ವಿಷಯ-ವಿಶೇಷ: ತಾಪಮಾನ ಹೆಚ್ಚಳ-ಏಷ್ಯಾದ ದೇಶಗಳು ತತ್ತರ
Team Udayavani, Apr 23, 2023, 7:00 AM IST
ಪ್ರಸಕ್ತ ವರ್ಷದ ಬೇಸಗೆ ಋತುವಿನಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಗರಿಷ್ಠ ಪ್ರಮಾಣದ ತಾಪಮಾನ ದಾಖಲಾಗುವ ಮೂಲಕ ಜನರನ್ನು ಬಸವಳಿಯುವಂತೆ ಮಾಡಿದೆ. ಅದರಲ್ಲೂ ಏಷ್ಯಾದ ರಾಷ್ಟ್ರಗಳು ಬಿಸಿಲ ಬೇಗೆಯಿಂದ ತತ್ತರಿಸಿದ್ದು, ತಾಪಮಾನ ಈ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿದೆ. ಎಪ್ರಿಲ್ ತಿಂಗಳಲ್ಲಂತೂ ಆಗ್ನೇಯ ಏಷ್ಯಾದ ದೇಶಗಳು, ಚೀನ, ಥೈಲ್ಯಾಂಡ್, ಬಾಂಗ್ಲಾದೇಶ, ಪಾಕಿಸ್ಥಾನ, ಭಾರತ ಆದಿ ಯಾಗಿ ಬಹುತೇಕ ದೇಶಗಳಲ್ಲಿ ತಾಪ ಮಾನ ದಿನಂಪ್ರತಿ ಹೊಸ ದಾಖಲೆಯನ್ನು ಬರೆ ಯುತ್ತಿದೆ. ತಾಪಮಾನ ಏರಿಕೆಯ ಜತೆಜತೆ ಯಲ್ಲಿ ಉಷ್ಣಹವೆಯ ಪ್ರಕೋಪವೂ ಅಧಿಕ ವಾಗಿದ್ದು ಜನರನ್ನು ಸಂಕಷ್ಟಕ್ಕೀಡು ಮಾಡಿದೆ.
ಥೈಲ್ಯಾಂಡ್ನಲ್ಲಿ ದಾಖಲೆ ತಾಪಮಾನ
ಪ್ರತೀ ವರ್ಷದ ಎಪ್ರಿಲ್ ಮತ್ತು ಮೇ ತಿಂಗಳು ಥೈಲ್ಯಾಂಡ್ನಲ್ಲಿ ತಾಪಮಾನ ಅತ್ಯಂತ ಹೆಚ್ಚಾಗಿರುತ್ತದೆ. ಆದರೆ ಈ ಬಾರಿ ಎಪ್ರಿಲ್ ತಿಂಗಳಲ್ಲಿ ಪ್ರತಿದಿನವೂ ತಾಪಮಾನ ಹೆಚ್ಚುತ್ತಲೇ ಸಾಗಿದ್ದು ತನ್ನ ಹಳೆಯ ದಾಖಲೆಯನ್ನೆಲ್ಲ ಮುರಿದು ಮುನ್ನಡೆಯುತ್ತಿದೆ. ಶುಕ್ರವಾರ ಥೈಲ್ಯಾಂಡ್ನ ತಕ್ನಲ್ಲಿ 45.4 ಡಿ.ಸೆ. ತಾಪಮಾನ ದಾಖಲಾಗಿದ್ದು ಇದು ಈವರೆಗೆ ದೇಶದ ಯಾವುದೇ ಭಾಗದಲ್ಲಿ ದಾಖಲಾದ ಅತ್ಯಂತ ಗರಿಷ್ಠ ತಾಪಮಾನವಾಗಿದೆ. ಇಷ್ಟು ಮಾತ್ರವಲ್ಲದೆ ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನ 43 ಡಿ.ಸೆ. ನ ಆಸುಪಾಸಿನಲ್ಲಿದೆ.
