Juhu to Andheri: ಮೊಬೈಲ್ ಕದ್ದು ಪರಾರಿಯಾದ ಕಳ್ಳನನ್ನು ಬೆನ್ನಟ್ಟಿ ಸೆರೆಹಿಡಿದ ಯುವತಿ…
ಬೈಕ್ ಸವಾರನ ಬಳಿ ತನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಬಿಡುವಂತೆ ವಿನಂತಿಸಿಕೊಂಡಿದ್ದಳು.
Team Udayavani, Apr 15, 2023, 11:08 AM IST
ಮುಂಬೈ:ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಯುವತಿಯೊಬ್ಬಳು ಜುಹೂವಿನಿಂದ ಅಂಧೇರಿಯವರೆಗೆ ಬೆನ್ನಟ್ಟಿ ಹೋಗಿ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮುಂಬೈನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:Uttar Pradesh: ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತ್ಯು ; 8 ಮಂದಿಗೆ ಗಾಯ
27 ವರ್ಷದ ಡೇರ್ ಡೆವಿಲ್ ಗ್ರಾಫಿಕ್ ಡಿಸೈನರ್ ನೇಜಲ್ ಶುಕ್ಲಾ ಕಾಂದಿವಿಲಿ ನಿವಾಸಿಯಾಗಿದ್ದಾರೆ. ಆರೋಪಿಯನ್ನು ಮೊಹ್ಸಿನ್ ಮೊಹ್ಮದ್ ರಫೀಕ್ ಖಾನ್ (25ವರ್ಷ) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಬುಧವಾರ ಕೆಲಸದ ಮುಗಿದ ನಂತರ ರಾತ್ರಿ 8ಗಂಟೆಗೆ ನೇಜಲ್ ಜುಹೂವಿನ ಕಾಪ್ಸ್ ವಾಡಿ ಬಸ್ ನಿಲ್ದಾಣದಲ್ಲಿ ಸಾಂತಾಕ್ರೂಸ್ ರೈಲ್ವೆ ನಿಲ್ದಾಣದತ್ತ ಹೋಗುವ ಬಸ್ ಗಾಗಿ ಕಾಯುತ್ತಾ ನಿಂತಿದ್ದರು. ಈ ಸಂದರ್ಭದಲ್ಲಿ ನೇಜಲ್ ಮೊಬೈಲ್ ನಲ್ಲಿ ಯೂಟ್ಯೂಬ್ ವಿಡಿಯೋ ನೋಡುತ್ತಿದ್ದರು. ಆಗ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ.
ಆದರೆ ವಿಚಲಿತಗೊಳ್ಳದ ನೇಜಲ್, ತಕ್ಷಣವೇ ಆಟೋ ರಿಕ್ಷಾದಲ್ಲಿ ಆತನನ್ನು ಬೆನ್ನಟ್ಟಿದ್ದಳು. ಆದರೆ ಬೈಕ್ ನಲ್ಲಿದ್ದ ಕಳ್ಳನನ್ನು ಹಿಡಿಯಲು ಸಾಧ್ಯವಾಗುವುದಿಲ್ಲ ಎಂದು ತಿಳಿದ ನೇಜಲ್, ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರರೊಬ್ಬರ ಬಳಿ ವಿಷಯ ತಿಳಿಸಿ ಸಹಾಯ ಮಾಡುವಂತೆ ಕೇಳಿಕೊಂಡು, ತಾನೂ ಆತನ ಹಿಂದೆ ಕುಳಿತು ಬೆನ್ನಟ್ಟಿದ್ದಳು.
ಜುಹೂವಿನಿಂದ ಅಂಧೇರಿಯವರೆಗೆ ಸುಮಾರು 7 ನಿಮಿಷಗಳ ಕಾಲ ಮೊಬೈಲ್ ಕಳ್ಳನನ್ನು ಬೆನ್ನಟ್ಟಿ ಹೋಗಿದ್ದರೂ ಕೂಡಾ, ಮೊಬೈಲ್ ಕಳ್ಳ ಅದ್ಯಾವುದೋ ಸಂಧಿಯಲ್ಲಿ ಹೋಗಿ ತಪ್ಪಿಸಿಕೊಂಡು ಬಿಟ್ಟಿದ್ದ. ಕೊನೆಗೆ ನಿರಾಸೆಗೊಂಡ ನೇಜಲ್, ಬೈಕ್ ಸವಾರನ ಬಳಿ ತನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಬಿಡುವಂತೆ ವಿನಂತಿಸಿಕೊಂಡಿದ್ದಳು.
ಪೊಲೀಸ್ ಠಾಣೆಯತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಮೊಬೈಲ್ ಕಳ್ಳನನ್ನು ನೇಜಲ್ ಮತ್ತೆ ಗಮನಿಸಿದ್ದಳು. ಕಿರಿದಾದ ದಾರಿಯಲ್ಲಿ ಬೈಕ್ ನಿಲ್ಲಿಸಿಕೊಂಡಿರುವುದನ್ನು ಗಮನಿಸಿದ ನೇಜಲ್ ಹಾಗೂ ಬೈಕ್ ಸವಾರ ನಿಧಾನವಾಗಿ ಹಿಂಬದಿಯಿಂದ ಹೋಗಿ ಕಾಲರ್ ಹಿಡಿದುಕೊಂಡುಬಿಟ್ಟಿದ್ದರು. ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ, ಆತನ ಕಿಸೆಯನ್ನು ತಪಾಸಣೆ ಮಾಡಿದ್ದರು. ಆದರೆ ಆತ ಅಷ್ಟರಲ್ಲೇ ಮೊಬೈಲ್ ಫೋನ್ ಅನ್ನು ತನ್ನ ಗ್ಯಾಂಗ್ ಸದಸ್ಯರಿಗೆ ತಲುಪಿಸಿಬಿಟ್ಟಿದ್ದ. ಕೊನೆಗೂ ಆತನನ್ನು ಡಿಎನ್ ನಗರ್ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಿರುವುದಾಗಿ ನೇಜಲ್ ತಿಳಿಸಿದ್ದಾರೆ.
ನಾನು ನನ್ನ ಮೊಬೈಲ್ ಫೋನ್ ಕಳೆದುಕೊಂಡಿರುವುದು ಬೇಸರ ತಂದಿದೆ. ಆದರೆ ಆರೋಪಿಯನ್ನು ಸೆರೆಹಿಡಿದ ಬಗ್ಗೆ ಖುಷಿ ಇದೆ. ಅಷ್ಟೇ ಅಲ್ಲ ಆತ ಜೈಲಿನಲ್ಲಿದ್ದಾನೆ. ಪೊಲೀಸರು ಆತನ ಮೇಲೆ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ನನ್ನ ಮೊಬೈಲ್ ಫೋನ್ ನನಗೆ ಮರಳಿ ಸಿಗಬಹುದು ಎಂಬ ವಿಶ್ವಾಸವಿದೆ. ಏತನ್ಮಧ್ಯೆ ನಾನು ಹೊಸ ಮೊಬೈಲ್ ಖರೀದಿಸಿದ್ದೇನೆ ಎಂದು ನೇಜಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.