Suriya 42 ಗೆ ಟೈಟಲ್ ಫಿಕ್ಸ್: ಯುದ್ಧ ಭೂಮಿಯಲ್ಲಿ ಸವಾರಿ ಹೊರಟ ʼಕಂಗುವʼ
Team Udayavani, Apr 16, 2023, 11:00 AM IST
ಚೆನ್ನೈ: ಸೂಪರ್ ಸ್ಟಾರ್ ಸೂರ್ಯ ಅವರ ಬಹು ನಿರೀಕ್ಷಿತ 42ನೇ ಸಿನಿಮಾಕ್ಕೆ ಟೈಟಲ್ ಫಿಕ್ಸ್ ಆಗಿದೆ. ಟೈಟಲ್ ರಿವೀಲ್ ಅದ್ಧೂರಿ ಟೀಸರ್ ಮೂಲಕ ಚಿತ್ರತಂಡ ರಿಲೀಸ್ ಮಾಡಿದೆ.
ವಾರಿಯರ್ ಪೋಸ್ಟರ್ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಸೂರ್ಯ, ಈಗ ಟೀಸರ್ ನಲ್ಲಿ ಮಿಂಚಿದ್ದಾರೆ. ಸೂರ್ಯ – ಶಿವ ಕಾಂಬಿನೇಷನ್ ನ ಚಿತ್ರಕ್ಕೆ ʼ ಕಂಗುವʼ ಎಂದು ಟೈಟಲ್ ಇಡಲಾಗಿದೆ. ಯುದ್ದಭೂಮಿಯಲ್ಲಿ ಹೋರಾಟ ಮಾಡುವ ಯೋಧನಂತೆ ಕುದುರೆ ಸವಾರಿ ಮಾಡುತ್ತಾ, ದುಷ್ಟರ ಸಂಹಾರಕ್ಕೆ ನಾಯಕ ಹೊರಟಿರುವ ದೃಶ್ಯವನ್ನು ತೋರಿಸಿ ಸಿನಿಮಾದ ಟೈಟಲ್ ರಿವೀಲ್ ಮಾಡಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಯುದ್ಧಭೂಮಿಯ ಕಥಾಹಂದರದ ಸಿನಿಮಾದಂತೆ ಕಾಣುತ್ತದೆ. ಅದ್ಧೂರಿ ಮೇಕಿಂಗ್, ಸಾಹಸ ಕಲೆ ಚಿತ್ರದಲ್ಲಿರಬಹುದು. ಇದೊಂದು ಅಡ್ವಂಚರ್ ಡ್ರಾಮಾ ಸಿನಿಮಾವಾಗಿದ್ದು, ಸೂರ್ಯ ಇದರಲ್ಲಿ ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೂರ್ಯ ಫ್ಯಾನ್ಸ್ ಗಳು ಟೀಸರ್ ನೋಡಿ ಭೇಷ್ ಎಂದಿದ್ದಾರೆ.
ಇದನ್ನೂ ಓದಿ: ವಿವೇಕಾನಂದ ರೆಡ್ಡಿ ಪ್ರಕರಣ: ಆಂಧ್ರ ಸಿಎಂ ಜಗನ್ ಸಂಬಂಧಿ ವೈಎಸ್ ಭಾಸ್ಕರ ರೆಡ್ಡಿ ಬಂಧನ
ಅಂದಹಾಗೆ ಸಿನಿಮಾ 3ಡಿಯಲ್ಲಿ 10 ಭಾಷೆಯಲ್ಲಿ 2024 ರ ಆರಂಭದಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.
ಬಾಲಿವುಡ್ ಬ್ಯೂಟಿ ದಿಶಾ ಪಟಾನಿ ಈ ಸಿನಿಮಾದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮುಂತಾದ ಕಲಾವಿದರ ದಂಡು ಸಿನಿಮಾದಲ್ಲಿರಲಿದೆ.
ಕೆ.ಇ.ಜ್ಞಾನವೇಲ್ ರಾಜಾ ಅವರ ಸ್ಟುಡಿಯೋ ಗ್ರೀನ್, ಯುವಿ ಕ್ರಿಯೇಷನ್ಸ್ ಸಹಯೋಗದೊಂದಿಗೆ ಸಿನಿಮಾ ತೆರೆಗೆ ಬರಲಿದೆ. ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಸಿನಿಮಾಕ್ಕಿರಲಿದೆ.
A Man with Power of Fire & a saga of a Mighty Valiant Hero.#Suriya42 Titled as #Kanguva In 10 Languages🔥
In Theatres Early 2024Title video 🔗: https://t.co/xRe9PUGAzP@KanguvaTheMovie @Suriya_offl @DishPatani @directorsiva @ThisIsDSP @StudioGreen2 @UV_Creations @kegvraja pic.twitter.com/0uWXDIMCTM
— Studio Green (@StudioGreen2) April 16, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.