ಬಂಡೆಗೂ ತಟ್ಟಿದ ಬಿಸಿ!: Andhra Pradeshದಲ್ಲಿ ಬಿಸಿಲಿನ ತಾಪಕ್ಕೆ ಬಿರುಕು ಬಿಟ್ಟ ಬಂಡೆಕಲ್ಲು
Team Udayavani, Apr 13, 2023, 7:42 AM IST
ಕರ್ನೂಲು/ಹೊಸದಿಲ್ಲಿ: “ಅವನು ಬಂಡೆ… ಬಂಡೆಯಂಥ ವ್ಯಕ್ತಿ. ಯಾವುದಕ್ಕೂ ಬಗ್ಗಲ್ಲ” ಎಂದು ಹೇಳುವುದನ್ನು ಕೇಳಿರುತ್ತೀರಿ. ಆದರೆ ದೇಶವು ಈಗ ಅನುಭವಿಸುತ್ತಿರುವ ಬಿಸಿಲಿನ ಬೇಗೆಯು ಬೃಹತ್ ಬಂಡೆಯನ್ನೂ ಬಿಟ್ಟಿಲ್ಲ!
ಹೌದು ದೇಶಾದ್ಯಂತ ಬಿಸಿಲಿನ ಝಳವು ದಿನ ಕಳೆದಂತೆ ದಾಖಲೆ ಬರೆಯತೊಡಗಿದ್ದು, ವಿಪರೀತ ಸೆಕೆಯಿಂದ ಜನ ಬಳಲಿ ಬೆಂಡಾಗುತ್ತಿದ್ದಾರೆ. ಮನುಷ್ಯರೇನು, ಬೃಹತ್ ಬಂಡೆಕಲ್ಲುಗಳಿಗೂ “ಬಿಸಿ” ತಟ್ಟಿದೆ. ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆ ಯ ಗೋನೆಗಂಡ್ಲಾ ಗ್ರಾಮದಲ್ಲಿ ಮನೆಗಳ ನಡುವೆ ಬೃಹತ್ತಾಗಿ ಬೆಳೆದು ನಿಂತಿದ್ದ ಬಂಡೆಕಲ್ಲೊಂದು ಬಿಸಿಲು ತಾಳಲಾರದೇ ಬಿರುಕು ಬಿಟ್ಟಿದೆ!
ಮಂಗಳವಾರವೇ ಈ ಘಟನೆ ನಡೆದಿದ್ದು, ಕೂಡಲೇ ಕರ್ನೂಲು ಜಿಲ್ಲಾಧಿಕಾರಿ ಶ್ರೀಜನ ಗುಮ್ಮಲ್ಲ ಅವರು ಆ ಪ್ರದೇಶದಲ್ಲಿದ್ದ ಸುಮಾರು 150 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ.
“ಬಂಡೆಯಲ್ಲಿ ಬಿರುಕು ಉಂಟಾಗಿದೆ. ಸದ್ಯದಲ್ಲೇ ಎರಡು ಎರಡು ಹೋಳಾಗಿ ಕೆಳಕ್ಕೆ ಬೀಳುವ ಅಪಾ ಯವಿದೆ. ಅದೃಷ್ಟವಶಾತ್ ಸದ್ಯಕ್ಕೆ ಅಂಥದ್ದೇನೂ ಅನಾಹುತ ಆಗಿಲ್ಲ. ನಾವು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ವಿಪತ್ತು ನಿರ್ವಹಣ ಪಡೆಯನ್ನು ನಿಯೋಜಿಸಿ, ಗ್ರಾಮಸ್ಥರನ್ನು ಸ್ಥಳಾಂತರಿಸಿದ್ದೇವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬಿರುಕು ಬಿಟ್ಟಿರುವ ಬಂಡೆಯು ಅಕ್ಕಪಕ್ಕದಲ್ಲಿರುವ ಮನೆಗಳ ಮೇಲೆ ಬೀಳುವ ಸಾಧ್ಯ ತೆಯಿದೆ. ಬಿರುಕು ಮುಚ್ಚಿ ಅನಾಹುತ ತಪ್ಪಿಸುವಂತೆ ಸಿಮೆಂಟ್ ಕಂಪೆನಿಗಳಿಗೆ ಮನವಿ ಮಾಡಿದ್ದೇವೆ” ಎಂದು ಜಿಲ್ಲಾಧಿಕಾರಿ ಗುಮ್ಮಲ್ಲ ಹೇಳಿದ್ದಾರೆ. ಗೋನೆ ಗಂಡ್ಲಾದಲ್ಲಿ ಮಂಗಳವಾರ ಗರಿಷ್ಠ ತಾಪಮಾನ 38.2 ಡಿ.ಸೆ. ಇತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬುಧವಾರವೂ ತಾಪಮಾನ ಏರಿಕೆ: ಬುಧವಾರ ಗೋಲುಗೊಂಡಾದಲ್ಲಿ 42.3 ಡಿ.ಸೆ., ಕುನಾವರಂನಲ್ಲಿ 46 ಡಿ.ಸೆ., ನಾಥವರಂನಲ್ಲಿ 42 ಡಿ.ಸೆ, ಕೋಟನಂದುರುನಲ್ಲಿ 41 ಡಿ.ಸೆ. ತಾಪಮಾನ ದಾಖಲಾಗಿದೆ.
