IPL 2023: ಬೆಂಗಳೂರಿಗೆ ಇಂದು ಡೆಲ್ಲಿ ಸವಾಲು

ನಾಲ್ಕೂ ಪಂದ್ಯಗಳನ್ನು ಸೋತಿರುವ ಕ್ಯಾಪಿಟಲ್ಸ್‌ಗೆ ಗೆಲ್ಲಲೇಬೇಕಾದ ಅನಿವಾರ್ಯತೆ

Team Udayavani, Apr 15, 2023, 7:03 AM IST

rcb dc

ಬೆಂಗಳೂರು: ಹಿಂದಿನ ಪಂದ್ಯದಲ್ಲಿ ಇನ್ನೂರಷ್ಟು ರನ್‌ ಪೇರಿಸಿಯೂ ಸೋತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಶ್ರೀಲಂಕಾ ಸ್ಪಿನ್ನರ್‌ ವನಿಂದು ಹಸರಂಗ ಬಲ ತುಂಬಲಿದ್ದಾರೆ ಎಂಬ ಆಶಾವಾದವೊಂದು ಮೂಡಿದೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಐಪಿಎಲ್‌ ಮುಖಾಮುಖೀ ಶನಿವಾರ ಮಧ್ಯಾಹ್ನ “ಎಂ.ಚಿನ್ನಸ್ವಾಮಿ ಮೈದಾನ’ದಲ್ಲಿ ಕಾವೇರಿಸಿಕೊಳ್ಳಲಿದೆ.

ಮುಂಬೈ ವಿರುದ್ಧ 8 ವಿಕೆಟ್‌ಗಳ ಜಯದೊಂದಿಗೆ ಪ್ರಸಕ್ತ ಋತುವನ್ನು ಅಬ್ಬರದಿಂದ ಆರಂಭಿಸಿದ ಆರ್‌ಸಿಬಿ, ಉಳಿದೆರಡು ಪಂದ್ಯಗಳಲ್ಲಿ ಗೆಲುವಿನ ಮುಖವನ್ನು ಕಂಡಿಲ್ಲ. ಕೆಕೆಆರ್‌ ವಿರುದ್ಧ “ಈಡನ್‌ ಗಾರ್ಡನ್ಸ್‌”ನಲ್ಲಿ 81 ರನ್ನುಗಳ ಹೀನಾಯ ಸೋಲಿಗೆ ತುತ್ತಾಯಿತು. ಇಲ್ಲಿ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ ವೈಫ‌ಲ್ಯವೂ ಡು ಪ್ಲೆಸಿಸ್‌ ಬಳಗವನ್ನು ಕಾಡಿತು.

ಲಕ್ನೋ ಎದುರಿನ ತವರಿನ ಪಂದ್ಯವನ್ನು ತಾನಾಗಿ ಕೈಚೆಲ್ಲಿತು. ಅಂತಿಮ ಎಸೆತದಲ್ಲಿ ಒಂದು ವಿಕೆಟ್‌ ಸೋಲನುಭವಿಸಿ ಅಭಿಮಾನಿಗಳನ್ನು ನಿರಾಸೆಯಲ್ಲಿ ಕೆಡವಿತು. ವಿರಾಟ್‌ ಕೊಹ್ಲಿ, ಫಾ ಡು ಪ್ಲೆಸಿಸ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಸೇರಿಕೊಂಡು ಪೇರಿಸಿದ 212 ರನ್‌ ವ್ಯರ್ಥವಾಯಿತು. ಕಾರಣ ವಿವರಿಸಬೇಕಿಲ್ಲ, ಅದು ಬೌಲಿಂಗ್‌ ಬಡತನ. ಮುಖ್ಯವಾಗಿ ಸ್ಪಿನ್‌ ವಿಭಾಗದಲ್ಲಿ ಆರ್‌ಸಿಬಿ ಘೋರ ವೈಫ‌ಲ್ಯ ಕಾಣುತ್ತಿದೆ. ಕರ್ಣ ಶರ್ಮ ಮತ್ತು ಶಹಬಾಜ್‌ ಅಹ್ಮದ್‌ ಯಾವುದೇ ಪರಿಣಾಮ ಬೀರುತ್ತಿಲ್ಲ. ಇಂಥ ಸಂದರ್ಭದಲ್ಲೇ ವನಿಂದು ಹಸರಂಗ ಆಶಾಕಿರಣವಾಗಿ ಮೂಡಿಬಂದಿದ್ದಾರೆ. ತಂಡದ ಸ್ಪಿನ್‌ ಹಾಗೂ ಒಟ್ಟಾರೆ ಬೌಲಿಂಗ್‌ಗೆ ಇವರೊಂದು ಶಕ್ತಿಯಾಗಬಹುದೆಂಬ ನಿರೀಕ್ಷೆ ಎಲ್ಲರದೂ.

