ಅಣ್ಣ-ತಮ್ಮ; ಮಾವ-ಅಳಿಯ..!: Election ಅಖಾಡಕ್ಕೆ ರೆಡಿ

ರಾಜ್ಯದ ಗಮನ ಸೆಳೆದ ಕ್ಷೇತ್ರ... ಮತದಾರನೇ ಸೋಲ್ತಾನೇನೋ ಎಂಬ ಮಾತು...

Team Udayavani, Apr 14, 2023, 6:01 PM IST

1-sadssad

ಬಾಗಲಕೋಟೆ : ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಸವನಾಡು ಬಾಗಲಕೋಟೆ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆಯಲಿದೆ. ಚುನಾವಣೆಯಲ್ಲಿ ಅಣ್ಣನಿಗೆ ತಮ್ಮ ಬಂಡಾಯವೆದ್ದರೆ, ಮಾವನಿಗೆ ಅಳಿಯ ತೊಡೆ ತಟ್ಟಲು ಸಜ್ಜಾಗಿದ್ದಾರೆ.

ಹೌದು, ಚುನಾವಣೆ ಅಂದಾಕ್ಷಣ, ದಾಯಾದಿಗಳು ಸಹೋದರರು, ಸಹೋದರರು ದಾಯಾದಿಗಳಾಗುವುದು ಸಹಜ. ತಂದೆ-ಮಗ, ಅಣ್ಣ-ತಮ್ಮ ಪರಸ್ಪರ ವಿರುದ್ಧವಾಗಿ ಚುನಾವಣೆಗೆ ಸ್ಪರ್ಧಿಸುವುದು ವಿರಳ. ಆದರೆ, ಬಾಗಲಕೋಟೆಯಲ್ಲಿ ಅಣ್ಣ-ತಮ್ಮ ಹಾಗೂ ಮಾವ-ಅಳಿಯ ಸ್ಪರ್ಧೆಗೆ ಸಜ್ಜಾಗಿದ್ದಾರೆ.

ಒಂದೇ ಕ್ಷೇತ್ರದಲ್ಲಿ ಈ ವಿಶೇಷ
ಸಹೋದರರು ಬೇರೆ ಬೇರೆ ಕ್ಷೇತ್ರದಲ್ಲಿ, ಬೇರೆ ಬೇರೆ ಪಕ್ಷದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ. ಕೆಲವೆಡೆ ಪರಸ್ಪರ ವಿರುದ್ಧವಾಗಿಯೂ ಸ್ಪರ್ಧಿಸಿದ ಉದಾಹರಣೆಗಳಿವೆ. ಆದರೆ, ಬಾಗಲಕೋಟೆ ಕ್ಷೇತ್ರದಲ್ಲಿ ಈ ಬಾರಿ, ಅಣ್ಣನ ವಿರುದ್ಧ ತಮ್ಮ ಸ್ಪರ್ಧೆ ಮಾಡಿದರೆ, ಮಾವನ ವಿರುದ್ಧ ಅಳಿಯ ಸ್ಪರ್ಧೆ ಮಾಡುತ್ತಿದ್ದಾರೆ.

