PUC Result ರಾಜ್ಯಕ್ಕೆ 2ನೇ ರ‍್ಯಾಂಕ್ ಬಂದವ ಗುಳೆಹೋಗಿದ್ದ…!
ರತ್ನಗಿರಿಯಲ್ಲಿ ತಂದೆ ಜತೆ ಕೆಲಸ... ಸಿಹಿ-ಸಂಭ್ರಮ ಆಚರಣೆ
Team Udayavani, Apr 21, 2023, 3:37 PM IST
ವಿಜಯಪುರ : ಪಿಯುಸಿ ದ್ವಿತಿಯ ವರ್ಷದ ಫಲಿತಾಂಶದಲ್ಲಿ ತನಗೆ ರಾಜ್ಯಕ್ಕೆ 2ನೇ ರ‍್ಯಾಂಕ್ ಬಂದ ಸುದ್ದಿಯನ್ನು ಶಿಕ್ಷಕರು ಮೊಬೈಲ್ ಮೂಲಕ ಸಂತಸದ ಸುದ್ದಿ ತಿಳಿಸಿದಾಗ ಆತ ಗುಳೆಹೋಗಿದ್ದ. ನೆರೆ ರಾಜ್ಯ ಮಹಾರಾಷ್ಟ್ರದ ನೆಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಸುದ್ದಿ ತಿಳಿದ ಕೂಲಿ ಗ್ಯಾಂಗಿನ ಜನರು ಕನ್ನಡದ ಕುವರನ ಸಾಧನೆಗೆ ಮಹಾರಾಷ್ಟ್ರ ನೆಲದಲ್ಲಿ ಸಿಹಿ ತಿನ್ನಿಸಿ ಸಂಭ್ರಮ ಮೆರೆದಿದ್ದಾರೆ.
ಇದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಬಂದಿರುವ ರಾಹುಲ್ ಮೋತಿಲಾಲ್ ರಾಠೋಡ ಎಂಬ ಪ್ರತಿಭಾವಂತ ವಿದ್ಯಾರ್ಥಿ ಅನುಭವಿಸಿದ ಅದ್ಭುತ ಕ್ಷಣ. ಯಾದಗಿರಿ ಜಿಲ್ಲೆಯ ಹುಣಡಸಗಿ ತಾಲೂಕಿನ ಮನ್ನಾನಾಯಕ ತಾಂಡಾದ ಈ ವಿದ್ಯಾರ್ಥಿಯ ತಂದೆ ಮೋತಿಲಾಲ್-ತಾಯಿ ಸವಿತಾ ಒಂದೂವರೆ ದಶಕದ ಹಿಂದೆಯೇ ಮಹಾರಾಷ್ಟ್ರದ ರತ್ನಗಿರಿಗೆ ಗುಳೆ ಹೋಗಿದ್ದಾರೆ.
ಬಡತನದಿಂದ ತಾವು ಅನುಭವಿಸುತ್ತಿರುವ ಸಂಕಷ್ಟದ ಜೀವನ ತಮ್ಮ ಮಕ್ಕಳಿಗೆ ಬಾರದಿರಲೆಂದು ಮಕ್ಕಳನ್ನು ಅವರವರ ಶಿಕ್ಷಣಕ್ಕೆ ತಕ್ಕಂತೆ ಬೇರೆ ಬೇರೆ ಸ್ಥಳಗಳಲ್ಲಿ ಶಾಲೆಗೆ ಸೇರಿಸಿದ್ದಾರೆ. ಮಗ ರಾಹುಲ್ ತಾಳಿಕೋಟೆಯ ಎಸ್.ಕೆ.ಪಿಯು ಕಾಲೇಜಿನಲ್ಲಿ ಓದುತ್ತಿದ್ದಾನೆ. ಹೆಣ್ಣು ಮಕ್ಕಳಾದ ರಂಜಿತಾಳನ್ನು ಮುರಾರ್ಜಿ ಶಾಲೆಗೂ, ದೀಪಾಳನ್ನು ಕೆಂಭಾವಿ ಖಾಸಗಿ ಶಾಲೆಗೂ ದಾಖಲು ಮಾಡಿದ್ದಾರೆ.
