RCB: ಗೋ ಗ್ರೀನ್‌, ಗೋ ವಿನ್‌…: ಟೇಬಲ್‌ ಟಾಪರ್‌ ರಾಜಸ್ಥಾನ್‌ ರಾಯಲ್ಸ್‌ ಎದುರಾಳಿ


Team Udayavani, Apr 23, 2023, 8:35 AM IST

RCB: ಗೋ ಗ್ರೀನ್‌, ಗೋ ವಿನ್‌…: ಟೇಬಲ್‌ ಟಾಪರ್‌ ರಾಜಸ್ಥಾನ್‌ ರಾಯಲ್ಸ್‌ ಎದುರಾಳಿ

ಬೆಂಗಳೂರು: “ಗೋ ಗ್ರೀನ್‌’ ಅಭಿ ಯಾನದ ಅಂಗವಾಗಿ ರಾಜಸ್ಥಾನ್‌ ರಾಯಲ್ಸ್‌ ಎದುರಿನ ರವಿವಾರದ ಪಂದ್ಯದಲ್ಲಿ ಆರ್‌ಸಿಬಿ ಹಸಿರು ಜೆರ್ಸಿಯಲ್ಲಿ ಆಡಲಿಳಿಯಲಿದೆ. ಈ ಉಡುಗೆ ತವರಿನ ತಂಡದ ಪಾಲಿಗೆ ಅದೃಷ್ಟ ತಂದೀತೇ ಎಂಬುದು ಎಲ್ಲರ ನಿರೀಕ್ಷೆ.

ಸದ್ಯ ಆರ್‌ಸಿಬಿ ಆರರಲ್ಲಿ 3 ಜಯ ಸಾಧಿಸಿದರೆ, ರಾಜಸ್ಥಾನ್‌ 6 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದೆ. ಕೊನೆಯ ಪಂದ್ಯದಲ್ಲಿ ಬೆಂಗಳೂರು ಟೀಮ್‌ ಪಂಜಾಬ್‌ ಕಿಂಗ್ಸ್‌ಗೆ 24 ರನ್ನುಗಳ ಸೋಲುಣಿಸಿದರೆ, ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ರಾಜಸ್ಥಾನ್‌ 155 ರನ್‌ ಗಳಿಸಲಾಗದೆ ಲಕ್ನೋಗೆ ಶರಣಾಗಿತ್ತು.

ಸೋತದ್ದೇ ಹೆಚ್ಚು
ಮತ್ತೆ ಆರ್‌ಸಿಬಿಯ ಹಸಿರು ಜೆರ್ಸಿಯ ದಾಖಲೆಯತ್ತ ಬರುವುದಾದರೆ… 2011ರಿಂದ ಮೊದಲ್ಗೊಂಡು ಆರ್‌ಸಿಬಿಯ “ಗೋ ಗ್ರೀನ್‌’ ಅಭಿಯಾನ ನಡೆಯುತ್ತ ಬಂದಿದೆ. ಸೀಸನ್‌ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯೊಂದಿಗೆ ಆಡುವ ಈ ಸಂಪ್ರದಾಯಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಯಶಸ್ಸಿನ ವಿಚಾರದಲ್ಲಿ ಆರ್‌ಸಿಬಿಗೆ ಯಾವುದೇ ಲಾಭವಾಗಿಲ್ಲ. ಹಸಿರು ಜೆರ್ಸಿಯಲ್ಲಿ ಅದು ಸೋತದ್ದೇ ಹೆಚ್ಚು.

ಈವರೆಗೆ ಆರ್‌ಸಿಬಿ 12 ಸಲ ಹಸಿರು ಜೆರ್ಸಿಯಲ್ಲಿ ಆಡಿದೆ. ಗೆದ್ದದ್ದು ಮೂರರಲ್ಲಿ ಮಾತ್ರ. ಎಂಟರಲ್ಲಿ ಸೋಲೇ ಸಂಗಾತಿಯಾಗಿದೆ. 2015ರ ಡೆಲ್ಲಿ ಎದುರಿನ ಪಂದ್ಯ ರದ್ದುಗೊಂಡಿತ್ತು.
ಎಂಟರಲ್ಲಿ ಒಂದು ಸೋಲು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧವೇ ಎದುರಾಗಿರುವುದನ್ನು ಮರೆಯುವಂತಿಲ್ಲ. ಅದು 2018ರ ಮುಖಾಮುಖೀ. ಬೆಂಗಳೂರಿನಲ್ಲಿ ಆಡಲಾದ ಈ ಪಂದ್ಯದಲ್ಲಿ ರಾಜಸ್ಥಾನ್‌ 19 ರನ್ನುಗಳ ಜಯ ಸಾಧಿಸಿತ್ತು.

