![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 18, 2023, 7:40 AM IST
ಬೀಜಿಂಗ್:ಇತ್ತೀಚೆಗೆ ಭಾರತದ ಅವಿಭಾಜ್ಯ ಅಂಗ ಅರುಣಾಚಲ ಪ್ರದೇಶದ ಹೆಸರುಗಳನ್ನು ಬದಲಿಸಿ, ಕುತ್ಸಿತ ಬುದ್ಧಿ ಪ್ರದರ್ಶಿಸಿದ್ದ ಚೀನಾ ಮತ್ತೊಂದು ದುಃಸ್ಸಾಹಸ ಪ್ರದರ್ಶಿಸಿದೆ. ಹಿಂದೂ ಮಹಾಸಾಗರದಲ್ಲಿ ಉದ್ಧಟತನ ಮುಂದುವರಿಸಿದೆ.
ಭಾರತದ ಪಯಾರ್ಯ ದ್ವೀಪದಿಂದ 2 ಸಾವಿರ ಕಿಮೀ ಅಂತದಲ್ಲಿರುವ ಸಾಗರದ ತಳ ಪ್ರದೇಶದ ಖನಿಜ ಸಂಪನ್ಮೂಲಗಳ ಭಾಗವನ್ನು ತನ್ನದೆಂದು ಬಿಂಬಿಸುವಂತೆ ಅವುಗಳ ಹೆಸರು ಬದಲಾಯಿಸಿದೆ.
ಖನಿಜ ಸಂಪನ್ಮೂಲಗಳ ಅನ್ವೇಷಣೆಗಾಗಿ 2011ರಲ್ಲಿ ಅಂತಾರಾಷ್ಟ್ರೀಯ ಸೀ ಬೆಡ್ ಅಥಾರಿಟಿಯಿಂದ ಸಮುದ್ರ ತಳದ ಕೆಲಭಾಗಗಳನ್ನು ಚೀನ 15 ವರ್ಷಗಳ ಕಾಲ ಗುತ್ತಿಗೆ ಪಡೆದಿತ್ತು. ಇದೀಗ ಗುತ್ತಿಗೆ ಅವಧಿ ಮುಗಿಯುವ ಮುನ್ನವೇ ತನಗೆ ಗುತ್ತಿಗೆ ನೀಡಿರದ ಪ್ರದೇಶಗಳನ್ನೂ ಸೇರಿಸಿ ಒಟ್ಟು 19 ಸಾಗರತಳದ ಪ್ರದೇಶಗಳ ಹೆಸರು ಬದಲಿಸಿದೆ.
ಗಮನಾರ್ಹ ಅಂಶವೆಂದರೆ ಚೀನಾ ಗುತ್ತಿಗೆ ಪಡೆದಿದ್ದ ಸ್ಥಳದಿಂದ ಉತ್ತರ ಭಾಗದಲ್ಲಿ ಭಾರತ ಕೂಡ ಇದೇ ಉದ್ದೇಶಕ್ಕೆ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ “ಸಮುದ್ರ ತಳದ ಹೆಸರು ಬದಲಿಸುವ ಚೀನಾದ ನಿಲುವು 19ನೇ ಶತಮಾನದ ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ನಿಲುವು ಪ್ರದರ್ಶಿಸಿದಂತೆ ಆಗಿದೆ’ ಎಂದಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.