ಬಿಸಿಲಿನ ಬೇಗೆ: ತಾಟಿನಿಂಗು ಮಾರಾಟ ಜೋರು


Team Udayavani, Apr 15, 2023, 5:20 PM IST

ಬಿಸಿಲಿನ ಬೇಗೆ: ತಾಟಿನಿಂಗು ಮಾರಾಟ ಜೋರು

ಗೌರಿಬಿದನೂರು: ಬೇಸಿಗೆ ಕಾಲದ ಅಪರೂಪದ ಅತಿಥಿಯಾಗಿರುವ ತಾಟಿನಿಂಗು (ತಾಳೆಹಣ್ಣು) ಈಗ ಎಲ್ಲಿಲ್ಲದ ಬೇಡಿಕೆ. ಶಾಲಾ, ಕಾಲೇಜು, ಸಾರ್ವಜನಿಕ ಬಸ್‌ ನಿಲ್ದಾಣ, ಚಿತ್ರಮಂದಿರ ಸೇರಿದಂತೆ ನಗರದ ಪ್ರದೇಶದಲ್ಲಿ, ಜನನಿಬಿಡ ರಸ್ತೆಗಳಲ್ಲಿ ಎತ್ತ ಕಣ್ಣಾಯಿಸಿ ನೋಡಿದರೂ ಈಗ ತಾಟಿ ಲಿಂಗು ಹಣ್ಣುಗಳದ್ದೇ ದರ್ಶನ.

ಬಿಸಿಲಿನ ತಾಪಕ್ಕೆ ತತ್ತರ: ತಮಿಳು ನಾಡು ಮೂಲದ ತಾಟಿನಿಂಗು ಎಳೆ ನೀರು ಜಾತಿಯದ್ದು ಬೇಸಿಗೆ ಬಂದರೆ ಸಾಕು ಗೌರಿಬಿದನೂರಿಗೆ ಖಾಯಂ ಅತಿಥಿ. ಸದ್ಯ ನಗರದಾದ್ಯಂತ ತಾಟಿನಿಂಗು ಭರ್ಜರಿ ಮಾರಾಟ ನಡೆಯುತ್ತಿದ್ದು, ಬಿಸಿಲಿನ ಪ್ರತಾಪಕ್ಕೆ ತತ್ತರಿಸುತ್ತಿರುವ ನಾಗರಿಕರು, ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಈಗ ತಾಟಿಲಿಂಗು ಹಣ್ಣುಗಳ ಮೊರೆ ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಬಯಲುಸೀಮೆ ಜಿಲ್ಲೆಗಳಲ್ಲಿ ಹೆಚ್ಚು ಬೇಡಿಕೆ: ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ತಾಟಿಲಿಂಗು ಹಣ್ಣಿಗೆ ಬಯಲುಸೀಮೆ ಜಿಲ್ಲೆಗಳಲ್ಲಿ ಹೆಚ್ಚು ಬೇಡಿಕೆ. ಬೇಸಿಗೆಯಲ್ಲಿ ಮಾತ್ರ ಜಿಲ್ಲೆಗೆ ಪ್ರವೇಶ ಮಾಡುವ ಈ ಹಣ್ಣು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಬಲು ಅಚ್ಚುಮೆಚ್ಚು. ಸದ್ಯ ಜಿಲ್ಲಾ ಕೇಂದ್ರದ ಜನನಿಬಿಡ ರಸ್ತೆಗಳಲ್ಲಿ, ಜನವಸತಿ ಪ್ರದೇಶಗಳಲ್ಲಿ ಹಣ್ಣುಗಳ ಮಾರಾಟ ಭರದಿಂದ ಸಾಗಿದೆ.

