ರಂಜಾನ್ ಆರ್ಥಿಕ ನೆರವು ಕಾರ್ಯಕ್ರಮ ವೇಳೆ ಕಾಲ್ತುಳಿತ: 80ಕ್ಕೂ ಅಧಿಕ ಮಂದಿ ಮೃತ್ಯು
Team Udayavani, Apr 20, 2023, 9:03 AM IST
ಸನಾ(ಯೆಮೆನ್): ರಂಜಾನ್ ಹಬ್ಬದ ಪ್ರಯುಕ್ತ ಆರ್ಥಿಕ ನೆರವು ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ 80 ಕ್ಕೂ ಹೆಚ್ಚಿನ ಮಂದಿ ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ಯೆಮನ್ ದೇಶದ ಸನಾದಲ್ಲಿ ನಡೆದಿರುವುದು ವರದಿಯಾಗಿದೆ.
ಸ್ಥಳೀಯ ಆಡಳಿತದ ಸಹಾಯವಿಲ್ಲದೆ, ವ್ಯಾಪಾರಿಗಳು ಬಡವರಿಗೆ ಆರ್ಥಿಕವಾಗಿ ನೆರವು ನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ರಂಜಾನ್ ಮಾಸದ ಪ್ರಯುಕ್ತ, ಹಬ್ಬ ಸಮೀಪವಾಗುತ್ತಿರುವುದರಿಂದ ಬಡ ಜನರಿಗೆ ಸಹಾಯವಾಗಲೆಂದು ಚಾರಿಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆರ್ಥಿಕ ನೆರವನ್ನು ಪಡೆಯಲು ನೂರಾರು ಮಂದಿ ಧಾವಿಸಿ ಬಂದಿದ್ದಾರೆ. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಹೌತಿಯ ಗೃಹ ಸಚಿವಾಲಯ ಘಟನೆ ಬಗ್ಗೆ ಹೇಳಿದೆ.
ರಾಜಧಾನಿ ಸನಾದ ಬಾಬ್ ಅಲ್-ಯೆಮೆನ್ ಜಿಲ್ಲೆಯಲ್ಲಿ ಚಾರಿಟಿಯ ಹಣ ಪಡೆಯಲು ಬರುವ ವೇಳೆ ಕಾಲ್ತುಳಿತ ಉಂಟಾಗಿ 80 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 385 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನು 13 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೌತಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೌತಿಯ ಸೈನಿಕರು ಪರಿಸ್ಥಿತಿಯನ್ನು ನಿಯಂತ್ರಿಸಲು, ಜನರ ಗುಂಪನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡು ವಿದ್ಯುತ್ ತಂತಿಗೆ ತಗುಲಿ ಸ್ಫೋಟಗೊಂಡಿದೆ. ಈ ವೇಳೆ ಜನರ ಭೀತಿಯಿಂದ ಓಡುವಾಗ ಕಾಲ್ತುಳಿತ ಉಂಟಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Kota: ಮನೆಯ ಅನ್ನ ಸಾಂಬಾರ್ ನಲ್ಲಿ ಗಾಜಿನ ಚೂರು… ನೆರೆಮನೆಯ ಯುವಕನ ಕೃತ್ಯ ಬಯಲು
ಘಟನೆಯ ಬಳಿಕ ಇಬ್ಬರು ಆಯೋಜಕರನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ ಹೌತಿ ಆಂತರಿಕ ಸಚಿವಾಲಯ ಹೇಳಿದೆ.
2014 ರಿಂದ ಯೆಮೆನ್‌ನ ರಾಜಧಾನಿಯು ಇರಾನ್ ಬೆಂಬಲಿತ ಹೌತಿಗಳ ನಿಯಂತ್ರಣದಲ್ಲಿದೆ.
ಬ್ರಿಗೇಡಿಯರ್ ಅಬ್ದುಲ್-ಖಾಲೆಕ್ ಅಲ್-ಅಘರಿ ಈ ಬಗ್ಗೆ ಪ್ರತಿಕ್ರಿಯಿಸಿ, ಆಯೋಜಕರು ಸ್ಥಳೀಯ ಆಡಳಿತದ ಯಾವುದೇ ನೆರವು ಇಲ್ಲದೆ, ಮನಬಂದಂತೆ ಎಲ್ಲರಿಗೂ ಹಣ ಹಂಚಿದ್ದೇ ಈ ದುರ್ಘಟನೆಗೆ ಕಾರಣವೆಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.