“ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ..”ಪೊಲೀಸ್ ಮೂಡಿಸಿದ ಶಿಕ್ಷಣ ಜಾಗೃತಿಗೆ ಸಿಎಂ ಶ್ಲಾಘನೆ
Team Udayavani, Apr 18, 2023, 3:21 PM IST
ಚೆನ್ನೈ: ಖಾಕಿ ತೊಟ್ಟು ಕಾನೂನು ಕಾಯಕವನ್ನು ಮಾಡುವ ಪೊಲೀಸರು, ಆರೋಪಿ, ಅಪರಾಧಿಗಳನ್ನು ಸೆರೆ ಹಿಡಿಯುವುದು ಮಾತ್ರವಲ್ಲದೆ ಸಮಾಜ ಮೆಚ್ಚುವ ಕಾಯಕವನ್ನೂ ಮಾಡುತ್ತಾರೆ.
ಈ ಮೇಲಿನ ಮಾತಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ ಮಧುರೈ ಮೂಲದ ಪೆನ್ನಲೂರ್‌ಪೆಟ್ಟೈ ಪೊಲೀಸ್ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪರಮಶಿವಂ.
ಪರಮಶಿವಂ ಅವರು ಇತ್ತೀಚೆಗೆ ತಿದೀರ್ ನಗರ ಪ್ರದೇಶದಲ್ಲಿ ಕೃಷಿಯನ್ನು ಆವಲಂಬಿಸಿ ಜೀವಿಸುತ್ತಿರುವ ಬುಡಕಟ್ಟು ಕುಟುಂಬದ ಜನರನ್ನು ಭೇಟಿಯಾಗಿ, ಅವರ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಹೇಳಿದ್ದಾರೆ.
ಕೃಷಿ ಕಾರ್ಮಿಕರ ಕುಟುಂಬದ ಮಕ್ಕಳನ್ನು ಉದ್ದೇಶಿಸಿ, ಅವರ ಪೋಷಕರ ಬಳಿ “ನಿಮಗೆ ಯಾವುದೇ ರೀತಿಯ ಸಹಾಯ ಬೇಕಾದರೆ ಅಥವಾ ಆಹಾರಕ್ಕಾಗಿ ಹಣ ಬೇಕಾದರೆ ಪೊಲೀಸ್ ಠಾಣೆಗೆ ಬನ್ನಿ. ನಾನು ಸಹಾಯ ಮಾಡಲು ಸಿದ್ಧ. ಈಗ, ಅವರಿಗೆ ಐದು ದಿನವೂ ಮೊಟ್ಟೆ ಮತ್ತು ಆಹಾರವನ್ನು ನೀಡಲಾಗುತ್ತದೆ. ದಯವಿಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಿ. 14 ವರ್ಷದವರೆಗೆ ಮಕ್ಕಳನ್ನು ಕಡ್ಡಾಯವಾಗಿ ಕಳುಹಿಸಿ. ನಿಮ್ಮ ಮಕ್ಕಳು ಶಾಲೆಗೆ ಹೋಗದಿದ್ದರೆ ನೀವು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ನಾನು ಸುಮ್ಮನಿರುವುದಿಲ್ಲ. ಇಂದು ಅಲ್ಲದಿದ್ದರೂ ನಾಳೆ ನಾನು ಅಪರಾಧಿಯನ್ನು ಹಿಡಿಯಬಹುದು ಬಳಿಕ ಬಿಡಬಹುದು ಆದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ, ನೀವೇ ಅವರ ಭವಿಷ್ಯಕ್ಕೆ ವಿಷ ಹಾಕಿದಂತೆ. ಮಕ್ಕಳನ್ನು ಶಾಲೆಗೆ ಕಳುಹಿಸಿ, ಮೂಡನಂಬಿಕೆಗ ಜೋತು ಬೀಳಬೇಡಿ ಎಂದಿದ್ದಾರೆ.
ಅವರು ಹೇಳಿರುವ ಮಾತುಗಳು ವೈರಲ್ ಆಗಿದ್ದು, ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಯಾಗಿ ಬಂದಿದೆ.
ಸಬ್‌ಇನ್ಸ್‌ಪೆಕ್ಟರ್ ಪರಮಶಿವಂ ಅವರ ಶಿಕ್ಷಣ ಜಾಗೃತಿಗೆ ಸ್ವತಃ ತಮಿಳುನಾಡು ಸಿಎಂ ಎಂ.ಕೆ.ಸ್ಟ್ಯಾಲಿನ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. “ಬೆಳಗಿನ ಪತ್ರಿಕೆಯಲ್ಲಿ ಸಂತೋಷದ ಸುದ್ದಿಯನ್ನು ಓದಿದ್ದೇನೆ! ಅದನ್ನು ಇಲ್ಲಿ ನಾನು ಹಂಚಿಕೊಳ್ಳುತ್ತೇನೆ. ಪೊಲೀಸರ ಕೆಲಸ ಅಪರಾಧ ತಡೆಗಟ್ಟುವುದಷ್ಟೇ ಅಲ್ಲ, ಉತ್ತಮ ಸಮಾಜವನ್ನು ರೂಪಿಸುವಲ್ಲಿ ಅವರ ಪಾತ್ರವೂ ಇದೆ. ಬೆನ್ನಲೂರುಪೇಟೆಯ ಎಸ್.ಐ. ಪರಮಶಿವಂ ಅವರು ಶಿಕ್ಷಣದ ಪರವಾಗಿ ಮಾತನಾಡಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಶಿಕ್ಷಣ ಮಕ್ಕಳ ಹಕ್ಕು” ಎಂದು ಸಿಎಂ ಸ್ಟ್ಯಾಲಿನ್ ಟ್ವೀಟ್ ಮಾಡಿದ್ದಾರೆ.
Tamil Nadu Police urges parents to send their children to schools.
He explains about #SarvaShikshaAbhiyan too.#TamilNadu #Police #Cop #School #Trending #latestnews #TNPolice pic.twitter.com/a0b0H8QESh
— Cinema Bugz (@news_bugz) April 17, 2023
காலைச் செய்தித்தாளில் மகிழ்ச்சிதரும் செய்தியைப் படித்தேன்! பகிர்கிறேன்.
குற்றங்களைத் தடுப்பது மட்டுமே காவல் துறையின் பணி அல்ல; நல்ல சமூகத்தை வடிவமைப்பதிலும் அவர்களது பங்கு உண்டு.
குழந்தைகளின் கல்வி உரிமைக்காகப் பேசிய பென்னாலூர்பேட்டை பயிற்சி S.I பரமசிவம் அவர்களை வாழ்த்துகிறேன். pic.twitter.com/p0hQYDxbgw
— M.K.Stalin (@mkstalin) April 18, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.