ಜಿಲ್ಲೆಯ ರೈತರಿಗೆ ಹುಳಿಯಾದ ದ್ರಾಕ್ಷಿ
Team Udayavani, Apr 17, 2023, 2:19 PM IST
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬಯಲುಸೀಮೆ ಪ್ರದೇಶವಾಗಿದ್ದು, ಇರುವ ಅಲ್ಪಸ್ವಲ್ಪದ ನೀರಿನಲ್ಲಿಯೇ ದ್ರಾಕ್ಷಿ ಇತರೆ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ದ್ರಾಕ್ಷಿ ಉತ್ತಮ ಫಸಲು ಬಂದಿದೆ. ಆದರೂ ರೈತರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದೆ ಇಳುವರಿಯ ಜೊತೆಗೆ ಲಾಭದಾಯಕವಾಗಿಲ್ಲದಂತಾಗಿದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಇಡೀ ಪ್ರಪಂಚ ವನ್ನೇ ತಲ್ಲಣಗೊಳಿಸಿತ್ತು. ಕೊರೊನಾ ಸಮಯದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಇಳುವರಿ ಬಂದಿ ದ್ದರೂ ಸಹ ಲಾಕ್ ಡೌನ್ ಆದ ಪರಿಣಾಮದಿಂದಾಗಿ ಮಾರುಕಟ್ಟೆ ವ್ಯವಸ್ಥೆ ಯಿಲ್ಲದೆ. ರೈತರು ಆರ್ಥಿಕ ಸಂಕಷ್ಟವನ್ನು ಎದುರಿ ಸಿದ್ದರು. ಅಕಾಲಿಕ ಮಳೆ ಆಲಿಕಲ್ಲಿನ ಮಳೆಯಿಂದಾಗಿ ಬೆಳೆನಷ್ಟ ಉಂಟಾ ಗಿತ್ತು. ಇದೀಗ ಒಳ್ಳೆಯ ಇಳುವರಿ ಬಂದರೂ ಬೆಲೆಯಿಲ್ಲ ಇದ ರಿಂದಾಗಿ ಹಾಕಿದ ಬಂಡವಾಳವು ಸಿಗದ ಸ್ಥಿತಿ ನಿರ್ಮಾಣವಾಗಿದೆ.
ವಿಜಯಪುರ -ಚನ್ನರಾಯಪಟ್ಟಣದಲ್ಲಿ ದ್ರಾಕ್ಷಿ ಬೆಳೆ: ದೇವನಹಳ್ಳಿ ತಾಲೂಕಿನ ವಿಜಯಪುರ ಹೋಬಳಿ ಹಾಗೂ ಚನ್ನರಾಯಪಟ್ಟಣ ಹೋಬಳಿಗಳಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯುತ್ತಾರೆ. ಕುಂದಾಣ ಮತ್ತು ಕಸಬಾ ಹೋಬಳಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಬಯಲುಸೀಮೆ ಪ್ರದೇಶ ವಾಗಿದ್ದು, ಯಾವುದೇ ನದಿಮೂಲ, ಡ್ಯಾಂಗಳು, ಕಾಲುವೆ ಗಳು ಇಲ್ಲದಿದ್ದರೂ ಸಹ ಇರುವ ಕೊಳವೆಬಾವಿಗಳಲ್ಲೇ ನೀರನ್ನು ಹಾಯಿಸಿ ದ್ರಾಕ್ಷಿ ಬೆಳೆಯನ್ನು ರೈತರು ಬೆಳೆ ಯುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಹೆಚ್ಚಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚು ದಾಕ್ಷಿ ಬೆಳೆಯಲಾಗುತ್ತದೆ. ಹಳೆಯ ರಾಜ್ಯಗಳಿಗೆ ಬಹು ಪಾಲು ದಾಕ್ಷಿ ಬೆಂಗಳೂರು ಗ್ರಾಮಾಂತರ ಚಿಕ್ಕ ಬಳ್ಳಾಪುರ ಜಿಲ್ಲೆಗಳಿಂದ ಮಾರಾಟವಾಗುತ್ತಿದೆ. ಈ ಬಾರಿ ತಮ್ಮ ಫಸಲು ಬಂದಿತ್ತು, ಅದರ ತೋಟದಲ್ಲಿ ಬೆಳೆದು ನಿಂತಿರುವ ಫಸಲಿಗೆ ಬೇಡಿಕೆ ಕೂಡ ಇಲ್ಲ ಕಳೆದ ಬಾರಿಗಿಂತ ಈ ಬಾರಿ ಬೆಲೆ ಕೂಡ ಕುಸಿದಿದ್ದು, ಇದೇ ಪರಿಸ್ಥಿತಿ ಮುಂದುವರಿದಿದೆ.
ಹೆಚ್ಚಾಗಿ ತೋಟಗಾರಿಕಾ ಬೆಳೆ: ತೋಟಗಾರಿಕಾ ಬೆಳೆಗಳನ್ನು ಹೆಚ್ಚಾಗಿ ರೈತರು ಬೆಳೆಯುತ್ತಾರೆ. ತೋಟ ಗಾರಿಕೆ ಬೆಳೆಗಳ ವ್ಯಾಪ್ತಿ ಕೂಡ ಹೆಚ್ಚಳವಾಗುತ್ತದೆ ಕಳೆದ ಬಾರಿಯ ಉತ್ತಮ ಮಳೆ ಬೇಸಿಗೆಯ ಬೆಳೆಯದ ದಾಕ್ಷಿ ಬೆಳೆಯಲು ಮುಂದಾಗಿದ್ದಾರೆ ಉದ್ಯೋಗ ಖಾತ್ರಿಯಲ್ಲೂ ಕೂಡ ದ್ರಾಕ್ಷಿ ವ್ಯಾಪ್ತಿ ಹೆಚ್ಚಳಕ್ಕೆ ಮುಂದಾಗಲಾಗಿದೆ. ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ 200ರಿಂದ 250 ಹೆಕ್ಟೇರ್ ವಿಸ್ತೀರ್ಣ ಹೆಚ್ಚಳವಾಗಿದೆ.
