Banahatti: ರಾಜಕೀಯ ಅಖಾಡಕ್ಕಿಳಿದ ಜಗದ್ಗುರು ಶ್ರೀ ಶಿವಶಂಕರ ಶಿವಾಚಾರ್ಯರು
ಬುಧವಾರ ನೇಕಾರ ಪ್ರತಿನಿಧಿಯಾಗಿ ನಾಮಪತ್ರ
Team Udayavani, Apr 18, 2023, 6:34 PM IST
ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ಕ್ಷೇತ್ರದ ಜನತೆಯ ಒತ್ತಾಯ ಹಾಗು ರಾಷ್ಟ್ರೀಯ ಪಕ್ಷಗಳು ನೇಕಾರ ಸಮುದಾಯವನ್ನು ನಡೆಸಿಕೊಂಡ ನೋವಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ತೇರದಾಳ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದೇನೆಂದು ಹಳೇ ಹುಬ್ಬಳ್ಳಿ ವೀರಭಿಕ್ಷಾವೃತ್ತಿ ಮಠದ ಶಿವಶಂಕರ ಶಿವಾಚಾರ್ಯರು ಹೇಳಿದರು.
ಅವರು ಮಂಗಳವಾರ ಹೊಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಭ್ರಷ್ಟಾಚಾರ ಹಾಗು ತಾತ್ಸಾರ ಭಾವನೆಯಿಂದ ಆಧ್ಯಾತ್ಮದಿಂದ ರಾಜಕೀಯಕ್ಕೆ ದುಮ್ಮುಖಲಿದ್ದೇನೆ ಎಂದರು. ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಗಳ ಮುಖಂಡರ ಬೆಂಬಲ ಹಾಗು ಭಕ್ತರ ಒತ್ತಾಸೆಯಿಂದ ಕಣಕ್ಕಿಳಿಯಲು ಇಚ್ಛಿಸಿದ್ದೇನೆ. ವೃತ್ತಿ ಬೇರೆಯಿದ್ದರೂ ಲಿಂಗಾಯತರೆಲ್ಲರೂ ಒಂದೇಯಾಗಿದ್ದು, ರೈತ ಹಾಗು ನೇಕಾರರ ಬೆಂಬಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಹಕಾರಿ ಧುರೀಣ ಭೀಮಶಿ ಮಗದುಮ್ ಮಾತನಾಡಿ, ಬಿಜೆಪಿಯ 10 ಜನ ಟಿಕೆಟ್ ಆಕಾಂಕ್ಷಿದಾರರೆಲ್ಲರೂ ಸಮಾನ ಮನಸ್ಕರದಿಂದ ಸ್ವಾಮೀಜಿಯನ್ನು ಅಖಾಡಕ್ಕಿಳಿಸಲು ಸನ್ನದ್ಧರಾಗಿದ್ದೇವೆಂದು ತಿಳಿಸಿದರು.
ಹಟಗಾರ ಸಮಾಜದ ಜಿಲ್ಲಾಧ್ಯಕ್ಷ ಪಂಡಿತ ಪಟ್ಟಣ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಿ, ಕ್ಷೇತ್ರದಲ್ಲಿ ನೇಕಾರರಿಗಾದ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದು, ಹಣಬಲ, ದಬ್ಬಾಳಿಕೆಯಿಂದ ಜನ ಬೇಸತ್ತಿದ್ದಾರೆಂದು ತಿಳಿಸಿದರು.
ಹಿರಿಯ ಮುಖಂಡ ಬ್ರಿಜ್‌ಮೋಹನ ಡಾಗಾ ಮಾತನಾಡಿ, ನೇಕಾರರ ಅಸ್ತಿತ್ವಕ್ಕಾಗಿ ಈ ಬಾರಿ ಕ್ಷೇತ್ರದಿಂದ ನೇಕಾರ ಪ್ರತಿನಿಧಿಯನ್ನಾಗಿ ಪ್ರಥಮ ಬಾರಿಗೆ ಜಾತ್ಯಾತೀತವಾಗಿ ಸ್ವಾಮೀಜಿಗಳನ್ನು ಕಣಕ್ಕಿಳಿಸಲಾಗಿದೆ. ಸ್ವಾಮೀಜಿಗಳ ಗೆಲುವು ನಿಶ್ಚಿತವೆಂದು ತಿಳಿಸಿದರು.
ಕಿರಣಕುಮಾರ ದೇಸಾಯಿ, ಮಲ್ಲಪ್ಪ ಕುಚನೂರ, ಅಮಿತ ನಾಶಿ, ಪುಷ್ಪದಂತ ದಾನಿಗೊಂಡ, ರಾಜೇಂದ್ರ ಅಂಬಲಿ, ಓಂಪ್ರಕಾಶ ಬಾಗೇವಾಡಿ, ಸೋಮನಾಥ ಗೊಂಬಿ, ಸುರೇಶ ಕೋಲಾರ, ಹರ್ಷವರ್ಧನ ಪಟವರ್ಧನ, ಶ್ರೀಶೈಲ ದಭಾಡಿ ಸೇರಿದಂತೆ ಅನೇಕರಿದ್ದರು.
ಬುಧವಾರ ನಾಮಪತ್ರ ಸಲ್ಲಿಕೆ: ಬುಧವಾರದಂದು ಪಕ್ಷೇತರ ಅಭ್ಯರ್ಥಿಯಾಗಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಶಿವಶಂಕರ ಶ್ರೀಗಳ ನಾಮಪತ್ರ ಸಲ್ಲಿಸಲಾಗುವದೆಂದು ಬಸವರಾಜ ದಲಾಲ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.