Cattle;ಬೇಸಗೆ ಧಗೆ; ಜಾನುವಾರುಗಳಿಗೆ ಸುಸ್ತು-ಸಂಕಟ
Team Udayavani, Apr 14, 2023, 3:54 PM IST
ಉಡುಪಿ: ಚರ್ಮಗಂಟು ರೋಗ ಇಳಿಮುಖ ವಾಗಿದ್ದು ಹೈನುಗಾರರು ಚೇತರಿಸಿ ಕೊಳ್ಳುವಷ್ಟರಲ್ಲಿ ಬಿಸಿಲ ಬೇಗೆ ಇನ್ನಷ್ಟು ಸಮಸ್ಯೆ ತಂದೊಡ್ಡುತ್ತಿದೆ.
ಜಿಲ್ಲೆಯಲ್ಲಿ ಬೇಸಗೆ ಧಗೆ ಪ್ರತಿಕೂಲ ಹವಾಮಾನ ಪರಿಣಾಮ ಜಾನುವಾರುಗಳು ಸಂಕಟಪಡು ವಂತಾಗಿದೆ. ಬಹುತೇಕ ಹಸುಗಳು ಬೇಸಗೆ ಬಿಸಿಲಿನಿಂದ ಬಸವಳಿಯುತ್ತಿದ್ದು, ಅನಾರೋಗ್ಯದಿಂದ ವರ್ತಿಸುತ್ತಿದೆ. ಕೆಲವು ಹಸುಗಳು ಕುಳಿತಲ್ಲಿಯೇ ಇದ್ದು ಮೇಲೆ ಎದ್ದೇಳಲು, ಓಡಾಡಲು ಆಗುತ್ತಿಲ್ಲ, ಒಟ್ಟಾರೆ ಬಹುತೇಕ ಜಾನುವಾರುಗಳು ಬಿಸಿಲ ಪರಿಣಾಮ ಸುಸ್ತು ಸಂಕಟದಿಂದ ನರಳಾಡುತ್ತಿವೆ. ಬಿಸಿಲಿನ ತಾಪದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಪಶು ಸಂಗೋಪನೆ ಇಲಾಖೆ ಹೈನು ಗಾರರಿಗೆ ಮಾರ್ಗಸೂಚಿ ಹೊರಡಿಸಿದೆ.
ಮುಂಜಾನೆ, ಸಾಯಂಕಾಲ ಮಾತ್ರ ಮೇಯಿಸಲು ಬಿಡಬೇಕು. ಮಧ್ಯಾಹ್ನ ಸಮಯದಲ್ಲಿ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಬೇಕು. ರಾಸುಗಳಿಗೆ ಪೌಷ್ಟಿಕ ಆಹಾರ, ಹಸುರು ಹುಲ್ಲು ನೀಡಬೇಕು. ದೇಹದ ಉಷ್ಣತೆಯನ್ನು ಕಾಪಾಡಲು ಗೋಣಿಚೀಲವನ್ನು ನೀರಲ್ಲಿ ತೋಯಿಸಿ ಜಾನುವಾರುಗಳ ಮೈಮೇಲೆ ಹಾಕಬೇಕು ಎಂಬುದು ಪಶುವೈದ್ಯರ ಸಲಹೆಯಾಗಿದೆ.
ನಿರ್ಜಲೀಕರಣ ಸಮಸ್ಯೆ
ಬೇಸಗೆ ಅಧಿಕ ತಾಪಮಾನ ದಿಂದ ಮನುಷ್ಯರಂತೆ ಜಾನು ವಾರುಗಳಲ್ಲಿಯೂ ನಿರ್ಜಲೀಕರಣ ಸಮಸ್ಯೆ ಸಂಭವಿಸುತ್ತದೆ. ಇದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ತೀವ್ರ ಸುಸ್ತು ಅನುಭವಿಸುತ್ತವೆ. ದಿನಕ್ಕೆ 2ರಿಂದ 3 ಸಲ ಶುದ್ಧವಾದ ನೀರನ್ನು ಕುಡಿಸಬೇಕು. ಬಿಸಿಲಿನಲ್ಲಿ ಜಾಸ್ತಿ ಓಡಾಡಲು ಬಿಡಬಾರದು. ದಿನಕ್ಕೆ ಒಂದರಿಂದ ಎರಡು ಸಲ ಮೈ ತೊಳೆಯಬೇಕು ಎಂದು ಪಶುವೈದ್ಯರು ಸಲಹೆ ನೀಡಿದ್ದಾರೆ.
