Vijayapura: ಆಸ್ತಿಯಷ್ಟೇ ಸಾಲ ಹೊಂದಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್
Team Udayavani, Apr 15, 2023, 7:15 PM IST
ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ 6,81,32,842 ರೂ. ಮೌಲ್ಯದ ಚರಾಸ್ತಿ ಹಾಗೂ 3,04,30,893 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ವಿಧಾನಸಭೆ ಚುನಾವಣೆಗಾಗಿ ಶನಿವಾರ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಯತ್ನಾಳ, ಅಫಿಡವಿಟ್ ಮೂಲಕ ಅಧಿಕೃತ ಆಸ್ತಿ ಘೋಷಣೆಯಲ್ಲಿ ತಮ್ಮ ಆಸ್ತಿ, ಸಾಲದ ವಿವರ ನೀಡಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ ಅವರ ಹೆಸರಿನಲ್ಲಿ 6,81,32,842 ರೂ. ಮೌಲ್ಯದ ಚರಾಸ್ತಿ, ಅವರ ಧರ್ಮಪತ್ನಿ ಶೈಲಜಾ ಪಾಟೀಲ ಯತ್ನಾಳ ಹೆಸರಿನಲ್ಲಿ 3,49,92,016 ರೂ., ಪುತ್ರ ರಾಮನಗೌಡ ಪಾಟೀಲ ಯತ್ನಾಳ ಅವರ ಹೆಸರಿನಲ್ಲಿ 3,20,70,907 ರೂ. ಹಾಗೂ ಇನ್ನೋರ್ವ ಪುತ್ರ ಆದರ್ಶಗೌಡ ಪಾಟೀಲ ಯತ್ನಾಳ ಅವರ ಹೆಸರಿನಲ್ಲಿ 5,67,02,212 ರೂ. ಮೌಲ್ಯದ ಚರಾಸ್ಥಿ ಇದೆ.
ಯತ್ನಾಳ ಅವರು 35 ಲಕ್ಷ ರೂ. ಮೌಲ್ಯದ ಟೋಯೋಟಾ ಫಾರ್ಚೂನರ್ ವಾಹನ ಹೊಂದಿದ್ದರೆ, ಅವರ ಪತ್ನಿ ಶೈಲಜಾ ಅವರ ಹೆಸರಿನಲ್ಲಿ ಹುಂಡೈ ವೆರ್ನಾ ವಾಹನವಿದೆ. ಯತ್ನಾಳ ಅವರ ಬಳಿ 50 ಗ್ರಾಂ ಬಂಗಾರ, 2 ವಜ್ರದ ಉಂಗುರ ಹೊಂದಿದ್ದರೆ, ಅವರ ಪತ್ನಿ ಶೈಲಜಾ ಅವರು 350 ಗ್ರಾಂ ಹಾಗೂ 27.86 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ ಸಿದ್ಧಸಿರಿ ಸೌಹಾರ್ದದಲ್ಲಿ 1.47 ಕೋಟಿ ರೂ. ಷೇರು, ಸಿದ್ದೇಶ್ವರ ಸೂಪರ್ ಬಜಾರ್‌ನಲ್ಲಿ 3.68 ಕೋಟಿ ರೂ. ಷೇರು, ಎಸ್.ಎಸ್. ಡೈರಿಯಲ್ಲಿ ಷೇರು ಹಾಗೂ ಪ್ರಭುಲಿಂಗೇಶ್ವರ ಶುಗರ್ಸ್ನಲ್ಲಿ 2 ಲಕ್ಷ ರೂ. ಮೌಲ್ಯದ ಷೇರು ಹೊಂದಿದ್ದಾರೆ.
ವಿಜಯಪುರ ನಗರದಲ್ಲಿರುವ ಟೂರಿಸ್ಟ್ ಹೋಟೆಲ್‌ನಲ್ಲಿ ಪಾಲುದಾರಿಕೆ ಹೊಂದಿದ್ದಾಗಿ ಯತ್ನಾಳ ಘೋಷಿಸಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳರು 3,04,30,898 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪ್ರಮುಖವಾಗಿ ಹೊನ್ನುಟಗಿ ಬಳಿ 4.31 ಎಕರೆ, ಐನಾಪೂರದಲ್ಲಿ 10 ಎಕರೆ ಕೃಷಿಯೇತರ ಜಮೀನು, ಸಿಟಿಎಸ್ 965 ರಲ್ಲಿ 1410 ಚ.ಅ. ವಿಸ್ತೀರ್ಣದ ವಾಣಿಜ್ಯ ಕಟ್ಟಡ ಸೇರಿದಂತೆ ಅನೇಕ ಕಡೆಗಳಲ್ಲಿ ಸ್ಥಿರಾಸ್ತಿ ಹೊಂದಿದ್ದಾರೆ.
ಯತ್ನಾಳ ಅವರ ಧರ್ಮಪತ್ನಿ ಶೈಲಜಾ ಪಾಟೀಲ ಯತ್ನಾಳರು ಒಟ್ಟು 1,37,97,000 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪ್ರಮುಖವಾಗಿ3.19 ಎಕರೆ ಐನಾಪೂರದಲ್ಲಿ ಕೃಷಿ ಭೂಮಿ ಸೇರಿದಂತೆ ಅನೇಕ ಕಡೆಗಳಲ್ಲಿ ಜಮೀನು ಹೊಂದಿದ್ದಾರೆ.