2016ರಲ್ಲಿ ಮೆ ಹಾಂಗ್ ಸನ್ ಪ್ರಾಂತ ದಲ್ಲಿ ದಾಖಲಾಗಿದ್ದ ಗರಿಷ್ಠ 44.6 ಡಿ. ಸೆ. ತಾಪಮಾನ ಥೈಲ್ಯಾಂಡ್ನ ಈವರೆಗಿನ ದಾಖಲೆಯಾಗಿತ್ತು. ಆದರೆ ಪ್ರಸಕ್ತ ವರ್ಷ ಎಪ್ರಿಲ್ ತಿಂಗಳ ಆರಂಭದಿಂದಲೇ ತಾಪ ಮಾನ 40 ಡಿ. ಸೆ. ಗಳಿಗಿಂತ ಅಧಿಕವಾಗಿದ್ದು ಈ ಹಿಂದಿನ ಎಲ್ಲ ದಾಖಲೆಗಳನ್ನೂ ಪುಡಿ ಗಟ್ಟಿದೆ. ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಜನರನ್ನು ಕಾಡುತ್ತಿದೆ ಆರೋಗ್ಯ ಸಮಸ್ಯೆ
ಜನರಿಗೆ ಬಿಸಿಲಿನ ಝಳದಿಂದ ರಕ್ಷಣೆ ಪಡೆಯುವುದೇ ಬಲುದೊಡ್ಡ ಸವಾಲಾಗಿದೆ. ಹಗಲಿನ ವೇಳೆ ಬಿಸಿಲಾಘಾತದಿಂದ ಪಾರಾಗಲು ಸಾಧ್ಯವಾದಷ್ಟು ಮನೆ ಅಥವಾ ಕಚೇರಿಯೊಳಗೆ ರಕ್ಷಣೆ ಪಡೆದುಕೊಳ್ಳುವಂತೆ ಅಲ್ಲಿನ ಸರಕಾರ ಜನತೆಗೆ ಸಲಹೆ ನೀಡಿದೆ.
ತಾಪಮಾನ ಹೆಚ್ಚಳದ ಪರಿಣಾಮವಾಗಿ ಸಾವಿರಾರು ಜನರು ಉಸಿರಾಟ ಸಂಬಂಧಿ ಸಮಸ್ಯೆಗಳು, ಗಂಟಲು ನೋವು ಮತ್ತಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಅಷ್ಟು ಮಾತ್ರವಲ್ಲದೆ ಪ್ರತಿನಿತ್ಯ ಎಂಬಂತೆ ಜನರು ಬಿಸಿಲಿನ ಆಘಾತಕ್ಕೆ ಸಿಲುಕಿ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹವಾಮಾನ ತಜ್ಞರ ಸೂಚನೆಯಂತೆ ಥೈಲ್ಯಾಂಡ್ ಸರಕಾರ ಬಿಸಿಲಿನ ಝಳದಿಂದ ಪಾರಾಗಲು ಅನುಸರಿಸಬೇಕಾದ ಮುಂಜಾಗ್ರತ ಕ್ರಮಗಳು ಮತ್ತು ಆರೋಗ್ಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಚೀನಕ್ಕೂ ತಟ್ಟಿದೆ ಸೂರ್ಯನ ತಾಪ
ಭಾರತದ ನೆರೆಯ ರಾಷ್ಟ್ರ ಚೀನದಲ್ಲೂ ತಾಪಮಾನ ಏರುಗತಿಯಲ್ಲಿದೆ. ದೇಶದ 12 ಪ್ರಾಂತಗಳಲ್ಲಿರುವ 109 ಹವಾಮಾನ ಕೇಂದ್ರಗಳಲ್ಲಿ ಕಳೆದ ಸೋಮವಾರ ಗರಿಷ್ಠ ತಾಪಮಾನ ದಾಖಲಾಗಿದ್ದು ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಇನ್ನುಳಿದ 9 ಕೇಂದ್ರಗಳಲ್ಲಿ ದಾಖಲಾಗಿರುವ ತಾಪಮಾನ ಈ ಹಿಂದಿನ ದಾಖಲೆಯನ್ನು ಸರಿಗಟ್ಟಿದೆ. ಬಹುತೇಕ ಹವಾಮಾನ ಕೇಂದ್ರಗಳಲ್ಲಿ ತಾಪಮಾನ 35-39 ಡಿ. ಸೆ. ಗಳ ಅಂತರದಲ್ಲಿದೆ.
ಸಾಮಾನ್ಯವಾಗಿ ಚೀನದಲ್ಲಿ ಜೂನ್ ಮತ್ತು ಜುಲೈ ಬಿರುಬಿಸಿಲಿನ ಮಾಸಗಳಾಗಿವೆ. ಕಳೆದ ವರ್ಷ ಚಾಂಗ್ಕ್ವಿಂಗ್ ಪ್ರಾಂತದ ಬೀಬೈಯಲ್ಲಿ 45 ಡಿ.ಸೆ. ತಾಪಮಾನ ದಾಖಲಾಗಿದ್ದು ಈವರೆಗಿನ ಗರಿಷ್ಠ ತಾಪಮಾನವಾಗಿತ್ತು. ಈ ಸಂದರ್ಭದಲ್ಲಿ ಪ್ರಾಂತದ ಬಹುತೇಕ ನದಿಗಳು ಸಂಪೂರ್ಣ ಬತ್ತಿಹೋಗಿತ್ತಲ್ಲದೆ ಅರಣ್ಯಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡು ವ್ಯಾಪಕ ಹಾನಿ ಸಂಭವಿಸಿತ್ತು. ಆದರೆ ಈ ಬಾರಿ ಎಪ್ರಿಲ್ನಲ್ಲಿಯೇ ಬಿಸಿಲಿನ ಕಾವು ಒಂದೇ ಸಮನೆ ಏರತೊಡಗಿದ್ದು ಮುಂದಿನ ದಿನಗಳಲ್ಲಿ ಇದರ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬಾಂಗ್ಲಾದಲ್ಲೂ ಏರುತ್ತಿದೆ ಬಿಸಿಲ ಕಾವು
ಬಾಂಗ್ಲಾದೇಶದಲ್ಲೂ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಎಪ್ರಿಲ್ ಆರಂಭದಿಂದಲೇ ಒಂದೇ ಸಮನೆ ಸೂರ್ಯ ಸುಡುತ್ತಿದ್ದು ಜನರನ್ನು ಜರ್ಝರಿತಗೊಳಿಸಿದೆ. ಇಲ್ಲಿನ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ 43-45 ಡಿ.ಸೆ. ನ ಆಸುಪಾಸಿನಲ್ಲಿದೆ. ಮೇ ಅಂತ್ಯದವರೆಗೂ ತಾಪಮಾನ ಹೆಚ್ಚಳದ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಾರಣವೇನು?
