ಕೋಲ್ಕತಾ ನೈಟ್‌ರೈಡರ್ -ಸನ್‌ರೈಸರ್ ಹೈದರಾಬಾದ್‌: ಹ್ಯಾಟ್ರಿಕ್‌ ಗೆಲುವಿನತ್ತ KKR ದೃಷ್ಟಿ


Team Udayavani, Apr 14, 2023, 8:09 AM IST

KKR-SRH

ಕೋಲ್ಕತಾ: ರಿಂಕು ಸಿಂಗ್‌ ಅವರ ಅದ್ಭುತ ಬ್ಯಾಟಿಂಗ್‌ ವೈಭವದಿಂದ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡಿರುವ ಕೋಲ್ಕತಾ ನೈಟ್‌ರೈಡರ್ಸ್‌ ತಂಡವು ಶುಕ್ರವಾರ ಇಲ್ಲಿ ನಡೆ ಯಲಿರುವ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಎದುರಿಸಲಿದ್ದು ಹ್ಯಾಟ್ರಿಕ್‌ ವಿಜಯದ ಗುರಿಯನ್ನು ಇಟ್ಟುಕೊಂಡಿದೆ.
ಪಂಜಾಬ್‌ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲಿ ಮಳೆಯ ಕಾರಣ ಸೋಲನ್ನು ಕಂಡಿದ್ದ ಕೆಕೆಆರ್‌ ತಂಡವು ಆಬಳಿಕ ಇಬ್ಬರು ಆಟಗಾರರ ಅಸಾಮಾನ್ಯ ಬ್ಯಾಟಿಂಗ್‌ ವೈಭವದಿಂದ ಗೆಲುವಿಗೆ ಟ್ರ್ಯಾಕ್‌ಗೆ ಮರಳಿದೆ. ಸತತ ಎರಡು ಪಂದ್ಯಗಳಲ್ಲಿ ಗೆದ್ದಿರುವ ಕೆಕೆಆರ್‌ ತನ್ನ ಗೆಲುವಿನ ಅಭಿಯಾನವನ್ನು ಇನ್ನಷ್ಟು ಹೆಚ್ಚಿಸುವ ಉತ್ಸಾಹದಲ್ಲಿದೆ.

ಶಾದೂìಲ್‌ ಠಾಕುರ್‌ ಕೂರ್‌ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ತಂಡವು ಬೆಂಗಳೂರು ತಂಡವನ್ನು ಸೋಲಿಸಿ ಅಚ್ಚರಿಗೊಳಿಸಿತು. ಕೇವಲ 29 ಎಸೆತಗಳಲ್ಲಿ 68 ರನ್‌ ಸಿಡಿಸಿದ ಅವರು ತಂಡಕ್ಕೆ 81 ರನ್ನುಗಳ ಭರ್ಜರಿ ಗೆಲುವು ಒದಗಿಸಿದ್ದರು. ಈ ಹಿಂದಿನ ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದಾಗಿ ಕೆಕೆಆರ್‌ ಅಸಾಮಾನ್ಯ ಗೆಲುವು ದಾಖಲಿಸಿತ್ತು. ಅಂತಿಮ ಓವರಿನಲ್ಲಿ ಸತತ 5 ಸಿಕ್ಸರ್‌ ಸಹಿತ ಒಟ್ಟು 31 ರನ್‌ ಪೇರಿಸಿ ಜಯ ತಂದುಕೊಟ್ಟರು.

ಎರಡು ಬಾರಿಯ ಚಾಂಪಿಯನ್‌ ಆಗಿರುವ ಕೆಕೆಆರ್‌ ಈಗಾಗಲೇ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ಅನುಭವಿ ಶಕಿಬ್‌ ಅಲ್‌ ಹಸನ್‌ ಅವರ ಅನುಪಸ್ಥಿತಿಯನ್ನು ಎದುರಿಸುತ್ತಿದೆ. ಆದರೆ ಸಾಮಾನ್ಯ ಆಟಗಾರರಿಬ್ಬರು ಅದ್ಭುತವಾಗಿ ಆಡುವ ಮೂಲಕ ಕೆಕೆಆರ್‌ ಬಲಿಷ್ಠ ತಂಡವಾಗಿ ರೂಪುಗೊಳ್ಳುತ್ತಿದೆ. ಇನ್ನು ತಂಡದ ಸ್ಟಾರ್‌ ಹಿಟ್ಟರ್‌ ಆ್ಯಂಡ್ರೆ ರಸೆಲ್‌ ಮತ್ತು ನಾಯಕ ನಿತೀಶ್‌ ರಾಣಾ ಅವರು ಮಿಂಚಿದರೆ ತಂಡ ಇನ್ನಷ್ಟು ಅಪಾಯಕಾರಿ ಆಗುವುದರಲ್ಲಿ ಸಂಶಯವಿಲ್ಲ.

