ಗಡ್ಕರಿಗೆ ಬೆದರಿಕೆ ಹಾಕಿದ್ದವನಿಂದಲೇ ನನ್ನ ಹತ್ಯೆಗೂ ಸ್ಕೆಚ್‌:K.S. Eshwarappa

ಬೆದರಿಕೆಗೆ ಬಗ್ಗುವುದಿಲ್ಲ ಎಂದ ಮಾಜಿ ಸಚಿವ

Team Udayavani, Apr 15, 2023, 7:10 AM IST

eshwarappa

ಬಳ್ಳಾರಿ: ನನ್ನ ಕೊಲೆಗೆ ಯೋಜನೆ ರೂಪಿಸಲಾಗಿದ್ದು, ಜೈಲಿನಲ್ಲಿರುವ ಕೈದಿಯೊಬ್ಬ ನೀಡಿದ ಮಾಹಿತಿಯಿಂದ ಈ ವಿಷಯ ತಿಳಿದು ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ನಾನು ನಮ್ಮ ಮನೆ ದೇವರ ದರ್ಶನಕ್ಕೆಂದು ಬಳ್ಳಾರಿಗೆ ಬಂದಿದ್ದೆ. ಆದರೆ ಕೆಟ್ಟ ಸುದ್ದಿ ಕೇಳಬೇಕಾಯಿತು. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಜಯೇಶ್‌ ಪೂಜಾರಿ ಅಲಿಯಾಸ್‌ ಶಾಹಿದ್‌ ಶೇಖ್‌ ಎಂಬಾತ ನನ್ನ ಕೊಲೆಗೆ ಸ್ಕೆಚ್‌ ಹಾಕಿರುವ ವಿಚಾರವನ್ನು ಬಹಿರಂಗಪಡಿಸಿದ್ದಾನೆ ಎಂಬುದು ತಿಳಿದುಬಂದಿದೆ. ಈ ಕುರಿತು ಸಂಬಂಧಪಟ್ಟ ಉನ್ನತ ಪೊಲೀಸ್‌ ಅ ಧಿಕಾರಿಗಳು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಈ ಹಿಂದೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಬೆದರಿಕೆ ಹಾಕಿದ್ದವನೇ ಈಗ ನನ್ನ ಕೊಲೆಗೂ ಸ್ಕೆಚ್‌ ಹಾಕಿದ್ದಾನೆ. ಆರೋಪಿಗೆ ಪಿಎಫ್‌ಐನವರ ಬೆಂಬಲ ಇದೆ. ಗೃಹ ಸಚಿವ ಆರಗ ಜ್ಞಾನೇಂದ್ರ, ಹಿರಿಯ ಪೊಲೀಸ್‌ ಅ ಧಿಕಾರಿ ಜತೆಗೆ ಮಾತನಾಡಿದ್ದೇನೆ. ಆದರೆ ಹೆಚ್ಚಿನ ಭದ್ರತೆಗೆ ಅರ್ಜಿ ಹಾಕುವುದಿಲ್ಲ. ಸರಕಾರ ಕೊಡಬಹುದು. ಈ ಹಿಂದೆಯೂ ಕೊಲೆ ಬೆದರಿಕೆ ಬಂದಿತ್ತು. ಈ ವಿಚಾರ ಅ ಧಿವೇಶನದಲ್ಲಿ ಹೇಳಿದ್ದೆ. ಆಗ ಕಾಂಗ್ರೆಸ್‌ ಸರಕಾರವಿತ್ತು. ಭದ್ರತೆ ನೀಡಿದ್ದರು. ಈ ವಿಷಯದಲ್ಲಿ ನನಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಆದರೆ ಯಾವುದೇ ಬೆದರಿಕೆಗೂ ಬಗ್ಗುವುದಿಲ್ಲ. ಹಿಂದುತ್ವವಾದಿಗಳಿಗೆ ಬೆದರಿಕೆ ಸಾಮಾನ್ಯ. ನನ್ನ ನಿಲುವು ಬದಲಾಯಿಸುವುದಿಲ್ಲ. ಪೊಲೀಸರು ನನಗೆ ನೀಡಿದ ಮಾಹಿತಿ ಮಾಧ್ಯಮಗಳ ಜತೆಗೆ ಹಂಚಿಕೊಂಡಿದ್ದೇನೆ ಎಂದರು.

“ಮಗನಿಗೆ ಟಿಕೆಟ್‌ ಕೊಟ್ಟರೆ ಸಂತೋಷ’
ಹಿಂದಿನಿಂದಲೂ ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಸೂಚನೆಯನ್ನು ಯಾವಾಗಲೂ ಪಾಲಿಸಿದ್ದೇನೆ. ಈಗಲೂ ಪಕ್ಷ ಹೇಳಿದಂತೆಯೇ ಚುನಾವಣ ರಾಜಕೀಯದಿಂದ ನಿವೃತ್ತಿ ಪಡೆದಿದ್ದೇನೆ ಎಂದು ಕೆ.ಎಸ್‌. ಈಶ್ವರಪ್ಪ ಹೇಳಿದರು.