* ಬೆಂಗಳೂರು ವೈಫ‌ಲ್ಯಗಳು: ಬೆಂಗಳೂರಿನ ಹಿನ್ನಡೆಗೆ ಮುಖ್ಯ ಕಾರಣವೆಂದರೆ, ಈ 16 ವರ್ಷಗಳಲ್ಲಿ ಒಂದೇ ಒಂದು ಸಮತೋಲಿತ ತಂಡವನ್ನು ಕಟ್ಟಲು ವಿಫ‌ಲವಾದದ್ದು. ಈ ವರ್ಷದ್ದು ಮಿಡ್ಲ್ ಆರ್ಡರ್‌ ಹಾಗೂ ಬೌಲಿಂಗ್‌ ವಿಭಾಗದ ಸಮಸ್ಯೆ. ಜತೆಗೆ ಬ್ಯಾಟಿಂಗ್‌ ವಿಭಾಗವೂ ನಾಟಕೀಯ ಕುಸಿತ ಕಾಣುವುದಿದೆ. ಇದಕ್ಕೆ ಕೋಲ್ಕತ ವಿರುದ್ಧದ ಪಂದ್ಯವೇ ಸಾಕ್ಷಿ. 23ಕ್ಕೆ 3 ವಿಕೆಟ್‌, 105ಕ್ಕೆ 5 ವಿಕೆಟ್‌ ಎಂಬ ಸ್ಥಿತಿಯಲ್ಲಿದ್ದ ಲಕ್ನೋವನ್ನು ಉರುಳಿಸಲು ಸಾಧ್ಯವಾಗದಿದ್ದುದು ಆರ್‌ಸಿಬಿಯ ಬೌಲಿಂಗ್‌ ಸಂಕಟವನ್ನು ಸಾರುತ್ತದೆ.