ಶಾಸಕ ಬಸನಗೌಡ ಯತ್ನಾಳ ಪುತ್ರ ರಾಮನಗೌಡ ಪಾಟೀಲ ಯತ್ನಾಳ ಅವರು 45,39,097 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಇನ್ನೋರ್ವ ಪುತ್ರ ಆದರ್ಶಗೌಡ ಪಾಟೀಲ ಯತ್ನಾಳ 35,61,541 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಯತ್ನಾಳ ಘೋಷಿಸಿದ್ದಾರೆ.
6.39 ಕೋಟಿ ರೂ ಸಾಲ
ಬಸನಗೌಡ ಪಾಟೀಲ ಯತ್ನಾಳರು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದಿರುವ ಬಗ್ಗೆಯೂ ಘೋಷಣೆ ಮಾಡಿದ್ದು, ಸಿದ್ಧಸಿರಿಯಲ್ಲಿ 2,15,95,870 ಓ.ಡಿ., ಅದೇ ಬ್ಯಾಂಕ್‌ನಲ್ಲಿ 1,19,01,492 ಓ.ಡಿ., 2,16,29,887 ಓ.ಡಿ., 69,94,229 ರೂ. ಹಾಗೂ ಶ್ರೀ ಸಿದ್ದೇಶ್ವರ ಸೂಪರ್ ಬಜಾರ್‌ಗೆ 18,16,820 ರೂ. ಸಾಲ ಪಾವತಿಸಬೇಕಿದೆ. ಒಟ್ಟು 6,39,38,293 ರೂ. ಸಾಲವಿದೆ ಎಂದು ಘೋಷಿಸಿದ್ದಾರೆ.
ಯತ್ನಾಳ ಧರ್ಮಪತ್ನಿ ಶೈಲಜಾ ಪಾಟೀಲ ಯತ್ನಾಳರ ಹೆಸರಿನಲ್ಲಿ ಸಿದ್ಧಸಿರಿಯಲ್ಲಿ 56,42,751ಓ.ಡಿ., ಅದೇ ಬ್ಯಾಂಕ್‌ನಲ್ಲಿ15,586 ಓ.ಡಿ. ಹಾಗೂ ಬಿ.ಆರ್. ಪಾಟೀಲ ಅವರಿಂದ ಪಡೆದ 1.08 ಕೋಟಿ ರೂ. ಸಾಲವಿದೆ ಒಟ್ಟಾರೆಯಾಗಿ 2,36,58,337 ಸಾಲವಿದೆ.
ಪುತ್ರ ರಾಮನಗೌಡ ಪಾಟೀಲ ಯತ್ನಾಳ ಸಿದ್ಧಸಿರಿ ಬ್ಯಾಂಕ್‌ನಲ್ಲಿ 3,66,12,506 ರೂ. ಓ.ಡಿ. ಹೊಂದಿದ್ದಾರೆ.
ಇನ್ನೋರ್ವ ಪುತ್ರ ಆದರ್ಶಗೌಡ ಪಾಟೀಲ ಯತ್ನಾಳ 1,60,23,633 ರೂ. ಓ.ಡಿ. ಹೊಂದಿದ್ದು, ಶ್ರೀ ಸಿದ್ದೇಶ್ವರ ಲೋಕಕಲ್ಯಾಣ ಚಾರಿಟೇಬಲ್ ಟ್ರಸ್ಟ್ಗೆ 4 ಕೋಟಿ ರೂ. ಸಂದಾಯ ಸೇರಿದಂತೆ ಒಟ್ಟು 5,60,23,633 ರೂ. ಸಾಲ ಹೊಂದಿದ್ದಾರೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿವಿಧ ಭ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದು 50 ಸಾವಿರ ರೂ. ನಗದು ರೂಪದಲ್ಲಿ ಇದ್ದು, ಅವರ ಧರ್ಮಪತ್ನಿ ಶೈಲಜಾ ಯತ್ನಾಳ ಅವರ ಬಳಿ ನಗದು ರೂಪದಲ್ಲಿ 15 ಸಾವಿರ ರೂ., ರಾಮನಗೌಡ ಪಾಟೀಲ ಯತ್ನಾಳ ಅವರ ಬಳಿ ಕ್ಯಾಷನ್ ಇನ್ ಹ್ಯಾಂಡ್ ರೂಪದಲ್ಲಿ 25 ಸಾವಿರ ರೂ. ಇದ್ದು, ಆದರ್ಶ ಪಾಟೀಲ ಬಳಿ ನಗದು ಇಲ್ಲ.
ಇದನ್ನೂ ಓದಿ: ತಪ್ಪಿದ ಟಿಕೆಟ್; BJPಗೆ ರಾಜೀನಾಮೆ ಸಲ್ಲಿಸಿದ Fighter Ravi
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.