2011ರಿಂದ 2019ರ ತನಕ ಆರ್‌ಸಿಬಿಯ ಹಸಿರುಡುಗೆಯ ಪಂದ್ಯಗಳೆಲ್ಲ ಬೆಂಗಳೂರಿನಲ್ಲೇ ನಡೆದಿದ್ದವು. ಈ ಅವಧಿಯಲ್ಲಿ ಜಯಿಸಿದ್ದು ಎರಡಲ್ಲಿ ಮಾತ್ರ. 2011ರ ಪ್ರಪ್ರಥಮ ಪಂದ್ಯದಲ್ಲಿ ಕೊಚ್ಚಿ ಟಸ್ಕರ್ ಕೇರಳಕ್ಕೆ 9 ವಿಕೆಟ್‌ಗಳ ಆಘಾತವಿಕ್ಕಿತ್ತು. 2016ರಲ್ಲಿ ಗುಜರಾತ್‌ ಲಯನ್ಸ್‌ ತಂಡವನ್ನು 144 ರನ್ನುಗಳಿಂದ ಮಣಿಸಿತ್ತು.

3 ವರ್ಷಗಳ ಬಳಿಕ…
ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆರ್‌ಸಿಬಿ 3 ವರ್ಷಗಳ ಬಳಿಕ ಮೊದಲ ಸಲ ಹಸಿರು ಜೆರ್ಸಿಯಲ್ಲಿ ಆಡಲಿಳಿಯುತ್ತಿದೆ. ಕಳೆದ 3 ಸೀಸನ್‌ ಪಂದ್ಯಗಳು ದುಬಾೖ, ಅಬುಧಾಬಿ ಮತ್ತು ಮುಂಬೈಯಲ್ಲಿ ನಡೆದಾಗಲೂ ಆರ್‌ಸಿಬಿ “ಗೋ ಗ್ರೀನ್‌’ ಅಭಿಯಾನದ ನಂಟನ್ನು ಕಡಿದುಕೊಂಡಿ ರಲಿಲ್ಲ. ಆದರೆ ಯುಎಇಯ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿತು. ಚೆನ್ನೈ ವಿರುದ್ಧ 8 ವಿಕೆಟ್‌, ಕೆಕೆಆರ್‌ ವಿರುದ್ಧ 9 ವಿಕೆಟ್‌ಗಳ ದೊಡ್ಡ ಸೋಲನ್ನೇ ಕಂಡಿತು. ಕಳೆದ ವರ್ಷ ಮುಂಬಯಿಯಲ್ಲಿ ಹೈದರಾಬಾದನ್ನು 67 ರನ್ನುಗಳ ಮಣಿಸಿದ ಆರ್‌ಸಿಬಿಗೆ ಮತ್ತೆ “ಗ್ರೀನ್‌ ಲಕ್‌’ ಒಲಿಯಿತು.

ಗ್ರೀನ್‌ ಜೆರ್ಸಿಯಲ್ಲಿ ಆರ್‌ಸಿಬಿ ದೊಡ್ಡ ಮೊತ್ತ ಹಾಗೂ ಕನಿಷ್ಠ ಮೊತ್ತದ ದಾಖಲೆಗಳೆರಡನ್ನೂ ಬರೆದಿದೆ. 2016ರಲ್ಲಿ ಗುಜರಾತ್‌ ಲಯನ್ಸ್‌ ವಿರುದ್ಧ 3ಕ್ಕೆ 248 ರನ್‌ ಒಟ್ಟುಗೂಡಿಸಿದರೆ, 2021ರಲ್ಲಿ ಕೆಕೆಆರ್‌ ವಿರುದ್ಧ 92ಕ್ಕೆ ಆಲೌಟ್‌ ಆಗಿತ್ತು. ಗುಜರಾತ್‌ ವಿರುದ್ಧ ಎಬಿ ಡಿ ವಿಲಿಯರ್ 52 ಎಸೆತಗಳಿಂದ ಅಜೇಯ 129 ರನ್‌ ಗಳಿಸಿದ್ದು ಹಸಿರು ಬ್ಯಾಟರ್‌ನ ದಾಖಲೆ. ಕಳೆದ ವರ್ಷ ಹೈದರಾಬಾದ್‌ ವಿರುದ್ಧ ವನಿಂದು ಹಸರಂಗ 18ಕ್ಕೆ 5 ವಿಕೆಟ್‌ ಕೆಡವಿದ್ದು ಬೌಲಿಂಗ್‌ ದಾಖಲೆಯಾಗಿದೆ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.