ಅಣ್ಣ-ತಮ್ಮ ಸ್ಪರ್ಧೆ
ಬಾಗಲಕೋಟೆಯ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಡಾ|ವೀರಣ್ಣ ಚರಂತಿಮಠ ಅವರ ವಿರುದ್ಧ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ, ಚುನಾವಣೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಎ.17ರಂದು ನಾಮಪತ್ರ ಸಲ್ಲಿಸುವುದಾಗಿಯೂ ಹೇಳಿದ್ದಾರೆ. ಚರಂತಿಮಠ ಕುಟುಂಬದ ವೀರಣ್ಣ ಚರಂತಿಮಠ ಹಿರಿಯರಾಗಿದ್ದು, ಒಟ್ಟು ಮೂವರು ಸಹೋದರರು, ಇಬ್ಬರು ಸಹೋದರಿಯರಿದ್ದಾರೆ. ಕೊನೆಯ ಸಹೋದರ ಮಲ್ಲಿಕಾರ್ಜುನ ಚರಂತಿಮಠ, ಖಾಸಾ ಅಣ್ಣನ ವಿರುದ್ಧ ಬಹಿರಂಗ ಸಮರಕ್ಕೆ ನಿಂತಿದ್ದಾರೆ. ಇದೇ ಮಲ್ಲಿಕಾರ್ಜುನ ಚರಂತಿಮಠರು, ಹಿಂದೆ ನಾಲ್ಕೈದು ಚುನಾವಣೆಯಲ್ಲಿ ಅಣ್ಣನ ಗೆಲುವಿಗಾಗಿ ಹಳ್ಳಿ ಹಳ್ಳಿಗೆ ತಿರುಗಾಡಿ ಪ್ರಚಾರ ಮಾಡಿದವರು. ನಮ್ಮಣ್ಣ ಬಿಜೆಪಿ ಪಕ್ಷವನ್ನು, ಬಾಗಲಕೋಟೆಯ ಪ್ರತಿಷ್ಠಿತ ಬಿವಿವಿ ಸಂಘವನ್ನು ತಮ್ಮ ಸ್ವಂತ ಆಸ್ತಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಅವರಿಗಾಗಿ ದುಡಿದ ಕಾರ್ಯಕರ್ತರನ್ನು ಕಾಲಕಸ ಮಾಡಿದ್ದಾರೆ ಎಂಬುದು ತಮ್ಮನ ಆರೋಪ.

ಇನ್ನು ಕೌಟುಂಬಿಕ ವಿಷಯದ ಭಿನ್ನಮತ, ರಾಜಕೀಯಕ್ಕೆ ತರುವುದು ಸರಿಯಲ್ಲ ಎಂಬುದು ಅಣ್ಣನ ಬೆಂಬಲಿಗರ ಅನಿಸಿಕೆ. ಒಟ್ಟಾರೆ, ಬಾಗಲಕೋಟೆಯಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ, ಹಾಲಿ ಶಾಸಹಕರ ಸಹೋದರನೇ ಸ್ಪರ್ಧೆಗಿಳಿದಿದ್ದಾರೆ. ಸಹೋದರರ ಸವಾಲ್, ಬಾಗಲಕೋಟೆಯ ಜನರಿಗೆ ಕುತೂಹಲ ಕೆರಳಿಸುತ್ತಲೇ ಇದೆ.

ಮಾವನ ವಿರುದ್ಧ ಅಳಿಯ
ಕಾಂಗ್ರೆಸ್‌ನಲ್ಲೂ ಮಾವ-ಅಳಿಯ ಪರಸ್ಪರ ಎದುರಾಳಿಗಳಾಗಿ ರಾಜಕೀಯ ಅಖಾಡಕ್ಕಿಳಿಲು ಸಜ್ಜಾಗಿದ್ದಾರೆ. ಕಾಂಗ್ರೆಸ್‌ನಿಂದ ಬಾಗಲಕೋಟೆ ಕ್ಷೇತ್ರಕ್ಕೆ ಮಾಜಿ ಸಚಿವ ಎಚ್.ವೈ. ಮೇಟಿಗೆ ಟಿಕೆಟ್ ನೀಡಿದ್ದು, ಟಿಕೆಟ್‌ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದ, ಸಂಬಂಧದಲ್ಲಿ ಮೇಟಿ ಅವರ ಅಳಿಯ ಡಾ|ದೇವರಾಜ ಪಾಟೀಲ, ಜೆಡಿಎಸ್ ಸೇರ್ಪಡೆಗೊಂಡಿದ್ದು, ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಕಳೆದ 2008ರಿಂದ ಪಕ್ಷಕ್ಕಾಗಿ, ಮೇಟಿ ಅವರಿಗಾಗಿ ದುಡಿದ್ದು, ಎರಡು ಬಾರಿ ಟಿಕೆಟ್ ಕೊಟ್ಟು ಕಸಿದುಕೊಂಡಿದ್ದಾರೆ. ನಾನು ರಾಜಕೀಯ ಗುರುಗಳು ಎಂದು ಭಾವಿಸಿದವರೇ ನನಗೆ ಅನ್ಯಾಯ ಮಾಡಿದ್ದಾರೆ. ಸ್ವಾಭಿಮಾನಿ ಕಾರ್ಯಕರ್ತರೊಂದಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಮೇಟಿ ಅವರ ಅಳಿಯ ಡಾ|ಪಾಟೀಲ ಹೇಳಿಕೊಂಡಿದ್ದಾರೆ.