ಪಕ್ಷದ ವರಿಷ್ಠರು, ಬಿಜೆಪಿ ರಾಜ್ಯ ಚುನಾವಣ ಉಸ್ತುವಾರಿ ಧರ್ಮೇಂದ್ರ ಪ್ರಧಾನ ಕರೆ ಮಾಡಿ ಚುನಾವಣ ರಾಜಕೀಯ ಬೇಡ ಎಂದು ಹೇಳಿದರು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅವರು ಹೇಳಿದಂತೆ ಚುನಾವಣ ನಿವೃತ್ತಿ ಪತ್ರ ಬರೆದು ಕಳುಹಿಸಿದ್ದೇನೆ. ಜಗದೀಶ್‌ ಶೆಟ್ಟರ್‌ ಟಿಕೆಟ್‌ ವಿಚಾರವಾಗಿ ಪಟ್ಟು ಹಿಡಿದಿರುವ ವಿಷಯಕ್ಕೂ ನನಗೂ ಸಂಬಂಧ ಇಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಬೂತ್‌ ಮಟ್ಟದ ಕಾರ್ಯಕರ್ತನಾಗಿದ್ದ ನನ್ನನ್ನು ಉಪಮುಖ್ಯಮಂತ್ರಿ ಮಾಡಿದರು. ಈಗ ಪಕ್ಷದ ಕೆಲಸ ಮಾಡು ಎಂದಿದ್ದಾರೆ, ಮಾಡುತ್ತೇನೆ. ಮಗನಿಗೆ ಟಿಕೆಟ್‌ ಕೊಟ್ಟರೆ ಸಂತೋಷ. ಬಿಜೆಪಿ ಅಧಿ ಕಾರಕ್ಕೆ ಬರಲು ಯಾವ ಕೆಲಸ ಮಾಡುವುದಕ್ಕೂ ಸಿದ್ಧ. ಹಿಂದೆ ಪಕ್ಷಕ್ಕೆ ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. ಆಕಾಂಕ್ಷಿಗಳು ಹೆಚ್ಚಾಗಿರುವುದು ಗಮನಿಸಿದರೆ ಪಕ್ಷ ಬೆಳೆದಿರುವುದು ಗೊತ್ತಾಗುತ್ತದೆ. ಟಿಕೆಟ್‌ಗಾಗಿ ಕೆಲವರು ಈಗ ಹಠಕ್ಕೆ ಬಿದ್ದಿದ್ದಾರೆ. ಬಿಜೆಪಿ ಬಿಟ್ಟು ಹೋಗುತ್ತಾರೆ ಅಂದರೆ ಅವರು ಬಿಜೆಪಿಗೆ ಯೋಗ್ಯರಲ್ಲ ಎಂದೇ ಅರ್ಥ ಎನ್ನುವ ಮೂಲಕ ಪರೋಕ್ಷವಾಗಿ ಲಕ್ಷ್ಮಣ ಸವದಿಗೆ ಟಾಂಗ್‌ ಕೊಟ್ಟರು.

ಟಾಪ್ ನ್ಯೂಸ್

1-swee

Digital ಬಿಟ್ಟು ಮುದ್ರಿತ ಪಠ್ಯಪುಸ್ತಕ ಮಾದರಿಗೆ ಮರಳಿದ ಸ್ವೀಡನ್‌!

UCC

UCC ಕೈಪಿಡಿಗೆ ಉತ್ತರಾಖಂಡ ಒಪ್ಪಿಗೆ: ಶೀಘ್ರವೇ ಜಾರಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Aranthodu ಕಲ್ಲುಗುಂಡಿ: ಮಟ್ಕಾ ಅಡ್ಡೆಗೆ ಪೊಲೀಸರ ದಾಳಿ;  ಓರ್ವನ ಬಂಧನ

Aranthodu ಕಲ್ಲುಗುಂಡಿ: ಮಟ್ಕಾ ಅಡ್ಡೆಗೆ ಪೊಲೀಸರ ದಾಳಿ; ಓರ್ವನ ಬಂಧನ

Karkala: ಎಂಬಿಎ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹ*ತ್ಯೆ

Karkala: ಎಂಬಿಎ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹ*ತ್ಯೆ

Ankola: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Ankola: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

1-swee

Digital ಬಿಟ್ಟು ಮುದ್ರಿತ ಪಠ್ಯಪುಸ್ತಕ ಮಾದರಿಗೆ ಮರಳಿದ ಸ್ವೀಡನ್‌!

UCC

UCC ಕೈಪಿಡಿಗೆ ಉತ್ತರಾಖಂಡ ಒಪ್ಪಿಗೆ: ಶೀಘ್ರವೇ ಜಾರಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

1-telanga

America; ಗುಂಡು ಹಾರಿಸಿ ತೆಲಂಗಾಣದ ಯುವಕನ ಹ*ತ್ಯೆ

Kasaragod ಬದ್ಧತೆ, ಸೇವಾ ಮನೋಭಾವದಿಂದ ಯಶಸ್ಸು: ಎಡನೀರು ಸ್ವಾಮೀಜಿ

Kasaragod ಬದ್ಧತೆ, ಸೇವಾ ಮನೋಭಾವದಿಂದ ಯಶಸ್ಸು: ಎಡನೀರು ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.