Heatwave: ಬಿಸಿಲು, ಉರಿ ಸೆಕೆ: ಕರಾವಳಿ ಜನತೆ ಹೈರಾಣು

Team Udayavani, Apr 19, 2023, 6:41 AM IST

karavali

ಮಂಗಳೂರು: ಕರಾವಳಿ ಭಾಗದಲ್ಲಿ ಉರಿ ಸೆಕೆ ಮುಂದುವರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ನಿರೀಕ್ಷಿತ ಮಳೆ ಇನ್ನೂ ಸುರಿಯದೆ ಗರಿಷ್ಠ ಉಷ್ಣಾಂಶ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ದಿನವಿಡೀ ಸೆಕೆ ಮುಂದುವರಿದಿತ್ತು. ದಿನವಿಡೀ ಬಿಸಿಲು, ಬೆಳಗ್ಗೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಐಎಂಡಿ ಮಾಹಿತಿಯಂತೆ ಮಂಗಳೂರಿನಲ್ಲಿ 35 ಡಿ.ಸೆ. ಗರಿಷ್ಠ ತಾಪಮಾನ ಮತ್ತು 26 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ವಾಡಿಕೆಗಿಂತ ತಲಾ 1 ಡಿ.ಸೆ. ಹೆಚ್ಚು ಇತ್ತು.

ಉರಿ ಸೆಕೆಗೇನು ಕಾರಣ?
ಸಾಮಾನ್ಯವಾಗಿ ಎಪ್ರಿಲ್‌ನಲ್ಲಿ ಬೆಳಗ್ಗೆ ವೇಳೆ ಪೂರ್ವದಿಕ್ಕಿನಿಂದ ಮತ್ತು ಸಂಜೆ ವೇಳೆ ಪಶ್ಚಿಮ ದಿಕ್ಕಿನಿಂದ ಗಾಳಿ ಬೀಸುತ್ತದೆ. ಬೆಳಗ್ಗೆ ಬೀಸುವ ಗಾಳಿಯಲ್ಲಿ ಬಿಸಿಯ ಅಂಶ ಜಾಸ್ತಿ ಇರುತ್ತದೆ. ಆದರೆ ಸದ್ಯ ಅರಬಿ ಸಮುದ್ರದಲ್ಲಿ ಸುಳಿಗಾಳಿ ಉಂಟಾಗಿರುವ ಪರಿಣಾಮ ಉತ್ತರದಿಂದ ಗಾಳಿ ಬೀಸುತ್ತಿದೆ. ಈ ಗಾಳಿ ಉಷ್ಣ ಅಲೆಗಳನ್ನು ತರುತ್ತಿದೆ. ಕರಾವಳಿ ಭಾಗದಲ್ಲಿ ಸಮುದ್ರ ಇರುವ ಕಾರಣ ವಾತಾವರಣದಲ್ಲಿ ತೇವಾಂಶ ಜಾಸ್ತಿ ಇರುತ್ತದೆ. ಗರಿಷ್ಠ ಉಷ್ಣಾಂಶ ಮತ್ತು ತೇವಾಂಶ ಒಟ್ಟಿಗೆ ಸೇರಿ “ಹೀಟ್‌ ಇಂಡೆಕ್ಸ್‌ ‘ ಉಂಟಾಗುತ್ತದೆ. ಇದು ಬೇಸಗೆ ಬೇಗೆ ಮತ್ತಷ್ಟು ಹೆಚ್ಚು ಮಾಡುತ್ತದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿ ಪ್ರಸಾದ್‌.

ಬಿಸಿ ಗಾಳಿ ಮುನ್ನೆಚ್ಚರಿಕೆ ಇಲ್ಲ
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಬಿಸಿ ಗಾಳಿ ಮುನ್ನೆಚ್ಚರಿಕೆ ಇಲ್ಲ. ಆದರೂ ಸದ್ಯ 37-38 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಕೆಲವು ದಿನ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ಇರುತ್ತಿದೆ. ಎಪ್ರಿಲ್‌ ತಿಂಗಳಿನಲ್ಲಿ ಇದು ಸಾಮಾನ್ಯ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

ಎ. 20ರಿಂದ ಮಳೆ ಸಾಧ್ಯತೆ
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಎ. 20ರಿಂದ 22ರ ವರೆಗೆ “ಎಲ್ಲೋ ಅಲರ್ಟ್‌’ ಇದ್ದು ಕರಾವಳಿಯ ಹಲವು ಕಡೆ ಮಳೆ ಸಾಧ್ಯತೆ ಇದೆ.

