ದಿನೇಶ್ ಹೆಗ್ಡೆ ಬಳಿ 9.78 ಕೋಟಿ ರೂ ಆಸ್ತಿ; ವೇದವ್ಯಾಸ ಕಾಮತ್ ಬಳಿ 12 ಕೋಟಿ ರೂ ಆಸ್ತಿ
Team Udayavani, Apr 18, 2023, 11:09 AM IST
ಕುಂದಾಪುರ/ ಮಂಗಳೂರು: ಕುಂದಾಪುರ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ತನ್ನ ಹೆಸರಿನಲ್ಲಿ 8.38 ಕೋ.ರೂ. ಗಳ ಚರಾಸ್ತಿ,1.4 ಕೋ.ರೂ. ಸ್ಥಿರಾಸ್ತಿ, 1.1 ಕೋ.ರೂ. ಹಣ ಬರಲು ಬಾಕಿ ಇದೆ ಎಂದು ತಿಳಿಸಿದ್ದಾರೆ. ಪತ್ನಿ ದೀಪಿಕಾ ಹೆಗ್ಡೆ ಹೆಸರಿನಲ್ಲಿ 1.4 ಕೋ.ರೂ. ಚರಾಸ್ತಿ, 56 ಲಕ್ಷ ರೂ.ಗಳ ಸ್ಥಿರಾಸ್ತಿ ಇದೆ. ಪುತ್ರಿ ತನ್ವಿ ಡಿ. ಹೆಗ್ಡೆ ಮತ್ತು ಪುತ್ರ ತನಿಶ್ ಡಿ. ಹೆಗ್ಡೆ ಬಳಿ ಹಣದ ವ್ಯವಹಾರ, ಆಸ್ತಿ ಇಲ್ಲ.
ದಿನೇಶ್ ಹೆಗ್ಡೆ ಕೈಯಲ್ಲಿ 5.2 ಲಕ್ಷ ರೂ. ನಗದು, 3.9 ಕೋ.ರೂ. ಠೇವಣಿ, 1.27 ಕೋ. ರೂ.ಗಳ ಮ್ಯೂಚುವಲ್ ಫಂಡ್, ಷೇರು ಹೂಡಿಕೆ, 20 ಲಕ್ಷ ರೂ.ಗಳ ಇನ್ನೊವಾ ಹಾಗೂ 21 ಲಕ್ಷ ರೂ. ಗಳ ಕಿಯಾ ಕಾರು, 3 ಟಿಪ್ಪರ್, 3 ಹಿಟಾಚಿ, 1 ಪಿಕಪ್, 1 ವೈಬ್ರೇಟರ್, 1 ಪೇವರ್ ಫಿನಿಶರ್ ವಾಹನ, ಟಾಟಾ ಮ್ಯಾಜಿಕ್, ಪ್ಲಾಂಟ್ ಮೆಶಿನರಿ, ಜೆಸಿಬಿ ಇದೆ. ಒಟ್ಟಿಗೆ 8.3 ಕೋ.ರೂ. ಚರಾಸ್ತಿ ಇದೆ. ಪತ್ನಿ ಬಳಿ 17 ಲಕ್ಷ ರೂ.ಗಳ 1.2 ಕೆ.ಜಿ. ಚಿನ್ನ, ರಿಟ್ಜ್ ಕಾರು, ಟ್ರಾಕ್ಟರ್, ಬೈಕ್, ವೇ ಬ್ರಿಡ್ಜ್ ಮತ್ತಿತರ ಯಂತ್ರೋಪಕರಣ ಎಂದು ಒಟ್ಟು 1.43 ಕೋ.ರೂ.ಗಳ ಆಸ್ತಿ ಇದೆ. ಪತ್ನಿ ಬಳಿ 26 ಲಕ್ಷ ರೂ.ಗಳ ಸ್ಥಿರಾಸ್ತಿ, 8.5 ಲಕ್ಷ ರೂ.ಗಳ ಕೃಷಿಯೇತರ ಸ್ಥಿರಾಸ್ತಿ, ಕೋಟೇಶ್ವರದಲ್ಲಿ ಫ್ಲಾಟ್ ಸೇರಿದಂತೆ 68.5 ಲಕ್ಷ ರೂ.ಗಳ ಆಸ್ತಿ, ದಿನೇಶ್ ಹೆಗ್ಡೆ ಬಳಿ ಪಿತ್ರಾರ್ಜಿತವೂ ಸೇರಿ 1.45 ಕೋ.ರೂ.