ಮುಂಬೈ ಹಾಗೂ ಲಕ್ನೋ ವಿರುದ್ಧ ಆರ್‌ಸಿಬಿ ಬ್ಯಾಟಿಂಗ್‌ ಉತ್ತಮಮಟ್ಟದಲ್ಲೇ ಇತ್ತು. ಕ್ರಮವಾಗಿ 172 ಹಾಗೂ 212 ರನ್‌ ರಾಶಿ ಹಾಕಿತ್ತು. ಈ ಪಂದ್ಯಗಳಲ್ಲಿ ಉರುಳಿದ್ದು 2 ವಿಕೆಟ್‌ ಮಾತ್ರ. ಒಂದು ಚೇಸಿಂಗ್‌ ವೇಳೆ ದಾಖಲಾಯಿತು, ಇನ್ನೊಂದು ಮೊದಲು ಬ್ಯಾಟಿಂಗ್‌ ನಡೆಸಿದ ವೇಳೆ ಒಟ್ಟುಗೂಡಿತು. ಎರಡೂ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ, ಫಾ ಡು ಪ್ಲೆಸಿಸ್‌ ಅರ್ಧ ಶತಕ ಬಾರಿಸಿದರು. ಲಕ್ನೋ ವಿರುದ್ಧ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೂಡ ಈ ಸಾಲಿಗೆ ಸೇರ್ಪಡೆಗೊಂಡರು.
ಆದರೆ ಓಪನಿಂಗ್‌ ವೈಫ‌ಲ್ಯಕ್ಕೆ ಸಿಲುಕಿದಾಗ ಆರ್‌ಸಿಬಿಯ ಬ್ಯಾಟಿಂಗ್‌ ಅವಸ್ಥೆ ಗಂಭೀರವಾಗಿರಲಿದೆ ಎಂಬುದಕ್ಕೆ ಕೋಲ್ಕತ ಎದುರಿನ ಪಂದ್ಯ ಉತ್ತಮ ನಿದರ್ಶನ ಒದಗಿಸಿತು. 205 ರನ್‌ ಗಳಿಸಬೇಕಿದ್ದ ಆರ್‌ಸಿಬಿ 123ಕ್ಕೆ ಢಮಾರ್‌. ಒನ್‌ಡೌನ್‌ನಲ್ಲಿ ಕಾಣಿಸಿಕೊಂಡ ಮೈಕಲ್‌ ಬ್ರೇಸ್‌ವೆಲ್‌, ಸೂಕ್ತ ಬ್ಯಾಟರ್‌ಗಳಿಲ್ಲದ ಕಾರಣ ಬಡ್ತಿ ಪಡೆದು ಬಂದ ಹರ್ಷಲ್‌ ಪಟೇಲ್‌, ಶಹಬಾಜ್‌ ಅಹ್ಮದ್‌, ದಿನೇಶ್‌ ಕಾರ್ತಿಕ್‌ ಅನುಜ್‌ ರಾವತ್‌… ಎಲ್ಲರೂ ಬಂದಷ್ಟೇ ಬೇಗ ವಾಪಸಾದಾಗ ಆರ್‌ಸಿಬಿಯ ಬ್ಯಾಟಿಂಗ್‌ ಬಂಡವಾಳವನ್ನು ಬಿಚ್ಚಿಟ್ಟರು. ಈ ಪಂದ್ಯದಲ್ಲಿ ಕೊಹ್ಲಿ 21 ಹಾಗೂ ಡು ಪ್ಲೆಸಿಸ್‌ 23 ರನ್‌ ಮಾಡಿದ್ದರು.

ಲಕ್ನೋ ವಿರುದ್ಧ ಓಪನಿಂಗ್‌ ಕ್ಲಿಕ್‌ ಆದ್ದರಿಂದ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಯಿತು. ಇಲ್ಲಿ ದಿನೇಶ್‌ ಕಾರ್ತಿಕ್‌ಗೆ ಲಭಿಸಿದ್ದು ಒಂದೇ ಎಸೆತ, ಮಹಿಪಾಲ್‌ ಲೊನ್ರೋರ್‌ಗೆ ಕ್ರೀಸ್‌ ಇಳಿಯುವ ಅವಕಾಶ ಸಿಗಲಿಲ್ಲ. ಬ್ರೇಸ್‌ವೆಲ್‌ ಅವರನ್ನು ಕೈಬಿಡಲಾಗಿತ್ತು. ಡೆಲ್ಲಿ ವಿರುದ್ಧ ವನಿಂದು ಹಸರಂಗ ಅವರಿಗೆ ಡೇವಿಡ್‌ ವಿಲ್ಲಿ ಜಾಗ ಬಿಡಬಹುದು. ಹರ್ಷಲ್‌ ಪಟೇಲ್‌ ಬದಲು ಅವಿನಾಶ್‌ ಸಿಂಗ್‌ ಬೌಲಿಂಗ್‌ ದಾಳಿಗಿಳಿಯುವ ಸಾಧ್ಯತೆ ಇದೆ. ಒಂದು ಕಾಲದ ಡೆತ್‌ ಓವರ್‌ ಸ್ಪೆಷಲಿಸ್ಟ್‌ ಹರ್ಷಲ್‌ ಈಗ ಬಹಳ ದುಬಾರಿ ಆಗುತ್ತಿದ್ದಾರೆ.

