ಜಿಲ್ಲಾಡಳಿತದಿಂದ ವೃದ್ಧರ ಮತದಾನಕ್ಕೆ ವಿಶೇಷ ಆದ್ಯತೆ
Team Udayavani, Apr 15, 2023, 3:53 PM IST
ದೇವನಹಳ್ಳಿ: ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಜಿಲ್ಲೆಯಲ್ಲಿ ಚುನಾವಣೆ ರಂಗು ಏರುತ್ತಿದ್ದು ಈ ಬಾರಿ ವಿಶೇಷವಾಗಿ ಹಿರಿಯ ಚೇತನರಿಗೆ, ವಿಕಲಚೇತನರಿಗೆ ಮತದಾನ ಮಾಡಲು ವಿಶೇಷ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 20 ಸಾವಿರದ 324 ಮಂದಿ 80 ವರ್ಷ ಮೇಲ್ಪಟ್ಟವರು, 12ಸಾವಿರ 481ವಿಕಲ ಚೇತನರಿದ್ದಾರೆ. ಜಿಲ್ಲೆಯಲ್ಲಿ ಶಾಂತಿಯುತ ಮತ ದಾನಕ್ಕಾಗಿ ಒಟ್ಟು 834 ಮತಗಟ್ಟೆ ಕ್ಷೇತ್ರಗಳ ಪೈಕಿ 1137ಮತಗಟ್ಟೆಗಳನ್ನು ಗುರ್ತಿಸಲಾಗಿದೆ. ಈ ಪೈಕಿ ದೇವನಹಳ್ಳಿ 292, ಹೊಸಕೋಟೆ 293, ನೆಲಮಂಗಲ 276, ದೊಡ್ಡಬಳ್ಳಾಪುರ 276 ಮತಗಟ್ಟೆಗಳಿವೆ. ಇದೇ ಪ್ರಥಮ ಬಾರಿಗೆ ಕೆಲವರಿಗಷ್ಟೇ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಒದಗಿಸಲಾಗುತ್ತಿದೆ. ವಿಶೇಷವಾಗಿ ಹಿರಿಯ ನಾಗರಿಕರು, ವಿಶೇಷ ಚೇತನರು ಈ ಸೌಲಭ್ಯ ಪಡೆದುಕೊಳ್ಳ ಬಹುದಾಗಿದ್ದು, ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಫಾರ್ಮ್ 12ಡಿ ಸಲ್ಲಿಕೆ ಮಾಡಿ ಅವಕಾಶವನ್ನು ಬಳಸಿ ಕೊಳ್ಳಬಹುದಾಗಿದೆ.
ಗೌಪ್ಯ ಮತದಾನಕ್ಕೆ ವ್ಯವಸ್ಥೆ: ಅರ್ಜಿ ಸಲ್ಲಿಸಿದ ನಂತರ ನಿಗದಿತ ಮತದಾನಕ್ಕೆ ಸಿಬ್ಬಂದಿ ಆಯಾ ವಿಳಾಸಕ್ಕೆ ಬಂದು ಗೌಪ್ಯ ಮತದಾನ ಪ್ರಕ್ರಿಯೆಗಳೆಲ್ಲಾ ವಿಡಿಯೋ ಮಾಡ ಲಾಗುತ್ತದೆ. ಮನೆಗಳಲ್ಲಿಯೇ ಮತದಾನ ಪ್ರಕ್ರಿಯೆ ನಡೆಸಲು ಅಗತ್ಯ ಭದ್ರತೆ ಗೌಪ್ಯ ಮತದಾನಕ್ಕೆ ವ್ಯವಸ್ಥೆ ಹೀಗೆ ಪ್ರತಿಯೊಂದಕ್ಕೂ ಆದ್ಯತೆ ನೀಡುವ ಹಿನ್ನೆಲೆ ಮತದಾನ ಸೇಪ್ ಇರಲಿದೆ. ವಿಶೇಷವೆಂದರೆ ಇದೇ ಪ್ರಥಮ ಬಾರಿಗೆ ವಿಕಲ ಚೇತನರೇ ಕಾರ್ಯ ನಿರ್ವಹಿ ಸುವಂತಹ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಆ ಮೂಲಕ ಹೆಚ್ಚಿನ ಮತದಾನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಒಂದರಂತೆ ಮತಗಟ್ಟೆಗಳಲ್ಲಿ ಸಂಪೂರ್ಣ ವಿಕಲಚೇತನರು ನಿರ್ವಹಿ ಸಲಿದ್ದು ಇವರಿಗೆ ಸಹಕಾರಿಯಾಗಿ ವಿವಿಧ ಇಲಾಖೆಯ ಯುವ ಸಿಬ್ಬಂದಿ ಜೊತೆಗೂಡಿ ಸಾಥ್ ನೀಡಲಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ವತಿಯಿಂದ 80ವರ್ಷ ಮೇಲ್ಪಟ್ಟರಿಗೆ, ವಿಕಲಚೇತನರಿಗೆ ಮತದಾನ ನಡೆಸಲು ಅಂಚೆ ಮತದಾನಕ್ಕೆ ನೊಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಪ್ರತಿಯೊಬ್ಬರೂ ಮತದಾನ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಮತದಾನ ನಮ್ಮೆಲ್ಲರ ಹಕ್ಕು. ಕಡ್ಡಾಯ ಮತ ದಾನವಾಗಬೇಕು ಎಂಬುವುದು ಜಿಲ್ಲಾಡಳಿತದ ಧ್ಯೇಯೋದ್ದೇಶವಾಗಿದೆ.
ಪ್ರತಿಯೊಬ್ಬರೂ ಮತಗಟ್ಟೆಗಳಲ್ಲಿ ಮತದಾನ ಮಾಡಲು ಪ್ರಥಮ ಪ್ರಾಶಸ್ತ್ಯವನ್ನು ನೀಡಿ ಚುನಾವಣಾ ಹಬ್ಬದಲ್ಲಿ ಪ್ರತಿಯೊಬ್ಬರೂ ಭಾಗ ವಹಿಸುವಂತೆ ಜಿಲ್ಲಾಡಳಿತದ ಗುರಿಯಾಗಿದೆ. 80ವರ್ಷ ಮೇಲ್ಪಟ್ಟವರು, ವಿಕಲಚೇತನರು ಮತದಾನ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಜಿಲ್ಲೆ ಯಲ್ಲಿ ಮನೆ ಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. – ಆರ್.ಲತಾ, ಜಿಲ್ಲಾಧಿಕಾರಿ
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.