ಕಳೆದ ಮೂರು ಪಂದ್ಯಗಳಲ್ಲಿ ಕೆಕೆಆರ್‌ ಆರಂಭಿಕರ ನ್ನಾಗಿ ಬೇರೆ ಬೇರೆ ಆಟಗಾರರನ್ನು ಆಡಿಸಿತ್ತು. ಹೈದ ರಾಬಾದ್‌ ವಿರುದ್ದ ರಹಮನುಲ್ಲ ಗುರ್ಬಾಜ್‌ ಅವರ ಬದಲಿಗೆ ಇಂಗ್ಲೆಂಡಿನ ಆರಂಭಿಕ ಆಟಗಾರ ಜೇಸನ್‌ ರಾಯ್‌ ಅವರನ್ನು ಸೇರ್ಪಡೆ ಗೊಳಿಸುವ ಸಾಧ್ಯತೆಯಿದೆ. ಅಘಾ^ನಿಸ್ಥಾನದ ಗುರ್ಬಾಜ್‌ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಹೊಡೆದಿದ್ದರು.

ಹೈದರಾಬಾದ್‌ ಬಲಷ್ಠ
ಐಡೆನ್‌ ಮಾರ್ಕ್‌ರಮ್‌ ಅವರ ನಾಯಕತ್ವದ ಸನ್‌ರೈಸರ್ ಹೈದರಾ ಬಾದ್‌ ತಂಡವು ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಹ್ಯಾರಿ ಬ್ರೂಕ್‌, ಮಾಯಾಂಕ್‌ ಅಗರ್ವಾಲ್‌ ಮತ್ತು ಹೆನ್ರಿಚ್‌ ಕ್ಲಾಸನ್‌ ತಂಡದ ಖ್ಯಾತ ಆಟಗಾರರಾಗಿದ್ದಾರೆ. ನುರಿತ ಆಟ ಗಾರರಿದ್ದರೂ ಮೊದಲೆರಡು ಪಂದ್ಯ ಗಳಲ್ಲಿ ತಂಡ ಉತ್ತಮ ಆಟ ಪ್ರದರ್ಶಿ ಸಲು ವಿಫ‌ಲವಾಗಿತ್ತು. ಆದರೆ ರಾಹುಲ್‌ ತ್ರಿಪಾಠಿ ಅವರ ಅಜೇಯ 74 ರನ್‌ ನೆರವಿನಿಂದ ತಂಡವು ಈ ಹಿಂದಿನ ಪಂದ್ಯದಲ್ಲಿ ಪಂಜಾಬ್‌ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಲು ಯಶಸ್ವಿಯಾಗಿತ್ತು.

ಈ ಗೆಲುವಿನಿಂದ ಉತ್ತೇಜಿತವಾಗಿ ರುವ ಲಾರಾ ಅವರಿಂದ ಮಾರ್ಗದರ್ಶನ ಪಡೆದ ಹೈದರಾಬಾದ್‌ ತಂಡವು ಕೆಕೆಆರ್‌ ತಂಡವನ್ನು ಸೋಲಿಸಿ ಗೆಲುವಿನ ಟ್ರ್ಯಾಕ್‌ನಲ್ಲಿ ಮುಂದುವರಿಯಲು ಹಾತೊರೆಯುತ್ತಿದೆ. ಬ್ರೂಕ್‌, ಕ್ಲಾಸೆನ್‌ ಸಹಿತ ತ್ರಿಪಾಠಿ ಅವರ ಬ್ಯಾಟಿಂಗ್‌ ಬಲದಿಂದ ಹೈದರಾಬಾದ್‌ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದೆ. ಮಧ್ಯಮ ಕ್ರಮಾಂಕದಲ್ಲಿ ತ್ರಿಪಾಠಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಲಿದ್ದಾರೆ. 13.25 ಕೋಟಿ ರೂ. ನೀಡಿ ಖರೀದಿಸಿದ್ದ ಬ್ರೂಕ್‌ ಈವರೆಗಿನ ಪಂದ್ಯಗಳಲ್ಲಿ ಕೇವಲ 13, 3 ಮತ್ತು 13 ರನ್‌ ಹೊಡೆದಿದ್ದಾರೆ. ಅವರಿಂದ ಭರ್ಜರಿ ಆಟದ ನಿರೀಕ್ಷೆಯಲ್ಲಿ ಹೈದರಾಬಾದ್‌ ಇದೆ.
ತಂಡದ ಬೌಲಿಂಗ್‌ ಪಡೆ ಉತ್ತಮ ವಾಗಿದೆ. ವಾಷಿಂಗ್ಟನ್‌ ಸುಂದರ್‌, ಮಾಯಾಂಕ್‌ ಮಾರ್ಕೆಂಡೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಮಾರ್ಕೆಂಡೆ ಈ ಹಿಂದಿನ ಪಂದ್ಯದಲ್ಲಿ 15 ರನ್ನಿಗೆ 4 ವಿಕೆಟ್‌ ಹಾರಿಸಿದ ಸಾಧನೆ ಮಾಡಿದ್ದರು. ಭುವನೇಶ್ವರ್‌ ಕುಮಾರ್‌ ಮತ್ತು ಮಾರ್ಕೊ ಜಾನ್ಸೆನ್‌ ವೇಗದ ದಾಳಿಯ ನೇತೃತ್ವ ವಹಿಸಲಿದ್ದಾರೆ.

ಟಾಪ್ ನ್ಯೂಸ್

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Tamil film Maharaja to be released in China on November 29

Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.