ಗಳ ಸ್ಥಿರಾಸ್ತಿ, 55 ಲಕ್ಷ ರೂ. ಗಳ ಕೃಷಿಯೇತರ ಸ್ಥಿರಾಸ್ತಿ, ಮೊಳಹಳ್ಳಿಯಲ್ಲಿ ಮನೆ ಸೇರಿದಂತೆ ಒಟ್ಟು 2.18 ಕೋ.ರೂ.ಗಳ ಆಸ್ತಿ ಇದೆ. ಪತ್ನಿಗೆ 29 ಲಕ್ಷ ರೂ. ಸಾಲ, ದಿನೇಶ್ ಹೆಗ್ಡೆಗೆ 4.97 ಕೋ.ರೂ. ಸಾಲ ಇದೆ.
ವೇದವ್ಯಾಸ ಕಾಮತ್
ವೇದವ್ಯಾಸ್ ಕಾಮತ್ ಅವರ ಕೈಯಲ್ಲಿ 3 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ, ಉಳಿತಾಯ ಖಾತೆ, ಹೊರ ಸಾಲ ನೀಡಿಕೆ, ಚಿನ್ನಾಭರಣ, ವಿವಿಧ ವ್ಯವಹಾರಗಳಲ್ಲಿ ಹೂಡಿಕೆ ಸೇರಿದಂತೆ ಒಟ್ಟು 12,78,23,822.67 ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
ಪತ್ನಿ ವೃಂದಾ ಕಾಮತ್ ಕೈಯಲ್ಲಿ 1.50 ಲಕ್ಷ ರೂ. ನಗದು, ಬ್ಯಾಂಕ್‌ಗಳಲ್ಲಿ ಠೇವಣಿ ಸೇರಿದಂತೆ ಒಟ್ಟು 6,22,45,078.04 ರೂ. ಚರಾಸ್ತಿ ಇದೆ. ವೇದವ್ಯಾಸ ಕಾಮತ್ ಹೆಸರಿನಲ್ಲಿ 11,53,39,000 ರೂ. ಮೌಲ್ಯದ ಹಾಗೂ ಪತ್ನಿ ಹೆಸರಿನಲ್ಲಿ 8,82,12,500 ರೂ. ಮೌಲ್ಯದ ಸ್ಥಿರಾಸ್ತಿ ಇದೆ. 4,92,67,504 ರೂ. ಸಾಲವನ್ನು ವೇದವ್ಯಾಸ ಹೊಂದಿದ್ದು, ಪತ್ನಿ 91,77,143 ರೂ. ಸಾಲವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
ವೇದವ್ಯಾಸ ಕಾಮತ್ ತನ್ನ ಬಳಿ 11.47 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ ಪತ್ನಿ ಬಳಿ 74.55 ಲಕ್ಷ ರೂ. ಮೌಲ್ಯದ 1.30 ಕೆಜಿ ಚಿನ್ನ ಹಾಗೂ 2.44 ಲಕ್ಷ ರೂ. ಮೌಲ್ಯದ ಬೆಳ್ಳಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ಕಾಮತ್ ಅವರು ತಮ್ಮ ಹೆಸರಿನಲ್ಲಿ ಯಾವುದೇ ವಾಹನ ಇಲ್ಲ ಎಂದು ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.