CTX, FBS; ಏರ್‌ಪೋರ್ಟ್‌ನಲ್ಲಿ ತಪಾಸಣೆ ಪ್ರಕ್ರಿಯೆ ಎಂದಿಗಿಂತ ಕ್ಷಿಪ್ರ
Team Udayavani, Apr 24, 2023, 7:55 AM IST
ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ವೇಳೆ ನಿಮ್ಮ ಬಳಿಯಿರುವ ಲೋಹದ (ಮೆಟಲ್) ವಸ್ತುಗಳನ್ನೆಲ್ಲ ತೆಗೆದು ಟ್ರೇ ಒಂದರಲ್ಲಿಟ್ಟು ಭದ್ರತಾ ಪರೀಕ್ಷೆಗೆ ಒಳಪಡಿಸಿ ಪರದಾಡಬೇಕಿದ್ದ ಪರಿಸ್ಥಿತಿ ಇನ್ನು ಮುಂದೆ ಇರುವುದಿಲ್ಲ. ಪ್ರಯಾಣಿಕರ ಈ ಸಮಸ್ಯೆಗಳಿಗೆ ಸಿಟಿಎಕ್ಸ್ ಹಾಗೂ ಎಫ್ಬಿಎಸ್ ಎನ್ನುವ ಹೊಸ ತಂತ್ರಜ್ಞಾನ ಶೀಘ್ರವೇ ಪರಿಹಾರ ಒದಗಿಸಲಿದೆ.
ಹೌದು, ದಿನಕ್ಕೆ 50 ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ನಿರ್ವಹಿಸುವ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಬ್ಯಾಗ್‌ಗಳನ್ನು ಸ್ಕ್ಯಾನ್ ಮಾಡುವುದಕ್ಕಾಗಿ 3ಡಿ ಕಂಪ್ಯೂಟೆಡ್ ಟೊಮೊಗ್ರಫಿ ಎಕ್ಸ್‌ರೇ ಮಷೀನ್(ಸಿಟಿಎಕ್ಸ್) ಹಾಗೂ ಮನುಷ್ಯರನ್ನು ಸ್ಕ್ಯಾನ್ ಮಾಡಬಲ್ಲ ಫುಲ್‌ಬಾಡಿ ಸ್ಕ್ಯಾನರ್ì(ಎಫ್ಬಿಎಸ್)ಗಳನ್ನು ಈ ವರ್ಷಾಂತ್ಯದೊಳಗೆ ಅಳವಡಿಸುವಂತೆ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ವಿಮಾನ ನಿಲ್ದಾಣಗಳಿಗೆ ಸೂಚಿಸಿದೆ.
ಇದರಿಂದ ಮೊಬೈಲ್, ಲ್ಯಾಪ್‌ಟಾಪ್, ಚಾರ್ಜರ್ ಸೇರಿದಂತೆ ತಮ್ಮ ವೈಯಕ್ತಿಕ ಡಿಜಿಟಲ್ ಸಾಧನಗಳನ್ನು ಪ್ರಯಾಣಿಕರು ಪ್ರತ್ಯೇಕವಾಗಿ ತಪಾಸಣೆಗೆ ಒಳಪಡಿಸಬೇಕಾದ ಅಗತ್ಯವಿರುವುದಿಲ್ಲ. ಜತೆಗೆ ಮನುಷ್ಯನ ಸಂಪೂರ್ಣ ದೇಹವನ್ನೂ ಸ್ಕ್ಯಾನ್ ಮಾಡಬಲ್ಲ ಅತ್ಯಾಧುನಿಕ ಸಾಮರ್ಥ್ಯವನ್ನು ಎಫ್ಬಿಎಸ್ ಹೊಂದಿರಲಿದೆ. ಹೀಗಾಗಿ ಶೀಘ್ರವೇ ಬೆಂಗಳೂರು, ದೆಹಲಿ, ಮುಂಬೈ ಸೇರಿ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಈ ತಂತ್ರಜ್ಞಾನ ಅಳವಡಿಕೆಗೆ ಯೋಜಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಎಫ್ಬಿಎಸ್ ಅಂದಾಜು ವೆಚ್ಚ – 10-11 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.