Viral: ಮದ್ಯ ಕುಡಿಯಲು ಹಣ ನೀಡದ ತಂದೆ; ಸಿಟ್ಟಾಗಿ ಹೈಟೆನ್ಷನ್ ವಿದ್ಯುತ್ ಕಂಬವೇರಿದ ಮಗ.!
Team Udayavani, Apr 24, 2023, 1:24 PM IST
ಲಕ್ನೋ: ಅಪ್ಪನ ಬಳಿ ಹಣ ಕೇಳಿದಾಗ ಅಪ್ಪ ಹಣ ನೀಡದೆ ಇದ್ದರೆ ನೀವೇನು ಮಾಡುತ್ತೀರಿ? ಹೆಚ್ಚೆಂದರೆ ಒಂದಷ್ಟು ಸಮಯ ಸಿಟ್ಟಿನಲ್ಲಿ ಮಾತು ಬಿಡಬಹುದು ಅಥವಾ ಕೆಲ ಸಮಯದ ಬಳಿಕ ಅಪ್ಪನ ಬಳಿ ಹಣ ನೀಡಲು ಹೇಳು ಎಂದು ಅಮ್ಮನ ಬಳಿ ಹೇಳಿ ಅದೇಗೋ ಮತ್ತೆ ಹಣವನ್ನು ಪಡೆಯಲು ಯತ್ನಿಸುತ್ತೀರಿ.
ಆದರೆ ಇಲ್ಲೊಬ್ಬ ಮಗ ಅಪ್ಪ ಹಣ ನೀಡಿಲ್ಲ ಎಂದು ಸಿಟ್ಟಿನಲ್ಲಿ ಹೈಟೆನ್ಷನ್ ವೈಯರ್ ವುಳ್ಳ ವಿದ್ಯುತ್ ಕಂಬಕ್ಕೇರಿದ್ದಾನೆ.!
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಕತಿ ಖೇಡಾ ಗ್ರಾಮದಲ್ಲಿ ಮಗನೊಬ್ಬ ತನಗೆ ಮದ್ಯ ಕುಡಿಯಲು ಹಣಬೇಕೆಂದು ತನ್ನ ತಂದೆಯ ಬಳಿ ಕೇಳಿದ್ದಾನೆ. 1500 ರೂ. ನೀಡಿಯೆಂದು ಮದ್ಯ ವ್ಯಸನಿ ಮಗ ತಂದೆಯ ಬಳಿ ಕೇಳಿದ್ದಾನೆ. ಇದಕ್ಕೆ ತಂದೆ ಯಾವುದೇ ಕಾರಣಕ್ಕೂ ಹಣ ನೀಡಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮತಯಾಚನೆ ಮಾಡದೆ ಮತದಾನ ಮಾಡುವ ಚರಿತ್ರೆ ನಿರ್ಮಾಣ ಮಾಡುತ್ತೇನೆ -ಮುನಿಯಾಲು
ಇದೇ ಮಾತಿನಿಂದ ಸಿಟ್ಟಾದ ಮಗ ಮನೆಯ ಪಕ್ಕದಲ್ಲಿರುವ ಹೈಟೆನ್ಷನ್ ವಿದ್ಯುತ್ ಕಂಬಕ್ಕೇರಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ. ಈತನ ಈ ವರ್ತನೆ ಕುರಿತು ಗ್ರಾಮಸ್ಥರೆಲ್ಲ ಭೀತಿಗೆ ಒಳಗಾಗಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿ ಯುವಕನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ಅಪಾಯ ಸಂಭವಿಸದಿರಲು ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.