* ಡೆಲ್ಲಿ ಬ್ಯಾಟಿಂಗ್‌ ಬರಗಾಲ: ಡೆಲ್ಲಿಯ ಸತತ ಸೋಲಿಗೆ ಬ್ಯಾಟಿಂಗ್‌ ಬರಗಾಲವೇ ಮುಖ್ಯ ಕಾರಣ. ಇಲ್ಲಿ ನಾಯಕ ಡೇವಿಡ್‌ ವಾರ್ನರ್‌ ಬಿಟ್ಟರೆ ರನ್‌ ಗಳಿಸುವುದು ಅಕ್ಷರ್‌ ಪಟೇಲ್‌ ಮಾತ್ರ. ಪೃಥ್ವಿ ಶಾ, ಮನೀಷ್‌ ಪಾಂಡೆ, ಯಶ್‌ ಧುಲ್‌, ಪೊವೆಲ್‌, ಲಲಿತ್‌ ಯಾದವ್‌ ಅವರ ಸತತ ವೈಫ‌ಲ್ಯ ತಂಡಕ್ಕೆ ಮುಳುವಾಗಿದೆ. 4 ಪಂದ್ಯಗಳಲ್ಲಿ ಡೆಲ್ಲಿ ದಾಖಲಿಸಿದ ಮೊತ್ತವನ್ನೇ ಗಮನಿಸಿ: 9ಕ್ಕೆ 143, 8ಕ್ಕೆ 162, 9ಕ್ಕೆ 142 ಮತ್ತು 172. ಮುಂಬೈ ಎದುರಿನ ಕಳೆದ ಪಂದ್ಯದಲ್ಲಿ ಮೊದಲ ಸಲ 170ರ ಗಡಿ ದಾಟಿತ್ತು.

ಬ್ಯಾಟಿಂಗ್‌ ಹೋಲಿಸಿದರೆ ಡೆಲ್ಲಿ ಬೌಲಿಂಗ್‌ ಪರವಾಗಿಲ್ಲ ಎಂಬ ಮಟ್ಟದಲ್ಲಿದೆ. ನೋರ್ಜೆ, ಮುಸ್ತಫಿಜುರ್‌, ಮುಕೇಶ್‌ ಕುಮಾರ್‌, ಕುಲದೀಪ್‌, ಅಕ್ಷರ್‌ ಪಟೇಲ್‌ ಅವರನ್ನೊಳಗೊಂಡಿರುವ ಬೌಲಿಂಗ್‌ ಪಡೆ ಆರ್‌ಸಿಬಿಗಿಂತ ಬಲಿಷ್ಠ. ಆದರೆ ಚಿನ್ನಸ್ವಾಮಿ ಟ್ರ್ಯಾಕ್‌ ಬ್ಯಾಟಿಂಗ್‌ ಸ್ವರ್ಗವಾಗಿರುವ ಕಾರಣ ಬೌಲರ್‌ಗಳ ಆಟ ನಡೆಯುವುದು ಅನುಮಾನ. ದುರಂತವೆಂದರೆ, ತವರಿನ ಕೋಟ್ಲಾ ಅಂಗಳದಲ್ಲೂ ಡೆಲ್ಲಿಗೆ ಗೆಲುವು ದಕ್ಕದೇ ಹೋದದ್ದು. 5ನೇ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯದೆ ಹೋದರೆ ಡೆಲ್ಲಿಗೆ ಉಳಿಗಾಲವಿಲ್ಲ ಎಂಬುದು ಸದ್ಯದ ಸ್ಥಿತಿ.

ಟಾಪ್ ನ್ಯೂಸ್

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.