Karkala Constituency; ಕಾರ್ಕಳ- ವಿ. ಸುನಿಲ್ ಕುಮಾರ್ 5.63 ಕೋಟಿ ರೂ. ಮೌಲ್ಯದ ಆಸ್ತಿ
ಪತ್ನಿ ಕಡ್ತಲ ಗ್ರಾಮದಲ್ಲಿ ಒಟ್ಟು 4.18 ಎಕರೆ ಕೃಷಿಭೂಮಿ ಹೊಂದಿದ್ದಾರೆ
Team Udayavani, Apr 20, 2023, 10:37 AM IST
ಕಾರ್ಕಳ ;ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಅವರು ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು ರೂ. 5.63 ಕೋಟಿ ರೂ. ಮೌಲ್ಯದ ಸಂಪತ್ತು ಹೊಂದಿದ್ದಾರೆ.
ಸುನಿಲ್ ಅವರ ಕುಟುಂಬದ ಬಳಿ ಒಟ್ಟು 7.98 ಕೋಟಿ ರೂ. ಆಸ್ತಿ ಇದೆ. ಪತ್ನಿ ಪ್ರಿಯಾಂಕಾ 1.80 ಕೋಟಿ ರೂ. ಮೌಲ್ಯದ ಆಸ್ತಿ ಹಾಗೂ ತಂದೆ ವಾಸುದೇವ ಎಂ.ಕೆ. ಅವರ 54.14 ಲಕ್ಷ ರೂ. ಮೌಲ್ಯದ ಆಸ್ತಿಯೂ ಸೇರಿದೆ. ಸುನಿಲ್ 45.16 ಲಕ್ಷ ರೂ. ಸಾಲ ಹೊಂದಿದ್ದಾರೆ.
24.60 ಲಕ್ಷ ರೂ. ಬೆಲೆಯ ಇನ್ನೋವಾ ಕಾರನ್ನು ಹೊಂದಿದ್ದು ವಿವಿಧ ಬ್ಯಾಂಕ್‌ಗಳಲ್ಲಿ ಇರುವ ಠೇವಣಿ ಸಹಿತ ಒಟ್ಟು 12.25 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಅವರ ಪತ್ನಿ 4.06 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಸುನಿಲ್ ಒಟ್ಟು 1. 60 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಅವರ ಪತ್ನಿ 1.43 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಸುನಿಲ್ ವಿವಿಧೆಡೆ ಒಟ್ಟು 10.27 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ಇದರ ಮೌಲ್ಯ ರೂ.1.04 ಕೋಟಿ ರೂ. ಹಾಗೂ 148.97 ಸೆಂಟ್ಸ್ ಕೃಷಿಯೇತರ ಭೂಮಿಯನ್ನು ಹೊಂದಿದ್ದು ಅದರ ಮೌಲ್ಯ 24.96 ಲಕ್ಷ ರೂ. ಆಗಿದೆ. ಪತ್ನಿ ಕಡ್ತಲ ಗ್ರಾಮದಲ್ಲಿ ಒಟ್ಟು 4.18 ಎಕರೆ ಕೃಷಿಭೂಮಿ ಹೊಂದಿದ್ದು, ಇದರ ಮೌಲ್ಯ 37.62 ಲಕ್ಷ ರೂ. ಆಗಿದೆ.
ನಿಟ್ಟೆ ಗ್ರಾಮದಲ್ಲಿ 5014 ಚ.ಅಡಿ ವಿಸ್ತೀರ್ಣದ ವಸತಿ ಕಟ್ಟಡವನ್ನು ಹೊಂದಿದ್ದಾರೆ. ಸಂಬಳ, ಗುತ್ತಿಗೆ ಬಾಡಿಗೆ ಕೃಷಿ ಹಾಗೂ ಬ್ಯಾಂಕ್ ಠೇವಣಿಯ ಬಡ್ಡಿಯಿಂದ ವರ್ಷಕ್ಕೆ 77.02 ಲಕ್ಷ ರೂ. ವರಮಾನ ಹಾಗೂ ಪತ್ನಿಗೆ ಬ್ಯಾಂಕ್ ಬಡ್ಡಿ ಹಾಗೂ ಕೃಷಿಯಿಂದ ವಾರ್ಷಿಕ 15.26 ಲಕ್ಷ ರೂ. ವರಮಾನ ಬರುತ್ತಿದೆ. ತಂದೆಗೆ ಪಿಂಚಣಿ ಹಾಗೂ ಬ್ಯಾಂಕ್ ಬಡ್ಡಿಯಿಂದ ವಾರ್ಷಿಕ 6.73 ಲಕ್ಷ ರೂ. ವರಮಾನ ಬರುತ್ತಿದೆ.
ಸುನಿಲ್ ಬಳಿ 272.70 ಗ್ರಾಂ ಚಿನ್ನಾಭರಣವಿದ್ದು, ಅದರ ಮೌಲ್ಯ 14.31 ಲಕ್ಷ ರೂ. ಹಾಗೂ ಪತ್ನಿ ಬಳಿ 2,230 ಗ್ರಾಂ ಚಿನ್ನಾಭರಣವಿದ್ದು ಇದರ ಮೌಲ್ಯ ರೂ. 1.17 ಕೋಟಿ ರೂ. ಪತ್ನಿ 10.60 ಕೆ.ಜಿ ಬೆಳ್ಳಿಯನ್ನು ಹೊಂದಿದ್ದು ಅದರ ಮೌಲ್ಯ 7.42 ಲಕ್ಷ ರೂ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.