ಪ್ರಸಾದ್‌ರಾಜ್ ಕಾಂಚನ್-33.64 ಕೋ.ರೂ. ಆಸ್ತಿ; ಕಿರಣ್ ಕೊಡ್ಗಿ -19 ಕೋ.ರೂ. ಆಸ್ತಿ
Team Udayavani, Apr 18, 2023, 10:34 AM IST
ಉಡುಪಿ: ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಸಲ್ಲಿಸಿರುವ ನಾಮಪತ್ರದಲ್ಲಿ 33.64 ಕೋ.ರೂ. ಆಸ್ತಿ ಹಾಗೂ 6.16 ಕೋ.ರೂ. ಸಾಲವನ್ನು ತೋರಿಸಿದ್ದಾರೆ.
33.64 ಕೋ.ರೂ. ಆಸ್ತಿಯಲ್ಲಿ 24.08 ಚರಾಸ್ತಿ ಹಾಗೂ 9.56 ಕೋ. ರೂ. ಸ್ಥಿರಾಸ್ತಿ ಸೇರಿದೆ. ಅಪತ್ನಿ ಹೆಸರಿನಲ್ಲಿ 24.68 ಕೋ.ರೂ. ಚರಾಸ್ತಿ, 3.96 ಕೋ.ರೂ. ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಈಕ್ವಿಟಿ ಷೇರು ಇರುವುದನ್ನು ಉಲ್ಲೇಖೀಸಿದ್ದಾರೆ
ಕಿರಣ್ ಕೊಡ್ಗಿ:
ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ಅವರ ಹೆಸರಿನಲ್ಲಿ 9.32 ಕೋ.ರೂ.ಗಳ ಚರಾಸ್ತಿ, 9.88 ಕೋ.ರೂ. ಕೃಷಿ ಭೂಮಿ, ಕೃಷಿಯೇತರ ಭೂಮಿ ಇತ್ಯಾದಿ ಸೇರಿದ ಸ್ಥಿರಾಸ್ತಿ ಮೌಲ್ಯ, ತನ್ನ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 1.63 ಕೋ.ರೂ. ಸಾಲ ಇದೆ.
ಪತ್ನಿ ಹೇಮಾ ಕೊಡ್ಗಿ ಹೆಸರಿನಲ್ಲಿ 32.9 ಲಕ್ಷ ರೂ.ಚರಾಸ್ತಿ ಇದೆ. ಪಿತ್ರಾರ್ಜಿತವಾಗಿ ಬಂದ 33 ಎಕ್ರೆ ಕೃಷಿಭೂಮಿ, 1.75ಎಕರೆ ಕೃಷಿಯೇತರ ಭೂಮಿ, ಅಮಾಸೆಬೈಲಿನಲ್ಲಿ ವಾಣಿಜ್ಯ ಕಟ್ಟಡ, ಉಡುಪಿ ಹಾಗೂ ಮಂಗಳೂರಿನಲ್ಲಿ Flat ಹೊಂದಿದ್ದಾರೆ.
ವಾಹನ, ಚಿನ್ನ
ಕಿರಣ್ ಕೊಡ್ಗಿ ಕೈಯಲ್ಲಿ 1.5 ಲಕ್ಷ ರೂ.ನಗದು, 8.6 ಕೋ.ರೂ. ಠೇವಣಿ, 22.6 ಲಕ್ಷ ರೂ.ಗಳ ಮ್ಯೂಚುವಲ್ Fund, ಷೇರು ಹೂಡಿಕೆ, 11 ಲಕ್ಷ ರೂ.ಗಳ ಇನ್ನೊವಾ ಹಾಗೂ 10 ಲಕ್ಷ ರೂ.ಗಳ ಕ್ರೆಟಾ ಕಾರು, 3.72 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಪತ್ನಿ ಹೇಮಾ ಕೊಡ್ಗಿ 50 ಸಾವಿರ ರೂ. ನಗದು, 21.85 ಲಕ್ಷ ರೂ. ಚಿನ್ನಾಭರಣ, 15 ಲಕ್ಷ ರೂ. ಠೇವಣಿ, ಪುತ್ರಿ ಮಹಿಮಾ ಕೊಡ್ಗಿ 21.3 ಲಕ್ಷ ರೂ.ಗಳ ಚಿನ್ನಾಭರಣ, 50 ಸಾವಿರ ರೂ. ನಗದು, 1.79 ಲಕ್ಷ ರೂ. ಠೇವಣಿ, ಕೊಡ್ಗಿ ಅವರ ತಾಯಿ 16.2 ಲಕ್ಷ ರೂ.ಗಳ ಚಿನ್ನಾಭರಣ, 49 ಸಾವಿರ ರೂ. ನಗದು ಹೊಂದಿದ್ದಾರೆ ಎಂದು ವಿವರದಲ್ಲಿ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್ಗೆ ಶ್ರೇಷ್ಠತೆಯ ಮಾನ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.