Shahapura: ಕಾಂಗ್ರೆಸ್ ಮುಖಂಡ ಜೆಡಿಎಸ್ ಸೇರ್ಪಡೆ
ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಹಾಜರಿದ್ದ ಮುಖಂಡ ಜೆಡಿಎಸ್ ಸೇರ್ಪಡೆ
Team Udayavani, Apr 20, 2023, 9:42 AM IST
ಶಹಾಪುರ: ಮೊನ್ನೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಮಂತ್ರಿ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕೈ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುವಾಗ ನಾಲ್ವರು ಮುಖಂಡರಲ್ಲಿ ಒಬ್ಬರಾಗಿ ಹಾಜರಾಗಿದ್ದ ಮುಸ್ಲಿಂ ಸಮುದಾಯದ ಮುಖಂಡ ಇಬ್ರಾಹಿಂ ಸಾಬ ಶಿರವಾಳ ಬುಧವಾರ ರಾತ್ರಿ ಜೆಡಿಎಸ್ ಸೇರ್ಪಡೆಯಾಗಿರುವದು ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದೆ.
ಮೂಲತಃ ಶಿರವಾಳದವರಾದ ಇಬ್ರಾಹಿಂಸಾಬ ಶಿರವಾಳ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳರ ಆತ್ಮೀಯರಾಗಿದ್ದು, ಗುರು ಪಾಟೀಲರ ತಂದೆ ಅವರ ಕಾಲದಿಂದಲೂ ಅವರೊಂದಿಗೆ ಇದ್ದವರು, ಆದರೆ ಕಳೆದ ಚುನಾವಣೆಯಲ್ಲಿ ಗುರು ಪಾಟೀಲರು ಬಿಜೆಪಿ ಯಿಂದ ಸ್ಪರ್ಧೆ ಮಾಡಿದಾಗ, ಕೆಲ ವಿಚಾರಗಳಿಗೆ ಹೊಂದಾಣಿಕೆ ಆಗದ ಹಿನ್ನೆಲೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದರೆ ಹಲವಾರು ಚುನಾವಣೆಯಲ್ಲಿ ಶಿರವಾಳ ಮನೆತನದ ಪರವಾಗಿ ಇಬ್ರಾಹಿಂಸಾಬ ಕೆಲಸ ಮಾಡಿದವರಾಗಿದ್ದರು. ಬುಧವಾರ ಇಬ್ರಾಹಿಂಸಾಬ ಅವರು ಗುರು ಪಾಟೀಲ್ ನೇತೃತ್ವದಲ್ಲಿ ಮತ್ತೆ ವಾಪಸ್ ಆಗಿದ್ದು, ಚುನಾವಣೆ ನಗರದಲ್ಲಿ ರಂಗೇರುತ್ತಿದೆ ಎನ್ನಬಹುದು.
ಜೆಡಿಎಸ್ ಸೇರ್ಪಡೆ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಲಾಲನಸಾಬ ಖುರೇಶಿ, ಶಂಕರಗೌಡ ಶಿರವಾಳ, ಮಲ್ಲಿಕಾರ್ಜುನ ಗಂಧದಮಠ, ಮೋನಪ್ಪ ಕಿಣ್ಣಿ, ನುಮಾನ್ ಖಾಜಿ, ಬಾಬಾ ಸೇರಿದಂತೆ ಪ್ರಮುಖರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.