![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 14, 2023, 7:40 AM IST
ಮುಂಬೈ: ಉದ್ಯೋಗಸ್ತಳೆಂಬ ಕಾರಣಕ್ಕಾಗಿ ವಿಚ್ಛೇದಿತ ಮಹಿಳೆಯೊಬ್ಬರಿಗೆ ಮಗುವನ್ನು ದತ್ತು ಪಡೆಯಲು ಅವಕಾಶ ನಿರಾಕರಿಸಿದ ಕೆಳ ನ್ಯಾಯಾಲಯವೊಂದರ ಆದೇಶವನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಇಂಥ ಆದೇಶಗಳು ಮಧ್ಯಕಾಲೀನ ಸಂಪ್ರದಾಯವಾದಿ ಪರಿಕಲ್ಪನೆಗಳ ಮನಸ್ಥಿತಿಯದ್ದಾಗಿವೆ ಎಂದು ಟೀಕಿಸಿದೆ.
ಶಬನಮ್ ಜಹಾನ್ ಅನ್ಸಾರಿ ಎನ್ನುವ ವಿಚ್ಛೇದಿತ ಮಹಿಳೆಯು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ತನ್ನ ಸಹೋದರಿಯ 4 ವರ್ಷದ ಹೆಣ್ಣುಮಗುವನ್ನು ದತ್ತು ಪಡೆಯಲು ಮುಂದಾಗಿದ್ದರು. ಆದರೆ ಆಕೆ ಉದ್ಯೋಗಸ್ತಳಾಗಿರುವ ಕಾರಣ, ಮಗುವಿನ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಿಲ್ಲವೆಂದು ಗಮನಿಸಿ ಕೆಳ ನ್ಯಾಯಾಲಯವು ದತ್ತು ಪ್ರಕ್ರಿಯೆ ನಿರಾಕರಿಸಿತ್ತು.
ಇದನ್ನು ಪ್ರಶ್ನಿಸಿ ಅನ್ಸಾರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾ. ಗೌರಿ ಗೋಡ್ಸೆ ನ್ಯಾಯಪೀಠ ಅರ್ಜಿ ಆಲಿಸಿದೆ. ಈ ವೇಳೆ ಮಗುವಿನ ಸ್ವಂತ ತಾಯಿ ವಿಚ್ಛೇದಿತಳಾಗಿ, ಉದ್ಯೋಗಸ್ತಳಾಗಿದ್ದರೆ ಆಕೆ ಮಗುವನ್ನು ಬೆಳೆಸಲು ಅನರ್ಹಗಳು ಎಂದು ಪರಿಗಣಿಸುತ್ತೆವೆಯೇ? ಹಾಗಿದ್ದಾಗ ದತ್ತು ತಾಯಿ ಕೂಡ ಮಗುವಿನ ಆರೈಕೆಗೆ ಸಮರ್ಥಳು. ಉದ್ಯೋಗದ ಆಧಾರದಲ್ಲಿ ನೀಡಿರುವ ತೀರ್ಪು ಆಧಾರರಹಿತ ಎಂದು ಸೂಚಿಸಿ, ಮಗುವನ್ನು ದತ್ತು ಪಡೆಯಲು ಅನುಮತಿಸಿ ಆದೇಶ ಹೊರಡಿಸಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.