Congress ಟಿಕೆಟ್ ವಂಚಿತ ವಾಸು ನಿವಾಸಕ್ಕೆ ಸಚಿವ ಸೋಮಣ್ಣ ಭೇಟಿ
ಟಿಕೆಟ್ ತಪ್ಪಲು ಸಿದ್ದರಾಮಯ್ಯ ಕಾರಣ ಎಂದು ವಾಸು ದೂರಿದ್ದಾರೆ...
Team Udayavani, Apr 16, 2023, 10:55 PM IST
ಮೈಸೂರು :ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕ ವಾಸು ಅವರ ಮನೆಗೆ ಸಚಿವ ಸೋಮಣ್ಣ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ವರುಣ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರು ಜಯಲಕ್ಷ್ಮಿಪುರಂ ನಲ್ಲಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಾಸು ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿ, ನನ್ನ ಹಾಗೂ ವಾಸು ಅವರ ಸ್ನೇಹ 35-36 ಗಳಷ್ಟು ಹಳೆಯದು.ವೈಯಕ್ತಿಕ ಸ್ನೇಹವೇ ಬೇರೆ ರಾಜಕೀಯವೇ ಬೇರೆ.ಆದರೀಗ ರಾಜಕೀಯವನ್ನು ಕೂಡ ವೈಯಕ್ತಿಕ ದ್ವೇಷಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ.ರಾಜಕೀಯವನ್ನು ವೈಯಕ್ತಿಕ ದ್ವೇಷಕ್ಕೆ ಬಳಸಿಕೊಳ್ಳಬಾರದು.ನಾನು ಸಿದ್ಧರಾಮಯ್ಯ ನಡವಳಿಕೆ ಬಗ್ಗೆ ಮಾತನಾಡುವುದಿಲ್ಲ.ನಾನು ಸಿದ್ದರಾಮಯ್ಯರನ್ನು ಡಿಸಿಎಂ ಮಾಡಲು ಸಹಕರಿಸಿದೆ.ಚಾಮುಂಡೇಶ್ವರಿ ಬೈ ಎಲೆಕ್ಷನ್ ನಲ್ಲಿ ಅವರ ಪರವಾಗಿ ಪ್ರಚಾರ ಮಾಡಿದ್ದೇನೆ.ಆದರೆ ಸಿದ್ಧರಾಮಯ್ಯ ನನ್ನನ್ನು ಯಾವ ಸೋಮಣ್ಣನೋ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂದರು.
ಸಿದ್ಧರಾಮಯ್ಯ ವಿರುದ್ಧ ವರುಣ ಕ್ಷೇತ್ರದಲ್ಲಿ ನಾನೀಗ ಸ್ಪರ್ಧೆ ಮಾಡಿದ್ದೇನೆ. ನಾನು ಹೋದೆಡೆಯೆಲ್ಲಾ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಜನರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು. ತಮ್ಮ ಮಾತಿನುದ್ಧಕ್ಕೂ ವಾಸು ಅವರನ್ನು ಸೋಮಣ್ಣ ಹಾಡಿ ಹೊಗಳಿದರು.
ನನಗೆ ಟಿಕೆಟ್ ತಪ್ಪಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂದು ವಾಸು ದೂರಿದ್ದಾರೆ.
ಶೆಟ್ಟರ್ ಬಿಜೆಪಿ ತೊರೆದಿದ್ಧಕ್ಕೇ ತೀವ್ರ ಬೇಸರ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟಿದ್ಧರಿಂದ ಮನಸ್ಸಿಗೆ ನೋವಾಗಿದೆ ಎಂದು ಸೋಮಣ್ಣ ಹೇಳಿದರು.
ಸೌಜನ್ಯದ ಭೇಟಿ
ಸೋಮಣ್ಣ ನಮ್ಮ ಮನೆಗೆ ಭೇಟಿ ನೀಡಿದ್ಧು ಸೌಜನ್ಯದ ಭೇಟಿ.ನಮ್ಮ ಅವರ ಒಡನಾಟ ಬಹಳ ಕಾಲದಿಂದಲೂ ಇದೆ.ಅವರು ಚುನಾವಣೆಗೆ ಸ್ಪರ್ಧಿಸಿದ್ಧರೂ ಕೂಡ ಬೆಂಬಲ ಕೊಡಿ ಎಂದು ಕೇಳಲಿಲ್ಲ.ನಿಮ್ಮ ಮಗನಿಗೆ ಆಶೀರ್ವಾದ ಮಾಡಿ ಎಂದು ನನ್ನನ್ನು ಕೇಳಿದರು.ಅವರಿಗೆ ಬೆಂಬಲ ಕೊಡಿ ಎಂದು ಸೋಮಣ್ಣ ಕೇಳಲಿಲ್ಲ ಎಂದು ಮಾಜಿ ಶಾಸಕ ವಾಸು ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.