Karnataka Election 2023; ಉಮೇದುವಾರರ ಆಸ್ತಿ ವಿವರ
Team Udayavani, Apr 19, 2023, 8:02 AM IST
ಹರೀಶ್ ಪೂಂಜ
ಬಿಜೆಪಿ ಅಭ್ಯರ್ಥಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ ಅಫಿದವಿತ್‌ನಲ್ಲಿ ಸ್ವಂತ ಚರಾಸ್ತಿ ಒಟ್ಟು 1,24,46,101 ರೂ. ಎಂದಿದ್ದು, 1,05,32,500 ರೂ. ಮೌಲ್ಯದ ಚಿರಾಸ್ತಿಯನ್ನು ಹೊಂದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿ ಒಟ್ಟು 97,55,280 ರೂ. ಚರಾಸ್ತಿ ಇದ್ದರೆ, ಸ್ಥಿರಾಸ್ತಿಯನ್ನು ಹೊಂದಿಲ್ಲ. ಹರೀಶ್ ಪೂಂಜ ಅವರು ಒಟ್ಟು 1,06,29,074 ರೂ. ಸಾಲ ಹೊಂದಿದ್ದರೆ, ಪತ್ನಿ 5 ಲಕ್ಷ ರೂ. ಸಾಲ ಹೊಂದಿದ್ದಾರೆ. 2.20 ಲಕ್ಷ ರೂ. ಗಳ ಐಫೋನ್, ಇನ್ನೋವಾ ಕ್ರಿಸ್ಟಾ, ಇನ್ನೋವಾ, ಸ್ವಿಫ್ಟ್ ಕಾರು ಹೊಂದಿದ್ದಾರೆ. 179 ಗ್ರಾಂ. ಮೌಲ್ಯದ ಚಿನ್ನ ಇದ್ದರೆ, ಅವರ ಪತ್ನಿ ಬಳಿ 1419 ಗ್ರಾಂ. ಚಿನ್ನ, 6.68 ಲಕ್ಷ ರೂ. ಮೌಲ್ಯದ ವಜ್ರಾಭರಣ, ಪ್ಲಾಟಿನಂ, ಆಭರಣ, 2 ಮಾಣಿಕ್ಯದ ಹರಳುಗಳಿವೆ.
ಸೊರಕೆಗಿಂತ ಅವರ ಪತ್ನಿಯೇ ಸಿರಿವಂತೆ
ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ಕೈಯಲ್ಲಿ 1.50 ಲಕ್ಷ ರೂ. ನಗದು, ಬ್ಯಾಂಕ್ ಉಳಿತಾಯ ಖಾತೆಯಲ್ಲಿ 1.50 ಲಕ್ಷ ರೂ., 29 ಲಕ್ಷ ರೂ. ಮೌಲ್ಯದ ಕಾರು ಸೇರಿ 32 ಲಕ್ಷ ರೂಪಾಯಿ ಚರಾಸ್ತಿ ಹಾಗೂ 19,36,160 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿ ದ್ದಾರೆ. ಪತ್ನಿ ದಕ್ಷ ವಿ. ಸೊರಕೆ ನಗದು, ಬ್ಯಾಂಕ್ ಉಳಿತಾಯ ಹಾಗೂ 900 ಗ್ರಾಂ ಚಿನ್ನಾಭರಣ ಸೇರಿ 49 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು ಬೆಳ್ತಂಗಡಿ ಕಾಶಿಪಟ್ಣದಲ್ಲಿ ಜಮೀನು ಮತ್ತು ಉಡುಪಿಯಲ್ಲಿ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಸಹಿತ 16,09,78,500 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತಿ ವಿನಯ ಕುಮಾರ್‌ಗಿಂತ ಪತ್ನಿ ದಕ್ಷಾ ಅವರೇ ಸಿರಿವಂತೆ.