ಎಳೆನೀರಿಗಿಂತ ಬೆಲೆ ಕಡಿಮೆ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಎಳನೀರು 25 ರಿಂದ 30 ರೂ. ದಾಟಿದೆ. ಇಂತಹ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಅದರಲ್ಲೂ ಎಳನೀರುಗಿಂತ ಸುಲಭವಾಗಿ ತಾಟಿಲಿಂಗು ಬಡವರ ಕೈಗೆಟುಕುತ್ತಿದೆ. ಹಣ್ಣು ಸೇವಿಸಿದರೆ ದೇಹ ದಲ್ಲಿ ಉಷ್ಣಾಂಶ ಕಡಿಮೆ ಆಗುತ್ತದೆ, ಬಿಸಿಲಿನ ಸಂದರ್ಭ ದಲ್ಲಿ ಸೇವಿಸಿದರೆ ತಂಪು ನೀಡುತ್ತದೆ ಎನ್ನುತ್ತಾರೆ ನಗರದ ನಿವಾಸಿ ಮಲ್ಲೇನಹಳ್ಳಿ ಶ್ರೀನಿವಾಸ್‌. ತಾಟಿಲಿಂಗು ಹಣ್ಣುಗಳ ಸೇವನೆಯಿಂದ ಬೇಸಿಗೆ ಯಲ್ಲಿ ಮನುಷ್ಯನ ದೇಹಕ್ಕೆ ತಂಪು ಕೊಡುತ್ತದೆ. ಇದು ನಮ್ಮ ಜಿಲ್ಲೆಯೊಳಗೆ ಎಲ್ಲೂ ಬೆಳೆಯುವುದಿಲ್ಲ. ಬೇಸಿಗೆ ಅವಧಿಯಲ್ಲಿ ಮಾತ್ರ ನೆರೆಯ ಕೇರಳ, ತಮಿಳುನಾಡಿ ನಿಂದ ಬರುತ್ತವೆ. ನಾವು ಪ್ರತಿ ವರ್ಷ ಬೇಸಿಗೆಯಲ್ಲಿ ತಾಟಿಲಿಂಗು ಹಣ್ಣುಗಳನ್ನು ಸೇವಿಸುತ್ತೇವೆ ಎನ್ನುತ್ತಾರೆ ನಗರದ ನಿವಾಸಿ ಪ್ರಕಾಶ್‌ ಹೇಳುತ್ತಾರೆ.

ಕೈಗೆಟುಕುವ ಬೆಲೆ: ಬೇಸಿಗೆಯಲ್ಲಿ ತಾಟಿಲಿಂಗು ಹಣ್ಣು ಸೇವಿಸುವರ ಸಂಖ್ಯೆ ಹೆಚ್ಚಾದರೂ ಅದರ ಬೆಲೆ ಮಾತ್ರ ಸಾಮಾನ್ಯರ ಪಾಲಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. 10 ರಿಂದ 15 ರೂ.ಗೆ ಸುಭವಾಗಿ ಮಾರಾಟವಾಗುತ್ತಿವೆ. ಉತ್ತಮ ಗುಣಮಟ್ಟದ ಹಣ್ಣು 15 ರಿಂದ 20 ರೂ. ವರೆಗೂ ಮಾರಾಟಗೊಳ್ಳುತ್ತಿವೆ. ತಮಿಳುನಾಡಿನಿಂದ ಬಂದಿರುವ ವ್ಯಾಪಾರಸ್ಥರು ಹಣ್ಣುಗಳನ್ನು ತರಿಸಿಕೊಂಡು ತಳ್ಳುವ ಬಂಡಿಯಲ್ಲಿ ದಿನವಿಡೀ ನಗರ ಪ್ರದೇಶಗಳಲ್ಲಿ ಸುತ್ತಾಡಿ ಮಾರಾಟ ಮಾಡುವ ದೃಶ್ಯಗಳು ಕಂಡು ಬರುತ್ತಿವೆ.

ಪ್ರತಿ ವರ್ಷ ನಾವು ಬೇಸಿಗೆಯಲ್ಲಿ ತಾಟಿನಿಂಗು ಹಣ್ಣುಗಳನ್ನು ತಮಿಳು ನಾಡಿನಿಂದ ಇಲ್ಲಿಗೆ ತಂದು ಮಾರಾಟ ಮಾಡುತ್ತೇವೆ. ಈ ಭಾಗದಲ್ಲಿ ತಾಟಿನಿಂಗು ಹಣ್ಣು ಇಷ್ಟಪಡುವರ ಸಂಖ್ಯೆ ಹೆಚ್ಚಾಗಿದೆ. ದರ ಕೂಡ ಕಡಿಮೆ, ಒಂದು ಹಣ್ಣು 10 ರೂ.ಗೆ ಮಾರಾಟ ಮಾಡುತ್ತೇವೆ. ●ಧರ್ಮೇಶ್‌, ವ್ಯಾಪಾರಿ

-ವಿ.ಡಿ.ಗಣೇಶ್‌

ಟಾಪ್ ನ್ಯೂಸ್

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ

UGC

UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್‌ ಹೇಳಿದ್ದೇನು?

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Ashwin Vaishnav

Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ

Farmer

Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್‌ ಇಳುವರಿ!

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು

CKB-Crime

Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ

UGC

UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್‌ ಹೇಳಿದ್ದೇನು?

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Ashwin Vaishnav

Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ

Farmer

Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್‌ ಇಳುವರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.