217 ಬೇಸಗೆ ವಿಶೇಷ ರೈಲು
ಬೇಸಗೆ ಋತುವಿನಲ್ಲಿ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿ ನಲ್ಲಿ ರೈಲ್ವೇ ಸಚಿವಾಲಯವು, 217 ವಿಶೇ ಷ ರೈಲುಗಳ ಸಂಚಾರ ಆರಂಭಿಸುತ್ತಿರುವು ದಾಗಿ ಘೋಷಿಸಿದೆ. ಪಟ್ನಾ, ಮುಂಬಯಿ, ಬೆಂಗ ಳೂರು, ಚೆನ್ನೈಯಂಥ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರಯಾಣ ಬೆಳೆಸುವವರಿಗೆ ಇದರಿಂದ ಅನುಕೂಲವಾಗಲಿದೆ.
ಭಾರತೀಯ ಹವಾಮಾನ ಇಲಾಖೆಯು ಬುಧವಾರ ತೆಲಂಗಾಣದ ಬಹುತೇಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ವಾರ ಇಲ್ಲಿ ಗರಿಷ್ಠ ತಾಪಮಾನ 45 ಡಿ.ಸೆ.ಗೆ ತಲುಪುವ ಅಪಾಯವಿದೆ ಎಂದು ಇಲಾಖೆ ಎಚ್ಚರಿಸಿದೆ. ಹೈದರಾಬಾದ್‌ಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಬುಧವಾರ ಅದಿಲಾಬಾದ್‌ನಲ್ಲಿ 42.2 ಡಿ.ಸೆ. ತಾಪಮಾನ ದಾಖಲಾಗಿದೆ. ದಿಲ್ಲಿಯಲ್ಲೂ ಗರಿಷ್ಠ ತಾಪಮಾನ 40 ಡಿ.ಸೆ. ಆಗಿದ್ದು, ಮಹಾರಾಷ್ಟ್ರದ ಚಂದ್ರಾಪುರದಲ್ಲೂ
40ಡಿ.ಸೆ. ಆಗಿದೆ. ವಿದರ್ಭದಲ್ಲಿ 41.8 ಡಿ.ಸೆ.ಗೆ ತಲುಪಿದೆ.
ಒಡಿಶಾದಲ್ಲಿ ಶಾಲೆಗಳಿಗೆ ರಜೆ
ಒಡಿಶಾದಲ್ಲಿ ಬಿಸಿ ಗಾಳಿಯ ತೀವ್ರತೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಸರಕಾರವು ರಾಜ್ಯಾದ್ಯಂತ ಎಲ್ಲ ಶಾಲೆಗಳು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ. ಎ.12ರಿಂದ 16ರವರೆಗೆ 10ನೇ ತರಗತಿಯವರೆಗಿನ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಯ ಮಕ್ಕಳು ಶಾಲೆಗಳಿಗೆ ಬರದಂತೆ ಸೂಚಿಸಲಾಗಿದೆ. ಜತೆಗೆ, ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳು ವಂತೆಯೂ ಅಧಿಕಾರಿಗಳಿಗೆ ಸಿಎಂ ನಿರ್ದೇಶಿಸಿದ್ದಾರೆ.
ಒಂದು ಲಕ್ಷ ಎಕ್ರೆ ಮಹಾ ಬೆಳೆಹಾನಿ
ಬಿಸಿಲಿನ ನಡುವೆಯೇ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಒಂದು ಲಕ್ಷ ಎಕರೆ ಬೆಳೆಹಾನಿಯಾಗಿದೆ ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.
ಬೆಳೆ ಹಾನಿಯಾದ ರೈತರಿಗೆ ರಾಜ್ಯ ಸರಕಾರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿರುವ ಅವರು, ಈರುಳ್ಳಿ, ಪಪ್ಪಾಯ, ದ್ರಾಕ್ಷಿ ಸಹಿತ ವಿವಿಧ ಬೆಳೆಗಳು ನಾಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.