ಬಡತನ ಬೇಗೆಯಲ್ಲೂ ತಂದೆಯ ಬೆವರ ಹನಿಯನ್ನು ಅರಿತಿರುವ ಮಕ್ಕಳು ಎಲ್ಲರೂ ಪ್ರತಿಭಾವಂತಿಕೆ ಮೆರೆಯುತ್ತಿದ್ದಾರೆ. ಇದೀಗ ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 2ನೇ ರ‍್ಯಾಂಕ್ ಸಾಧನೆಯಿಂದಲೇ ರಾಹುಲ್ ಹೆತ್ತವರಿಗೆ ಮಾತ್ರವಲ್ಲದೇ ಹುಟ್ಟಿದ ಊರಿಗೆ, ಶಿಕ್ಷಣ ಕೊಟ್ಟ ಕಾಲೇಜಿಗೆ, ವಿದ್ಯೆ ಕಲಿಸಿದ ಗುರುಗಳಿಗೆ ಕೀರ್ತಿ ತಂದಿದ್ದಾನೆ.
ರಾಹುಲ್ ರ‍್ಯಾಂಕ್ ಪಡೆದ ಸುದ್ದಿ ತಿಳಿಯುತ್ತಲೇ ರಸ್ತೆ ಕಾಮಗಾರಿ ಕೆಲಸದಲ್ಲಿದ್ದ ತಂದೆ ಹಾಗೂ ಕಾರ್ಮಿಕ ಸ್ನೇಹಿತರ ಬಳಗ ಕೆಲಸದ ಸ್ಥಳದಲ್ಲೇ ರಾಹುಲ್‍ಗೆ ಸಿಹಿ ತಿನ್ನಿಸಿ ಸಂಭ್ರಮ ಆಚರಿಸಿದೆ. ಸಂತಸದ ಸುದ್ದಿಹೊರುತ್ತು ತಂದೆ-ಮಗ ಮನೆಗೆ ಬರುತ್ತಲೇ ತಾವಿ ಹಾಗೂ ಕುಟುಂಬದ ಇತರೆ ಸದಸ್ಯರು ಸಿಹಿ ಹಂಚುವ ಜೊತೆಗೆ ಕಾರ್ಮಿಕರ ಬಳಕ್ಕೆ ತಂಪು ಪಾನೀಯದ ಪಾರ್ಟಿ ಕೊಡಿಸಿ ಸಂತಸ ಸೂರೆಗೊಳಿಸಿದ್ದಾರೆ.
ಸಮಾಶಾಸ್ತ್ರ, ಶಿಕ್ಷಣ ವಿಷಯದಲ್ಲಿ ನೂರಕ್ಕೆ 100 ಅಂಕ ಪಡೆದಿರುವ ರಾಹುಲ್, ಸಂಸ್ಕøತದಲ್ಲಿ 99, ಕನ್ನಡ ಹಾಗೂ ಇತಿಹಾಸ ವಿಭಾಗದಲ್ಲಿ 98 ಅಂಕ ಪಡೆದಿದ್ದಾನೆ. ಆರ್ಥಶಾಸ್ತ್ರದಲ್ಲಿ ಪಡೆದಿರುವ ಅಂಕ 97.
ನಮ್ಮ ಪರಿಶ್ರಮಕ್ಕೆ ತಕ್ಕಂತೆ ನಮ್ಮ ಮಗ ಶೈಕ್ಷಣಿಕ ಸಾಧನೆ ಮೂಲಕ ಕೀರ್ತಿ ತಂದಿರುವುದು ಸಂತಸವಾಗಿದೆ. ಆತನ ಸಾದನೆಗೆ ನಮ್ಮಲ್ಲಿ ವರ್ಣಿಸಲು ಪದಗಳಿಲ್ಲ. ನಾವು ದುಡಿಯುವ ಕಷ್ಟದ ಅರಿವು ನಮ್ಮ ಮಕ್ಕಳಿಗೆ ಇರುವ ಕಾರಣವೇ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾನೆ ರಾಹುಲ್ ತಂದೆ ಮೋತಿಲಾಲ್ ರಾಠೋಡ.