ಒಟ್ಟಾರೆ, ಈ ಬಾರಿ 224 ಕ್ಷೇತ್ರಗಳಲ್ಲಿ ಬಾಗಲಕೋಟೆ ಕ್ಷೇತ್ರದ ಚುನಾವಣೆ ಮಾತ್ರ ರಂಗೇರಲಿದೆ. ಒಂದೆಡೆ ಸಹೋದರರ ಸವಾಲ್ ನಡೆದರೆ, ಇನ್ನೊಂದೆಡೆ ಮಾವ-ಅಳಿಯ ರಾಜಕೀಯ ಕುಸ್ತಿ ನಡೆಯಲಿದೆ. ನಾಲ್ವರೂ, ಈ ಬಾರಿ ನಾನೇ ಗೆಲ್ಲೋದು ಎನ್ನುತ್ತಿದ್ದಾರೆ. ಮೇ 10ರ ಬಳಿಕ ಮತದಾರನೇ ಸೋಲ್ತಾನೇನೋ ಎಂಬ ಮಾತು ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ.

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

7-sirsi

ತುಂಬಿ‌ ಹರಿಯುತ್ತಿರುವ ಚಂಡಿಕಾ‌ನದಿ‌;ಶಿರಸಿಯಿಂದ ತೆರಳುವ ವಾಹನಗಳಿಗೆ ಬದಲಿ ‌ಮಾರ್ಗ ವ್ಯವಸ್ಥೆ

Ayodhya Ram Mandir: ಅಯೋಧ್ಯೆ ಅರ್ಚಕರಿಗೆ ವಸ್ತ್ರ ಸಂಹಿತೆ, ಮೊಬೈಲ್‌ ಬಳಕೆಗೂ ನಿಷೇಧ

Ayodhya Ram Mandir: ಅಯೋಧ್ಯೆ ಅರ್ಚಕರಿಗೆ ವಸ್ತ್ರ ಸಂಹಿತೆ, ಮೊಬೈಲ್‌ ಬಳಕೆಗೂ ನಿಷೇಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Plastic ತ್ಯಾಜ್ಯ ಮನುಕುಲಕ್ಕೆ ಮಾರಕ: ಫ್ರಾನ್ಸ್ ದೇಶದ ವಿದ್ಯಾರ್ಥಿ ಸೋರೇನ್‌

Plastic ತ್ಯಾಜ್ಯ ಮನುಕುಲಕ್ಕೆ ಮಾರಕ: ಫ್ರಾನ್ಸ್ ದೇಶದ ವಿದ್ಯಾರ್ಥಿ ಸೋರೇನ್‌

Rabakavi

Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್

Herbal: ಪಂಕಜ ಕಸ್ತೂರಿ ಹರ್ಬಲ್‌ ಗೆ ಅತ್ತ್ಯುತ್ತಮ ಹೆಲ್ತ್ ಕೇರ್‌ ಬ್ರ್ಯಾಂಡ್‌ ಮನ್ನಣೆ

Herbal: ಪಂಕಜ ಕಸ್ತೂರಿ ಹರ್ಬಲ್‌ ಗೆ ಅತ್ತ್ಯುತ್ತಮ ಹೆಲ್ತ್ ಕೇರ್‌ ಬ್ರ್ಯಾಂಡ್‌ ಮನ್ನಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.