10 ಸೆಕೆಂಡ್‌ ಲೈವ್‌ ತಡ: ಫೀಲ್ಡ್ ನಲ್ಲೇ ಮ್ಯಾಚ್‌ ನೋಡಿ ಬೆಟ್ಟಿಂಗ್‌

Team Udayavani, Apr 15, 2023, 3:39 PM IST

10 ಸೆಕೆಂಡ್‌ ಲೈವ್‌ ತಡ: ಫೀಲ್ಡ್ ನಲ್ಲೇ ಮ್ಯಾಚ್‌ ನೋಡಿ ಬೆಟ್ಟಿಂಗ್‌

ಬೆಂಗಳೂರು: ಐಪಿಎಲ್‌ ಶುರುವಾಗುತ್ತಿದ್ದಂತೆ ಬೆಟ್ಟಿಂಗ್‌ನ ಇನ್ನೊಂದು ಮುಖ ಅನಾವರಣ ಗೊಂಡಿದ್ದು, ಕೇವಲ 10 ಸೆಕೆಂಡ್‌ಗಳಲ್ಲಿ ಸಾವಿರಾರು ರೂ. ಜೇಬಿಗಿಳಿಸುತ್ತಿದ್ದ ಖತರ್ನಾಕ್‌ ಗ್ಯಾಂಗ್‌ನ ನಾಲ್ವರು ಆರೋಪಿಗಳು ಕಬ್ಬನ್‌ ಪಾರ್ಕ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹರಿಯಾಣ ಮೂಲದ ಅಮರ್‌ ಜಿತ್‌ ಸಿಂಗ್‌, ಮೋಹಿತ್‌ ಬಾತ್ರ, ದುಶ್ಯಂತ್‌ ಕುಮಾರ್‌ ಸೋನಿ , ವಿಷಂತ್‌ ಬಂಧಿತರು.

ಮೈದಾನದಲ್ಲಿ ನಡೆಯುವ ಕ್ರಿಕೆಟ್‌ ಪಂದ್ಯಕ್ಕೂ ಟೀವಿಯಲ್ಲಿ ನೇರಪ್ರಸಾರದ ಮೂಲಕ ತೋರಿಸುವ ಪಂದ್ಯಕ್ಕೂ 10 ಸೆಕೆಂಡ್‌ ಅಂತರ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳ ಗ್ಯಾಂಗ್‌ನ ಒಂದು ತಂಡ ಮೈದಾನದ ಒಳಗೆ ಹೋಗಿ ಐಪಿಎಲ್‌ ಪಂದ್ಯದ ಪ್ರತಿ ಬಾಲ್‌ ಕುರಿತು ಮೆಸೇಜ್‌ ಮೂಲಕ ದೇಶದ ವಿವಿಧೆಡೆ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ತಮ್ಮ ಗ್ಯಾಂಗ್‌ನ ಸಹಚರರಿಗೆ ಮಾಹಿತಿ ನೀಡುತ್ತಿತ್ತು. ಇವರು ಕೊಡುವ ಮಾಹಿತಿ ಆಧರಿಸಿ ಟೀವಿ ವೀಕ್ಷಿಸಿ ಬೆಟ್ಟಿಂಗ್‌ ಕಟ್ಟಲು ಮುಂದಾಗುವವರ ಜತೆಗೆ ಆರೋಪಿಗಳ ಗ್ಯಾಂಗ್‌ ನ ಇತರ ಸದಸ್ಯರು ಬೆಟ್ಟಿಂಗ್‌ ಮೂಲಕ ಲಕ್ಷಾಂತರ ರೂ. ಜೇಬಿಗಿಳಿಸುತ್ತಿದ್ದರು.