ಗೋಪಾಲ ಪೂಜಾರಿ
ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರ ಹೆಸರಲ್ಲಿ 70.23 ಲಕ್ಷ ರೂ. ಚರಾಸ್ತಿಯಿದ್ದು, ಸ್ಥಿರಾಸ್ತಿಯಿಲ್ಲ. 7.80 ಲಕ್ಷ ರೂ. ನಗದು, ಬ್ಯಾಂಕ್‌ಗಳಲ್ಲಿ 45.23 ಲಕ್ಷ ರೂ. ಸಾಲವಿದೆ. ಪತ್ನಿ ಮಮತಾ ಜಿ. ಪೂಜಾರಿ ಹೆಸರಲ್ಲಿ 46.67 ಲಕ್ಷ ರೂ. ಚರಾಸ್ತಿ, 85 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿಯಿದೆ. 1.15 ಲಕ್ಷ ರೂ. ನಗದು ಇದ್ದು, 35 ಲಕ್ಷ ರೂ. ಸಾಲವಿದೆ. ಪುತ್ರರಾದ ಸೂರಜ್, ಪವನ್ ಹಾಗೂ ಪುತ್ರಿ ಕೀರ್ತಿ ಅವರ ಹೆಸರಲ್ಲಿ ಆಸ್ತಿ ಇದೆ. ಅವರ ಬಳಿ 6.37 ಲಕ್ಷ ರೂ.ಗಳ ಫೋರ್ಡ್, 30.47 ಲಕ್ಷ ರೂ.ಗಳ ಇನ್ನೋವಾ ಕ್ರಿಸ್ಟ ಕಾರಿದ್ದು, 6 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನ, ಪತ್ನಿಯ ಬಳಿ 45 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನವಿದೆ. 18 ಲಕ್ಷ ರೂ. ವಿಮೆ, ಸೊಸೈಟಿಯಲ್ಲಿ 50 ಸಾವಿರ ರೂ. ಹೂಡಿಕೆ, ಬ್ಯಾಂಕ್‌ಗಳಲ್ಲಿ 78,755 ರೂ. ಠೇವಣಿಯಿದೆ. ಪತ್ನಿ ಹೆಸರಲ್ಲಿ ಪೆರಂಪಳ್ಳಿ ಶಿವಳ್ಳಿ 85 ಲಕ್ಷ ರೂ. ಮೌಲ್ಯದ 0.82 ಎಕರೆ ಆಸ್ತಿಯಿದೆ .
ಪ್ರಕರಣಗಳೇ ಮುತಾಲಿಕ್ ಆಸ್ತಿ!
ಕಾರ್ಕಳ: ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಪ್ರಮೋದ್ ಮುತಾಲಿಕ್ ಬಳಿ ರಾಜ್ಯದ 7 ಠಾಣೆ ಗಳಲ್ಲಿ ಸುಮಾರು 28 ಸಾರ್ವಜನಿಕ ಧಕ್ಕೆ ತಂದ ಪ್ರಕ ರಣಗಳಿವೆ. ಪ್ರಸ್ತುತ ಕೈಯಲ್ಲಿ 13,500 ರೂ. ಮಾತ್ರ ಇದ್ದು ಒಟ್ಟು ಆಸ್ತಿ ಮೌಲ್ಯ 2.63 ಲಕ್ಷರೂಗಳಾಗಿವೆ.
ಉಮಾನಾಥ ಕೋಟ್ಯಾನ್
ಮೂಡುಬಿದಿರೆ :ಬಿಜೆಪಿ ಅಭ್ಯರ್ಥಿ, ಶಾಸಕ ಉಮಾನಾಥ ಕೋಟ್ಯಾನ್ 57, 66,861.03 ಮೌಲ್ಯದ ಚರಾಸ್ತಿ ಮತ್ತು ಪತ್ನಿ ಮಮತಾ ಯು. ಕೋಟ್ಯಾನ್ 40,44,384.57 ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಕೋಟ್ಯಾನ್ ಕೈಯಲ್ಲಿ ನಗದು 18 ಸಾವಿರ ರೂ. ಬ್ಯಾಂಕ್, ಸಹಕಾರ ಸಂಘ, ಹಣ ಕಾಸು ಸಂಸ್ಥೆಗಳ ಖಾತೆಗಳಲ್ಲಿ ಠೇವಣಿ 28,50,303.03 ರೂ. ಇದರಲ್ಲಿ ಪತ್ನಿಯೊಂದಿಗಿನ ಜಂಟಿ ಖಾತೆ ಯಲ್ಲಿ 21,33,346.32 ರೂ. ಇದೆ. ಕಂಪೆ ನಿಗಳು, ಮ್ಯೂಚುವಲ್ ಫಂಡ್‌ಗಳಲ್ಲಿ ಬಾಂಡ್, ಡಿಬೆಂಚರ್ ಷೇರುಗಳು 2,78,158 ರೂ. ಪತ್ನಿಯ ಕೈಯಲ್ಲಿ 5 ಸಾವಿರ ರೂ. ಇದೆ. ಸಹಕಾರ ಸಂಘ, ಹಣ ಕಾಸು ಸಂಸ್ಥೆಗಳ ಖಾತೆಗಳಲ್ಲಿ ಒಟ್ಟು ಠೇವಣಿ 22,86,184.57 ರೂ. ಇದೆ. ಷೇರು ಹೂಡಿಕೆ ಇತ್ಯಾದಿ 1,500 ರೂ. 16 ಲಕ್ಷ ರೂ. ಮೌಲ್ಯದ ಇನ್ನೋವಾ ಕ್ರೆಸ್ಟಾ ಮತ್ತು 4 ಲಕ್ಷ ರೂ. ನ ಮಾರುತಿ ಸ್ವಿಫ್ಟ್ ಕಾರುಗಳಿವೆ. ಕೋಟ್ಯಾನ್ ಬಳಿ 6.25 ಲಕ್ಷ ರೂ. ಮೌಲ್ಯದ 125 ಗ್ರಾಂ ಚಿನ್ನದ ಆಭರಣ ಮತ್ತು 13,400 ರೂ. ಮೌಲ್ಯದ 200 ಗ್ರಾಂ ಬೆಳ್ಳಿ ಇದೆ. ಪತ್ನಿಯ ಬಳಿ 17.50 ಲಕ್ಷ ರೂ. ಮೌಲ್ಯದ 350 ಗ್ರಾಂ ಅಭರಣ ಮತ್ತು 6,700 ರೂ. ಮೌಲ್ಯದ 100 ಗ್ರಾಂ ಬೆಳ್ಳಿಯಿದೆ.
ಕೋಟ್ಯಾನ್ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ. ಪತ್ನಿ ಹೆಸರಿನಲ್ಲಿ ಮೂಡುಬಿದಿರೆ ಪುತ್ತಿಗೆ ಗ್ರಾಮದಲ್ಲಿ ಸುಮಾರು 60 ಲಕ್ಷ ರೂ. ಮೌಲ್ಯದ 1.97 ಎಕರೆ ಕೃಷಿ ಭೂಮಿ ಇದೆ. ಮರಕಡ ಗ್ರಾಮದಲ್ಲಿ ಪತ್ನಿಯೊಂದಿಗೆ ಜಂಟಿ ಹೆಸರಿನಲ್ಲಿ 16,988.4 ಚದರ ಅಡಿ ಮತ್ತು ಸ್ವಂತ 24,829.2 ಚ.ಅಡಿ. ಕೃಷಿಯೇತರ ಭೂಮಿ ಇದೆ. ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ 65 ಲಕ್ಷ ರೂ. ಪತ್ನಿಯ ಹೆಸರಿನಲ್ಲಿ ಮಾರ್ಪಾಡಿ ಗ್ರಾಮದಲ್ಲಿ ಅವಿಭಜಿತ ಹಕ್ಕಿನಡಿ ತಾಯಿಯೊಂದಿಗೆ ಜಂಟಿಯಾಗಿ 0.18 ಎಕ್ರೆ ಜಮೀನು ಹೊಂದಿದ್ದು, ಇದರ ಮಾರುಕಟ್ಟೆ ಬೆಲೆ ಅಂದಾಜು 20 ಲಕ್ಷ ರೂ. ಕೋಟ್ಯಾನ್ ಅವರು ಅಭಿವೃದ್ಧಿರೂಪದಲ್ಲಿ 95 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಒಟ್ಟು 2.65 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಪತ್ನಿ 1.30 ಕೋ.ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಬ್ಯಾಂಕ್‌ನಲ್ಲಿ ಪತ್ನಿಯೊಂದಿಗೆ 25,68,365 ರೂ. (ಶೇ. 50-12,84,418.25 ರೂ.) ಸಾಲ ಇದೆ.
ಡಾ| ಭರತ್ ಶೆಟ್ಟಿ ವೈ.
ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ತಮ್ಮ ಕೈಯಲ್ಲಿ 80,300 ರೂ. ಹಾಗೂ ಪತ್ನಿ ಬಳಿ 30,200 ರೂ. ನಗದು ಹಾಗೂ ವಿವಿಧ ಹೂಡಿಕೆ, ಬ್ಯಾಂಕ್ ಖಾತೆಯಲ್ಲಿ ಠೇವಣಿ, ಉಳಿತಾಯ ಸೇರಿದಂತೆ ತನ್ನ ಬಳಿ 4,16,16,490 ರೂ. ಹಾಗೂ ಪತ್ನಿ ಬಳಿ 1,44,70,892 ರೂ. ಹಾಗೂ ಪುತ್ರನ ಹೆಸರಿನಲ್ಲಿ 2 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. ತನ್ನ ಬಳಿ 3,87,10,122 ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಪತ್ನಿ ಬಳಿ 1,89,42,400 ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿರುವುದಾಗಿಯೂ ತನ್ನ ಹೆಸರಿನಲ್ಲಿ 96,48,789 ರೂ. ಸಾಲ ಇದೆ. ಸ್ಥಿರಾಸ್ತಿಯಲ್ಲಿ 57,95,124 ರೂ. ಮೌಲ್ಯದ ಆಸ್ತಿ ಪೂರ್ವಿ ಕರದ್ದಾಗಿದ್ದು, ಉಳಿದ ತನ್ನ 3,29,14,998 ರೂ. ಹಾಗೂ ಪತ್ನಿಯ 1,89,42,400 ರೂ. ಸ್ಥಿರಾಸ್ತಿ ಸ್ವಂತ ಗಳಿಕೆಯದ್ದು. 1 ಲಕ್ಷ ರೂ. ಮೌಲ್ಯದ 20 ಗ್ರಾಂ ಚಿನ್ನ ತನ್ನ ಬಳಿ ಇದ್ದು, ಪತ್ನಿ ಬಳಿ 19.79 ಲಕ್ಷ ರೂ. ಮೌಲ್ಯದ 395.98 ಗ್ರಾಂ ಚಿನ್ನ, 16500 ರೂ. ಮೌಲ್ಯದ 300 ಗ್ರಾಂ ಬೆಳ್ಳಿ ಇದೆ.ಡಾ| ಭರತ್ ಶೆಟ್ಟಿ ಹೆಸರಿನಲ್ಲಿ ಫೋರ್ಡ್ ಎಂಡೆವರ್, ಟೊಯೊಟಾ ಇನೋವಾ, ಕ್ರೇನ್ ಸೇರಿದಂತೆ ಒಟ್ಟು 20.81 ಲಕ್ಷ ರೂ. ಮೌಲ್ಯದ ವಾಹನಗಳಿವೆ. ಪತ್ನಿ 4 ಲಕ್ಷ ರೂ. ಮೌಲ್ಯದ ಹ್ಯುಂಡೈ ಗ್ರಾಂಡ್ ಕಾರಿನ ಮಾಲಕಿ.
ಲಕ್ಷ ಮೌಲ್ಯದ ಪಿಸ್ತೂಲು!: ಭರತ್ ಶೆಟ್ಟಿ ಅವರಲ್ಲಿ 1 ಲಕ್ಷ ರೂ. ಮೌಲ್ಯದ ಇಂಡಿಯನ್ ಮೇಡ್ ಪಿಸ್ತೂಲು ಇದೆ.
ರಕ್ಷಿತ್ ಶಿವರಾಂ
ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಬಳಿ ಒಟ್ಟು 1,67,41,755 ರೂ. ಚರಾಸ್ತಿ ಇದ್ದರೆ, ಅವರ ಪತ್ನಿ ಹೆಸರಿನಲ್ಲಿ 33,49,475 ರೂ. ಮೌಲ್ಯದ ಚರಾಸ್ತಿ ಇದೆ. ರಕ್ಷಿತ್ ಹೆಸರಿನಲ್ಲಿ 1,74,81,664 ರೂ. ಮೌಲ್ಯದ ಸ್ಥಿರಾಸ್ತಿ ಇದ್ದು, ಪತ್ನಿ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. ರಕ್ಷಿತ್ ಅವರಿಗೆ 1,13,60,714 ರೂ. ಸಾಲ ಇದೆ. ರಕ್ಷಿತ್ ಶಿವರಾಂ ಅವರು 100 ಗ್ರಾಂ. ಚಿನ್ನ ಹೊಂದಿದ್ದರೆ, ಅವರ ಪತ್ನಿ ಬಳಿ 500 ಗ್ರಾಂ. ಚಿನ್ನ, 1000 ಗ್ರಾಂ. ಬೆಳ್ಳಿಯ ಪೂಜಾ ಸಾಮಗ್ರಿಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.