ಗಂಡನಿಗೆ ಬೇರೆ ಯುವತಿಯರ ಜತೆ ಸೇರಿ ರೀಲ್ಸ್ ಮಾಡುವ ಹುಚ್ಚು: ಪತ್ನಿಗೆ ಮೈದುನನಿಂದ ಕಿರುಕುಳ
Team Udayavani, Apr 13, 2023, 1:49 PM IST
ಬೆಂಗಳೂರು: ಗಂಡನಿಗೆ ಬೇರೆ ಯುವತಿಯರ ಜತೆ ಸೇರಿ ರೀಲ್ಸ್ ಮಾಡುವ ಹುಚ್ಚು, ಮೈದುನ ಮನೆಯ ಟೀವಿಗೆ ಇಂಟರ್ನೆಟ್ ಕನೆಕ್ಟ್ ಮಾಡಿಕೊಂಡು ಅಶ್ಲೀಲ ವಿಡಿಯೋ ನೋಡಿ, ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸುತ್ತಾನೆ. ಅದನ್ನು ಖಂಡಿಸಬೇಕಾದ ಅತ್ತೆ, ಮಾವ ವರದಕ್ಷಿಣೆ ಕಿರುಕುಳ ನೀಡುತ್ತಾರೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಚಿಕ್ಕರಾಮಯ್ಯನ ಬಡಾವಣೆ ನಿವಾಸಿ 25 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪತಿ ಪ್ರಮೋದ್ ಕುಮಾರ್, ಮೈದುನ ಅಭಿ, ಅತ್ತೆ ಜಯಶ್ರೀ, ಮಾವ ತ್ಯಾಗರಾಜ್ ಎಂಬುವರ ವಿರುದ್ಧ ಪೂರ್ವ ವಿಭಾಗದ ಮಹಿಳಾ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆ 2022ರ ಮೇನಲ್ಲಿ ಪ್ರಮೋದ್ ಕುಮಾರ್ ಜತೆ ಮದುವೆಯಾಗಿದ್ದು, ಅಂದಿ ನಿಂದ ಪತ್ನಿ ಜತೆ ದೈಹಿಕ ಸಂಪರ್ಕ ಹೊಂದಿಲ್ಲ. ಆದರೆ, ಬೇರೆ ಯುವತಿಯರೊಂದಿಗೆ ರೀಲ್ಸ್ ವಿಡಿಯೋ ಮಾಡಿಕೊಂಡಿರುತ್ತಾನೆ. ಮೈದುನ ಅಭಿ, ತನ್ನ ಮೈ ಮುಟ್ಟಲು ಯತ್ನಿಸಿದಲ್ಲದೆ, ಎಲ್ಲರೆದುರು ಟೀವಿಯಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡಿ, ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಈ ಬಗ್ಗೆ ಅತ್ತೆ, ಮಾವ, ಪತಿಗೆ ಹೇಳಿದರೆ, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅಲ್ಲದೆ, ಪತಿ ಪ್ರಮೋದ್, ತನ್ನ ಸಹೋದರ ಅಭಿಗೆ ದೈಹಿಕವಾಗಿ ಸಹಕಾರ ನೀಡುವಂತೆ ಒತ್ತಾಯ ಮಾಡುತ್ತಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಮದುವೆಗೆ 30 ಲಕ್ಷ ರೂ. ಖರ್ಚು ಮಾಡಿದ್ದ ದೂರುದಾರಳ ಪೋಷಕರು ವರದಕ್ಷಿಣೆಯಾಗಿ ಉಂಗುರ, ಬ್ರಾಸ್ಲೇಟ್ ಸೇರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ನೀಡಿದ್ದರು. ಸ್ವಂತ ಮನೆಯಿದೆ ಎಂದು ನಂಬಿಸಿದ್ದ ಆರೋಪಿಯ ಕುಟುಂಬದವರು “ಇದೀಗ ಮನೆ ಕಟ್ಟಿಸಬೇಕು, ‘ತವರು ಮನೆಯಿಂದ ಹಣ ತರಬೇಕು’ ಎಂದು ಒತ್ತಾಯಿಸುತ್ತಿದ್ದಾರೆ. ಅದನ್ನು ತವರು ಮನೆಗೆ ತಿಳಿಸಿದಕ್ಕೆ ಅತ್ತೆ, ಮಾವ ಊಟ ನೀಡದೆ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಸೂಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.