ದೇಶದ ಪ್ರತಿ ಕ್ರಿಕೆಟ್‌ ಪಂದ್ಯಕ್ಕೂ ಎಂಟ್ರಿ: ದೇಶದಲ್ಲಿ ಯಾವುದೇ ಮೈದಾನದಲ್ಲಿ ಕ್ರಿಕೆಟ್‌ ಪಂದ್ಯ ನಡೆದರೂ ಅಲ್ಲಿಗೆ ಬಂಧಿತ ಆರೋಪಿಗಳ ತಂಡವು ಎಂಟ್ರಿ ಕೊಡುತ್ತಿತ್ತು. ಮೈದಾನದಲ್ಲಿ ಕುಳಿತುಕೊಂಡು ಬೆಟ್ಟಿಂಗ್‌ ದಂಧೆ ನಡೆಸಿ, ಪಂದ್ಯ ಪ್ರಾರಂಭವಾದ ಸಮಯದಿಂದ ಮುಕ್ತಾಯಗೊಳ್ಳುವ ವೇಳೆ ಲಕ್ಷಾಂತರ ರೂ. ಸಂಪಾದಿಸುತ್ತಿತ್ತು. ಆರೋಪಿಗಳು ದೇಶದ ವಿವಿಧ ರಾಜ್ಯಗಳಲ್ಲಿ ತಮ್ಮ ಸಹಚರರನ್ನು ಹೊಂದಿದ್ದರು. ಬೆಟ್ಟಿಂಗ್‌ ಕಳ್ಳಾಟದಲ್ಲಿ ದೆಹಲಿಯಲ್ಲಿ ಆರೋಪಿಗಳ ಗ್ಯಾಂಗ್‌ ಹಲವು ಸದಸ್ಯರನ್ನು ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆರೋಪಿಗಳು ಹಲವು ವರ್ಷಗಳಿಂದ ದಂಧೆಯಲ್ಲಿ ತೊಡಗಿಸಿಕೊಂಡು ಇದುವರೆಗೆ ಕೋಟ್ಯಂತರ ರೂ. ವ್ಯವಹಾರ ನಡೆಸಿರುವ ಅನುಮಾನ ವ್ಯಕ್ತವಾಗಿದೆ.

ಮೈದಾನದಲ್ಲಿ ಮಫ್ತಿಯಲ್ಲಿ ಬಂದು ಗ್ಯಾಂಗ್‌ ಸೆರೆ ಹಿಡಿದ 30 ಪೊಲೀಸರ ಟೀಮ್‌ : ಆರೋಪಿಗಳ ಕೃತ್ಯದ ಬಗ್ಗೆ ಬಾತ್ಮೀದಾರರಿಂದ ಬಂದ ಸುಳಿವಿನ ಮೇರೆಗೆ 30 ಪೊಲೀಸ್‌ ಸಿಬ್ಬಂದಿ ಮಫ್ತಿಯಲ್ಲಿ ಮೈದಾನದಾದ್ಯಂತ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಕ್ರಿಕೆಟ್‌ ಪಂದ್ಯದ ಮದ್ಯದಲ್ಲಿ ಆಗಾಗ ಮೊಬೈಲ್‌ನಲ್ಲಿ ಹೆಚ್ಚು ಸಕ್ರಿಯವಾಗಿರುವವರು ಹಾಗೂ ಅನುಮಾನಾಸ್ಪದವಾಗಿ ಓಡಾಡುವವರ ಬಗ್ಗೆ ಪರಿಶೀಲಿಸಿದಾಗ ನಾಲ್ವರು ಆರೋಪಿಗಳು ಸಿಕ್ಕಿಬಿದ್ದಿದ್ದರು. ಅವರ ಮೊಬೈಲ್‌ ಪರಿಶೀಲಿಸಿದಾಗ ಕ್ರಿಕೆಟ್‌ ಬೆಟ್ಟಿಂಗ್‌ನ ವಿವಿಧ ಆ್ಯಪ್‌ಗ್ಳಲ್ಲಿ ತೊಡಗಿಸಿಕೊಂಡಿರುವುದು ಪತ್ತೆಯಾಗಿತ್ತು. ಬಳಿಕ ಇವರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಸ್ಥಳೀಯರು ಹಾಗೂ ಹೊರ ರಾಜ್ಯದವರೂ ಭಾಗಿಯಾಗಿ ದ್ದಾರೆ. ಇದೀಗ ಪ್ರಕರಣ ದಲ್ಲಿ ಶಾಮೀಲಾಗಿರುವ ಇತರ ಆರೋಪಿಗಳಿಗೆ ಶೋಧ ನಡೆಸಲಾ ಗುತ್ತಿದೆ. ಪ್ರಕರಣದ ತನಿಖೆ ನಡೆಸಿ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ಶ್ರೀನಿವಾಸ ಗೌಡ, ಡಿಸಿಪಿ, ಕೇಂದ್ರ ವಿಭಾಗ

