ಬೈಲ್‌ನಲ್ಲಿ ಸೋಮ ವಾರ ಬೆಳಗ್ಗೆಯಿಂದ ಕಾಣಿಸಿಕೊಂಡಿ ರುವ ಬೆಂಕಿಯ ಪ್ರತಾಪಕ್ಕೆ ನೂರಾರು ಎಕರೆ ಗದ್ದೆ ಪ್ರದೇಶಗಳು ಸುಟ್ಟು ಕರಟಿಹೋಗಿದ್ದು ವಿವಿಧ ಜಾತಿಯ ಪಕ್ಷಿ ಮತ್ತು ಹಾವು ಸಂಕುಲಗಳು ಅಪಾರ ಸಂಖ್ಯೆಯಲ್ಲಿ ಬೆಂಕಿಗೆ ಆಹುತಿಯಾಗಿರುವ ಸಾಧ್ಯತೆಗಳಿವೆ.
ಸೋಮವಾರ ಮಧ್ಯಾಹ್ನ 11ಕ್ಕೆ ಕಾಣಿಸಿಕೊಂಡಿರುವ ಬೆಂಕಿ ದಿನವಿಡೀ ಉರಿದಿದ್ದು, ರಾತ್ರಿಯ ವೇಳೆಗೆ ಬೈಲಿನಲ್ಲಿ ಸಂಪೂರ್ಣವಾಗಿ ಹರಡಿ ಹೋಗಿತ್ತು. ಮಂಗಳವಾರ ಬೆಳಗ್ಗೆ ಉಚ್ಚಿಲ – ಪೊಲ್ಯ ಪ್ರದೇಶದ ಗದ್ದೆಗಳಲ್ಲೂ ಬೆಂಕಿ ವಿಸ್ತರಿಸಿದ್ದು ಸುಜ್ಲಾನ್ ಸಂಸ್ಥೆಯು ಸ್ಥಳೀಯರಿಂದ ಖರೀದಿ ಸಿದ್ದ ನೂರಾರು ಎಕರೆ ಗದ್ದೆ ಪ್ರದೇಶಗಳು ಸಂಪೂರ್ಣ ಕರಟಿ ಹೋಗಿವೆ.
ಬೆಂಕಿ ನಂದಿಸಲು ಹರಸಾಹಸ
ಉಡುಪಿ ಅಗ್ನಿಶಾಮಕ ದಳದ ಠಾಣಾಧಿಕಾರಿ ಸತೀಶ್, ಸಹಾಯಕ ಅಧಿಕಾರಿ ಮೀರ್ ಮಹಮ್ಮದ್ ಗೌಸ್ ಮತ್ತು ಸಿಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದ್ದಾರಾದರೂ ಗಾಳಿ ಮತ್ತು ಬಿಸಿಲಿನ ಕಾರಣದಿಂದಾಗಿ ಬೆಂಕಿ ಎಲ್ಲೆಡೆಗೆ ಹಬ್ಬಿಕೊಂಡಿದೆ.
ಮನೆಗಳತ್ತ ಬೆಂಕಿ ಬರದಂತೆ ತಡೆ
ಬೆಳಪು ಮಾಗಂದಡಿ, ಎಲ್ಲದಡಿ, ಪೊಲ್ಯ ಪರಿಸರದ ಹತ್ತಾರು ಮನೆಗಳತ್ತ ಬೆಂಕಿ ಹಬ್ಬಿರುವ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬಂದಿ ಸ್ಥಳೀಯರ ನೆರವಿನೊಂದಿಗೆ ಬೆಂಕಿಯನ್ನು ನಂದಿಸಿ ಮನೆಗಳತ್ತ ವ್ಯಾಪಿಸುವುದಕ್ಕೆ ತಡೆಯೊಡ್ಡಿದ್ದಾರೆ.
ಪಕ್ಷಿ ಸಂಕುಲಗಳ ಸಾವು
ಬೆಳಪು ಮಾಗಂದಡಿ ಪರಿಸರದಲ್ಲಿ ನಾಗಬನದತ್ತ ಬೆಂಕಿ ವ್ಯಾಪಿಸಿದ್ದು ನಾಗ ಬನಕ್ಕೆ ಹಾನಿಯಾಗುವುದನ್ನು ತಪ್ಪಿಸಲಾಗಿದೆ. ಪೊದೆ, ಗಿಡ- ಮರಗಳಲ್ಲಿ ಗೂಡು ಕಟ್ಟಿದ್ದ ಹಲವಾರು ಪಕ್ಷಿಗಳಲ್ಲದೇ ಹಾವುಗಳು, ಮೊಲ, ಮುಂಗುಸಿ ಸಹಿತ ವಿವಿಧ ಪ್ರಾಣಿಗಳೂ ಕರಟಿ ಹೋಗಿವೆ.
ಸುಜ್ಲಾನ್ ಸಂಸ್ಥೆಯು ದಶಕಗಳ ಹಿಂದೆ ಖರೀದಿಸಿದ್ದ ನೂರಾರು ಎಕರೆ ಗದ್ದೆಗಳು ಹಡೀಲು ಬಿದ್ದಿವೆ. ಬೆಂಕಿ ದುರಂತಕ್ಕೆ ಸುಜ್ಲಾನ್ ಸಂಸ್ಥೆಯ ನಿರ್ಲಕ್ಷéವೇ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.