ಚರ್ಮಗಂಟು ರೋಗ ಶೂನ್ಯಕ್ಕೆ ಇಳಿಕೆ
ಪ್ರಸ್ತುತ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಶೂನ್ಯಕ್ಕೆ ತಲುಪಿದ್ದು ಹೈನುಗಾರರು ನಿಟ್ಟುಸಿರು ಬಿಡುವಂತಾಗಿದೆ. ವೈದ್ಯರು, ಸಿಬಂದಿ ಕೊರತೆ ನಡುವೆಯೂ ಜಿಲ್ಲೆಯಲ್ಲಿ 2.27 ಲಕ್ಷ ಜಾನುವಾರುಗಳಿಗೆ ಬೃಹತ್ ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ಶೇ.89 ಗುರಿ ಸಾಧಿಸಲಾಗಿದೆ. ಪರಿಣಾಮ ಚರ್ಮಗಂಟು ರೋಗದ ಆತಂಕ ದೂರವಾಗಿದೆ. ರೋಗದಿಂದ 91 ಹಸು, ಕರುಗಳು ಮೃತಪಟ್ಟಿವೆ. ಜಿಲ್ಲೆಯಲ್ಲಿ 6,375 ಜಾನುವಾರುಗಳಿಗೆ ರೋಗ ಬಾಧಿಸಿದ್ದು, 6,218 ಜಾನುವಾರುಗಳು ಗುಣಮುಖ ಹೊಂದಿದೆ. ಜಿಲ್ಲೆಯಲ್ಲಿ 20,018 ಲಸಿಕೆ ದಾಸ್ತಾನು ಇರಿಸಲಾಗಿದೆ.
ಆತಂಕ ಪಡುವ ಅಗತ್ಯವಿಲ್ಲ
ಬಿಸಿಲ ತಾಪಕ್ಕೆ ಕೆಲವು ಜಾನುವಾರುಗಳಲ್ಲಿ ಸುಸ್ತು, ಬಸವಳಿಯುವ ಲಕ್ಷಣ ಕಂಡು ಬರುತ್ತದೆ. ಜಿಲ್ಲೆಯಲ್ಲಿ ಗಂಭೀರ ಸಮಸ್ಯೆ ಎದುರಾಗಿಲ್ಲ. ನೆರಳು ವಾತಾವರಣದಲ್ಲಿ ಜಾನುವಾರುಗಳನ್ನು ಬಿಡಬೇಕು, ಶುದ್ಧನೀರು ಕುಡಿಸಬೇಕು. ಅವುಗಳ ಆಹಾರ ಕ್ರಮದ ಬಗ್ಗೆಯೂ ನಿಗಾ ವಹಿಸಬೇಕು. ಬಿಸಿಲಿನ ತಾಪದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಇಲಾಖೆ ನೀಡಿರುವ ಸಲಹೆಗಳನ್ನು ಪಾಲಿಸಬೇಕು. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿಗೆ ಸಮಸ್ಯೆ ಇಲ್ಲ. ಚರ್ಮಗಂಟು ರೋಗ ಶೂನ್ಯಕ್ಕೆ ಇಳಿದಿದೆ.
– ಡಾ| ಶಂಕರ್ ಶೆಟ್ಟಿ, ಉಪ ನಿರ್ದೇಶಕ, ಪಶು ಸಂಗೋಪನೆ ಇಲಾಖೆ
– ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.