ಟಾಪ್ ನ್ಯೂಸ್

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

Shivaraj-Thangadagi

Government Encourge: ಜ.1ರಿಂದ ಕಲಾವಿದರ ಮಾಸಾಶನ 3 ಸಾವಿರ ರೂ. ಏರಿಕೆ: ಸಚಿವ

Deepavali 2024: ಇಂದಿನಿಂದ ದೀಪಾವಳಿ ಸಂಭ್ರಮ

Deepavali 2024: ಇಂದಿನಿಂದ ದೀಪಾವಳಿ ಸಂಭ್ರಮ

Ratan Tata asked for money to make phone calls: Amitabh Bachchan

Ratan Tata; ಫೋನ್‌ ಮಾಡಲು ರತನ್‌ ದುಡ್ಡು ಕೇಳಿದ್ದರು: ಅಮಿತಾಭ್‌ ಬಚ್ಚನ್‌

HD-kumara

Waqf Property: ಭೂಗಳ್ಳರಿಗೆ ರಕ್ಷಣೆ ಕೊಟ್ಟರೆ ಬೆಲೆ ತೆರಬೇಕಾದೀತು: ಎಚ್‌.ಡಿ.ಕುಮಾರಸ್ವಾಮಿ

NTA Date Announced for JEE 2025 Exam

JEE: 2025ರ ಜೆಇಇ ಪರೀಕ್ಷೆಗೆ ಎನ್‌ಟಿಎ ದಿನಾಂಕ ಪ್ರಕಟ

Sathish-sail

Congress: ಶಾಸಕ ಸೈಲ್‌ಗೆ ಶಿಕ್ಷೆ; ಸ್ಪೀಕರ್‌ ಕಚೇರಿ ತಲುಪದ ಕೋರ್ಟ್‌ ಆದೇಶ ಪ್ರತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elepnht-Anekal

Anekal: ಎಂಟು ವರ್ಷದ ಕಾಡಾನೆ ಮರಿ ಹೃದಯಾಘಾತದಿಂದ ಸಾವು

High Court: ಎಸ್‌ಟಿಎಸ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್‌: ಉದ್ಯಮಿ ಮೇಲಿನ ಪ್ರಕರಣ ರದ್ದು

High Court: ಎಸ್‌ಟಿಎಸ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್‌: ಉದ್ಯಮಿ ಮೇಲಿನ ಪ್ರಕರಣ ರದ್ದು

FIR : ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಜಾಹೀರಾತು; ವ್ಯಕ್ತಿ ವಿರುದ್ಧ ಎಫ್ಐಆರ್‌

FIR : ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಜಾಹೀರಾತು; ವ್ಯಕ್ತಿ ವಿರುದ್ಧ ಎಫ್ಐಆರ್‌

Bengaluru: “ನಾಡಿದಿನಿಂದ 3 ದಿನ ಪಟಾಕಿ ಸಿಡಿಸಲು ಅವಕಾಶ’

Bengaluru: “ನಾಡಿದಿನಿಂದ 3 ದಿನ ಪಟಾಕಿ ಸಿಡಿಸಲು ಅವಕಾಶ’

Arrestted:10 ವರ್ಷಗಳಿಂದ ನಗರದಲಿದ್ಲ ಬಾಂಗ್ಲಾದೇಶ ಪ್ರಜೆ ಬಂಧನ

Arrestted:10 ವರ್ಷಗಳಿಂದ ನಗರದಲಿದ್ಲ ಬಾಂಗ್ಲಾದೇಶ ಪ್ರಜೆ ಬಂಧನ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

Shivaraj-Thangadagi

Government Encourge: ಜ.1ರಿಂದ ಕಲಾವಿದರ ಮಾಸಾಶನ 3 ಸಾವಿರ ರೂ. ಏರಿಕೆ: ಸಚಿವ

Deepavali 2024: ಇಂದಿನಿಂದ ದೀಪಾವಳಿ ಸಂಭ್ರಮ

Deepavali 2024: ಇಂದಿನಿಂದ ದೀಪಾವಳಿ ಸಂಭ್ರಮ

Ratan Tata asked for money to make phone calls: Amitabh Bachchan

Ratan Tata; ಫೋನ್‌ ಮಾಡಲು ರತನ್‌ ದುಡ್ಡು ಕೇಳಿದ್ದರು: ಅಮಿತಾಭ್‌ ಬಚ್ಚನ್‌

HD-kumara

Waqf Property: ಭೂಗಳ್ಳರಿಗೆ ರಕ್ಷಣೆ ಕೊಟ್ಟರೆ ಬೆಲೆ ತೆರಬೇಕಾದೀತು: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.