ಟಾಪ್ ನ್ಯೂಸ್

ShashiTharoor; ಕೊನೆಗೂ 400 ಪಾರ್…ಆದರೆ ಬೇರೆ ದೇಶದಲ್ಲಿ: ಬಿಜೆಪಿ ವಿರುದ್ದ ತರೂರ್ ವ್ಯಂಗ್ಯ

ShashiTharoor; ಕೊನೆಗೂ 400 ಪಾರ್…ಆದರೆ ಬೇರೆ ದೇಶದಲ್ಲಿ: ಬಿಜೆಪಿ ವಿರುದ್ದ ತರೂರ್ ವ್ಯಂಗ್ಯ

INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್

INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್

France-Assmbly

France Election: ಫ್ರಾನ್ಸ್‌ನಲ್ಲೂ ಬದಲಾವಣೆ ಗಾಳಿ!

Harish-Poonja

Belthangady ಶಾಸಕ ಹರೀಶ್‌ ಪೂಂಜ ಪ್ರಕರಣ: ವಿಚಾರಣೆಗೆ ವಿನಾಯಿತಿ ನೀಡಿದ ನ್ಯಾಯಾಲಯ

Kota-Shrinivas

Udupi: ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

High-Court

Belthangady: ನೆರಿಯ ಪ್ಲಾಂಟೇಷನ್‌ ಜಮೀನು ದಶಕಗಳ ವಿವಾದಕ್ಕೆ ತೆರೆ 

CM-SC-Meeting

Government Decision; ದಲಿತ ವಿದ್ಯಾರ್ಥಿಗಳಿಗೆ ಬಂಪರ್‌: 15,000 ಸ್ಟೈ ಫಂಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CC Camera ದೃಶ್ಯಾವಳಿ; ಫೂರೆನ್ಸಿಕ್‌ ವರದಿ ಸಾಕ್ಷಿಯಾಗಿಸಿ ಶಿಕ್ಷೆ ವಿಧಿಸಿದ ನ್ಯಾಯಾಲಯ

CC Camera ದೃಶ್ಯಾವಳಿ; ಫೂರೆನ್ಸಿಕ್‌ ವರದಿ ಸಾಕ್ಷಿಯಾಗಿಸಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Yakshagana ಮುಮ್ಮೇಳದ ಸವ್ಯಸಾಚಿ ಕುಂಬ್ಳೆ ಶ್ರೀಧರ್‌ ರಾವ್‌

Yakshagana ಮುಮ್ಮೇಳದ ಸವ್ಯಸಾಚಿ ಕುಂಬ್ಳೆ ಶ್ರೀಧರ್‌ ರಾವ್‌

Mangaluru ವಸತಿ ಯೋಜನೆ: 4 ವರ್ಷಗಳಿಂದ ದ.ಕ.ಕ್ಕೆ ಮನೆಯೇ ಸಿಕ್ಕಿಲ್ಲ!

Mangaluru ವಸತಿ ಯೋಜನೆ: 4 ವರ್ಷಗಳಿಂದ ದ.ಕ.ಕ್ಕೆ ಮನೆಯೇ ಸಿಕ್ಕಿಲ್ಲ!

“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್‌ ಗುಂಡೂರಾವ್‌

“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್‌ ಗುಂಡೂರಾವ್‌

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

ShashiTharoor; ಕೊನೆಗೂ 400 ಪಾರ್…ಆದರೆ ಬೇರೆ ದೇಶದಲ್ಲಿ: ಬಿಜೆಪಿ ವಿರುದ್ದ ತರೂರ್ ವ್ಯಂಗ್ಯ

ShashiTharoor; ಕೊನೆಗೂ 400 ಪಾರ್…ಆದರೆ ಬೇರೆ ದೇಶದಲ್ಲಿ: ಬಿಜೆಪಿ ವಿರುದ್ದ ತರೂರ್ ವ್ಯಂಗ್ಯ

INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್

INDvsZIM: ಟೀಂ ಇಂಡಿಯಾಗೆ ಸಿಕ್ಕರು ಹೊಸ ಓಪನರ್ಸ್; ಖಚಿತಪಡಿಸಿದ ನಾಯಕ ಗಿಲ್

France-Assmbly

France Election: ಫ್ರಾನ್ಸ್‌ನಲ್ಲೂ ಬದಲಾವಣೆ ಗಾಳಿ!

Harish-Poonja

Belthangady ಶಾಸಕ ಹರೀಶ್‌ ಪೂಂಜ ಪ್ರಕರಣ: ವಿಚಾರಣೆಗೆ ವಿನಾಯಿತಿ ನೀಡಿದ ನ್ಯಾಯಾಲಯ

Kota-Shrinivas

Udupi: ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.