ದಿಲ್ ಕುಷ ಕಪ್ಪು ದಾಕ್ಷಿ: ಬೆಂಗಳೂರು ನಗರ ಗಡಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ವಿಜಯಪುರಭಾಗದಲ್ಲಿ ಬೆಂಗಳೂರು ಬ್ಲೂ ದಾಕ್ಷಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇದಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದೆ. ಅಕ್ಕಪಕ್ಕದ ರಾಜ್ಯ ಹಾಗೂ ಬಾಂಗ್ಲಾದೇಶ ಸೇರಿದಂತೆ ಅನ್ಯ ದೇಶಗಳಲ್ಲೂ ಬೇಡಿಕೆ ಹೆಚ್ಚಾಗಿಯೇ ಇದೆ. ದಿಲ್ ಕುಷ ಕಪ್ಪು ದಾಕ್ಷಿ ಕೂಡ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ.
ಕೆಜಿಗೆ ದ್ರಾಕ್ಷಿ 15ರಿಂದ 20 ಕುಸಿತ: ಪ್ರತಿ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದ್ರಾಕ್ಷಿ ಬೆಳೆಯನ್ನು ಕೇಳುವರು ಇಲ್ಲದಂತಾಗಿದೆ. ಪ್ರತಿ ಕೆಜಿಗೆ ದ್ರಾಕ್ಷಿ ಬೆಳೆ 15ರಿಂದ 20 ಹೀಗೆ ಕುಸಿತ ಕಂಡಿದೆ. ಬೆಳೆ ನಿರ್ವಹಣೆಗೆ ಖರ್ಚು ಮಾಡಿದ್ದ ಬಂಡವಾಳ ಬರದೆ, ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ ಪ್ರತಿ ಕೆಜಿಗೆ 30 ರಿಂದ 50 ವರೆಗೆ ಬೆಳೆ ಸಿಗುತ್ತಿತ್ತು. ಆದರೆ ಪ್ರಸ್ತುತ ದ್ರಾಕ್ಷಿ ಬೆಲೆಯಲ್ಲಿ ಇಳಿಮುಖವಾಗಿದೆ. ಈ ಬಾರಿ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆ ವ್ಯಾಪ್ತಿ ಕೂಡ ಹೆಚ್ಚಾಗುವ ಜೊತೆಗೆ ಫಸಲು ಕೂಡ ಪ್ರತಿ ಬಾರಿ ಹೆಚ್ಚಾಗಿದೆ. ಈ ಎಲ್ಲಾ ಕಾರಣಗಳಿಂದ ದ್ರಾಕ್ಷಿ ದರ ಗಣನೆಗೆ ಇಳಿಕೆ ಕಂಡಿದೆ.
ದ್ರಾಕ್ಷಿ ಈ ಬಾರಿ 250 ಹೆಕ್ಟರ್ ಹೆಚ್ಚಳ: ದ್ರಾಕ್ಷಿ ವ್ಯಾಪ್ತಿ ಕೂಡ ಕಳೆದ ಬಾರಿಗಿಂತ ಈ ಬಾರಿ 250 ಹೆಕ್ಟರ್ ಹೆಚ್ಚಳವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯುತ್ತಾರೆ. ದ್ರಾಕ್ಷಿ ಉತ್ತಮ ಇಳುವರಿ ಬಂದಿರುತ್ತದೆ. ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಉತ್ತಮ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ಹನಿ ನೀರಾವರಿಗೆ ಸಹಾಯ ಧನ ನೀಡಲಾಗುತ್ತಿದೆ. ರೈತರು ಇದರ ಸದುಪ ಯೋಗ ಪಡೆದುಕೊಳ್ಳಬೇಕು. ವಿವಿಧ ತಳಿಯ ದ್ರಾಕ್ಷಿಗಳನ್ನು ಬೆಳೆಯುತ್ತಾರೆ. ಹೊಸ ದಾಗಿ ದ್ರಾಕ್ಷಿ ತೋಟ ಮಾಡುವವರಿಗೆ ನರೇಗಾ ಯೋಜನೆ ಯಲ್ಲಿ ಜಾಬ್ ಕಾರ್ಡ್ ಹೊಂದಿದ ಫಲಾನು ಭವಿಗೆ ಸಹಾಯಧನವನ್ನು ನೀಡಲಾಗುವುದು ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಗುಣವಂತ ತಿಳಿಸಿದ್ದಾರೆ.
ಕಳೆದ ವಾರಕ್ಕಿಂತ ಈ ವಾರ ಬೆಲೆ ಮತ್ತೆ ಕುಸಿದಿದೆ. ಸಾಲ ಮಾಡಿ ದ್ರಾಕ್ಷಿ ಬೆಳೆಯನ್ನು ಬೆಳೆಯಲಾಗುತ್ತಿದೆ. ದಾಕ್ಷಿ ಬೆಳೆ ಬೆಲೆ ಕುಸಿತದಿಂದ ಹಾಕಿ ರುವ ಬಂಡವಾಳ ಕೈಗೆ ಬಾರದಂತಾಗಿದೆ. ● ಮುನಿನಾರಾಯಣಪ್ಪ,ರೈತ
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
Kundapura; ಜಪ್ತಿ: ಅಂಗಡಿಗೆ ಬೆಂಕಿ: ‘ದ್ವೇಷದ ಕಿಡಿ’ ಎಂಬ ಶಂಕೆ; ದೂರು
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.