ನಮ್ಮ ವಿದ್ಯಾರ್ಥಿ ರಾಹುಲ್ ಶಿಸ್ತು ಮಾತ್ರವಲ್ಲ ಪ್ರತಿಭಾವಂತನೂ ಹೌದು. ಶಾಂತ ಸ್ವಭಾವದವದ ಆತ ಶಾಲೆಯಲ್ಲಿ ಹೇಳುತ್ತಿದ್ದ ಪಾಠವನ್ನು ತದೇಕಚಿತ್ತದಿಂದ ಕೇಳುತ್ತಿದ್ದ. ತಿಳಿಯದ ವಿಷಯದ ಕುರಿತು ನಮ್ಮೊಂದಿಗೆ ಚರ್ಚಿಸಿ, ಲೋಪಗಳನ್ನು ತಿದ್ದಿಕೊಳ್ಳುತ್ತಿದ್ದ. ಆತನ ಪರಿಶ್ರಮ ಇದೀಗ ನಮ್ಮ ಕಣ್ಮುಂದೆ ಫಲಿತಾಂಶ ತಂದಿಟ್ಟಿದೆ ಎಂದು ಕಾಲೇಜಿನ ಉಪನ್ಯಾಸಕ ಬಳಕ ಸಂಭ್ರಮಿಸುತ್ತಿದೆ.
ಕೆಎಎಸ್-ಐಎಎಸ್ ಅಧಿಕಾರಿಯಾಗುವ ಗುರಿ ಇದೆ. ಕುಟುಂಬದ ಬಡತ ನೀಗಲು ನಾನು ಧಾರವಾಡಕ್ಕೆ ಹೋಗಿ ಬಿಎ ಪದವಿ ಪಡೆದು, ಗುರಿ ಸಾಧನೆಗೆ ಪರಿಶ್ರಮದೊಂದಿಗೆ ಹೆತ್ತವರ ಸಂಕಷ್ಟ ನಿವಾರಿಸುವ ಮಹದಾಸೆ ಕಣ್ಮುಂದಿದೆ ಎಂದು ರಾಹುಲ್ ರಾಠೋಡ ಹೇಳಿಕೊಂಡಿದ್ದಾನೆ.
ಮಾಸಿಕ, ತ್ರೈಮಾಸಿಕ ಸೇರಿದಂತೆ ಇತರೆ ಪರೀಕ್ಷೆಗಳಲ್ಲಿ ತನಗೆ ಕಡಿಮೆ ಅಂಕ ಬಂದಲ್ಲಿ ತಕ್ಷಣ ಕಡಿತವಾದ ಅಂಕಗಳ ಕುರಿತು ರಾಹುಲ್ ಉಪನ್ಯಾಸಕರೊಂದಿಗೆ ಚರ್ಚಿಸಿ, ಸುಧಾರಿಸಿಕೊಳ್ಳುತ್ತಿದ್ದ. ಓರ್ವ ಶಿಕ್ಷಕರಿಗೆ ಇದಕ್ಕಿಂತ ಇನ್ನೇನು ಗುರುಕಾಣಿಕೆ ಬೇಕಿಲ್ಲ ಎಂದು ಎಸ್.ಕೆ. ಪ.ಪೂ. ತಾಳಿಕೋಟೆ ಕಾಲೇಜು ಉಪನ್ಯಾಸಕಿ ಬಸಮ್ಮ ನಾಟೀಕರ ಅಭಿನಂದಿಸಿದ್ದಾರೆ.
ನಮ್ಮ ಪರಿಶ್ರಮ ಆತನನ್ನು ಸಾಧನೆ ಆಸನದಲ್ಲಿ ಕೂಡಿಸಿದೆ ಎನ್ನುವ ಮಗನ ಕೃತಜ್ಞತೆ ನಮ್ಮ ಕಣ್ಣಂಚಲ್ಲೂ ನೀರು ತರಿಸಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಿಂತ ನಮಗೆ ಇನ್ನೇನು ಬೇಕಿದೆ ಹೇಳಿ. ಇನ್ನೂ ಉನ್ನತ ಸ್ಥಾನ, ಕೀರ್ತಿ ಸಂಪಾದಿಸಲಿ ಎಂದು ರಾಹುಲ್ ಹೆತ್ತವರಾದ ಮೋತಿಲಾಲ್-ಸವಿತಾ ರಾಠೋಡ ಸಂಭ್ರಮ ವ್ಯಕ್ತ ಪಡಿಸಿದ್ದಾರೆ.
ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.