ನಿಸರ್ಗ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಮಾನವನ ಹಸ್ತಕ್ಷೇಪ, ಅತಿಯಾದ ಕೈಗಾ ರಿಕೀಕರಣದ ಕಾರಣದಿಂದಾಗಿ ಹವಾಮಾನ ಬದಲಾವಣೆಯ ಪರಿಣಾಮದ ಭಾಗ ವಾಗಿ ತಾಪಮಾನ ಒಂದೇ ಸಮನೆ ಹೆಚ್ಚುತ್ತಿದೆ ಮತ್ತು ಈ ಹೆಚ್ಚಳದ ಪ್ರಕ್ರಿಯೆ ಸುದೀರ್ಘ ಅವಧಿಯವರೆಗೆ ವಿಸ್ತರಿಸಲ್ಪಡುತ್ತಿದೆ ಎಂಬುದು ಹಲವಾರು ಅಧ್ಯಯನ ಗಳಿಂದ ಸಾಬೀತಾಗಿದೆ. ಅಲ್ಲದೆ ಬಂಗಾಲಕೊಲ್ಲಿಯಿಂದ ಫಿಲಿಪ್ಪೀನ್ ಸಮುದ್ರದತ್ತ ಚಲಿಸುತ್ತಿರುವ ಗಾಳಿಯ ಒತ್ತಡದ ಪರಿಣಾಮವಾಗಿ ಮೋಡಗಳು ಸೃಷ್ಟಿಯಾಗಲು ಬಲುದೊಡ್ಡ ತಡೆಯಾಗಿ ಪರಿಣಮಿಸಿವೆ. ಇದೇ ವೇಳೆ ಅರಬಿ ಸಮುದ್ರದ ಅಲ್ಲಲ್ಲಿ ಬಿಸಿಗಾಳಿ ಸೃಷ್ಟಿಯಾಗಿರುವುದರಿಂದ ತಾಪಮಾನ ಹೆಚ್ಚುತ್ತಿದೆ. ಮೋಡಗಳು ಸೃಷ್ಟಿಯಾಗಿ ಮಳೆ ಸುರಿಯಲು ಪೂರಕವಾದ ವಾತಾವರಣ ನಿರ್ಮಾಣಗೊಳ್ಳದೇ ಇರುವುದರಿಂದ ಮಳೆ ವಿಳಂಬಗೊಳ್ಳುತ್ತಿದೆ. ಬೇಸಗೆ ಮಳೆ ವಿಳಂಬವಾದಷ್ಟು ತಾಪ ಮಾನದಲ್ಲಿನ ಏರಿಕೆ ಪ್ರಕ್ರಿಯೆ ಮುಂದುವರಿ ಯುತ್ತದೆ ಎಂಬುದು ಹವಾಮಾನ ತಜ್ಞರ ವಿಶ್ಲೇಷಣೆ.
ಏಷ್ಯಾದ ಇತರ ರಾಷ್ಟ್ರಗಳಲ್ಲೂ ಧಗೆ
ಜಪಾನ್, ಕೊರಿಯಾ, ಭಾರತ, ನೇಪಾಲ, ಪಾಕಿಸ್ಥಾನ, ಮ್ಯಾನ್ಮಾರ್, ಲಾವೋಸ್, ತುರ್ಕೆಮೆನಿಸ್ಥಾನ್, ಉಜ್ಬೆಕಿಸ್ಥಾನ್ ಸಹಿತ ಏಷ್ಯಾದ ಇತರ ರಾಷ್ಟ್ರಗಳಲ್ಲೂ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿದೆ. ಈ ದೇಶಗಳಲ್ಲಿನ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ ಈಗಾಗಲೇ 40 ಡಿ.ಸೆ.ಗಡಿಯನ್ನು ದಾಟಿದ್ದು ಹೆಚ್ಚಿನೆಡೆಗಳಲ್ಲಿ ಇದು 43 ಡಿ. ಸೆ.ಗಳವರೆಗೂ ತಲುಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.