40ರಿಂದ 50 ಕ್ಷೇತ್ರಗಳಲ್ಲಿ ಆಪ್‌ ಪೈಪೋಟಿ … ಬಹುಮತಕ್ಕೆ ನಾವೇ ನಿರ್ಣಾಯಕ


Team Udayavani, Apr 26, 2023, 8:05 AM IST

40ರಿಂದ 50 ಕ್ಷೇತ್ರಗಳಲ್ಲಿ ಆಪ್‌ ಪೈಪೋಟಿ … ಬಹುಮತಕ್ಕೆ ನಾವೇ ನಿರ್ಣಾಯಕ

ಬೆಂಗಳೂರು: ಮಾವಿನ ಗಿಡದಲ್ಲಿ ಹೂವು ಗಳು ನೋಡಲು ತುಂಬಾ ಚೆನ್ನಾಗಿ ಕಾಣುತ್ತವೆ. ಆದರೆ, ಒಂದೇ ಒಂದು ಆಲಿಕಲ್ಲು ಮಳೆ ಹೊಡೆತಕ್ಕೆ ಆ ಹೂವುಗಳೆಲ್ಲ ಉದುರಿ ಬೀಳುತ್ತವೆ. ಕೊನೆಗೆ ಸುರಕ್ಷಿತವಾಗಿ ಉಳಿಯು ವುದು ಎಲೆ ಮರೆಯಲ್ಲಿದ್ದ ಕಾಯಿಗಳು ಮಾತ್ರ. ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳೇ ಆ ಗಿಡದಲ್ಲಿರುವ ಅಂದದ ಹೂವುಗಳು. ಈ ಚುನಾವಣೆಯೇ ಆಲಿಕಲ್ಲು ಮಳೆ. ಆಮ್‌ ಆದ್ಮಿ ಪಕ್ಷವೇ ಎಲೆಮರೆಯ ಕಾಯಿ ಅಥವಾ ಬೂದಿ ಮುಚ್ಚಿದ ಕೆಂಡ!

ತಮ್ಮ ಪಕ್ಷವನ್ನು ಕಡೆಗಣಿಸುವ ವಿವಿಧ ರಾಜಕೀಯ ಪಕ್ಷಗಳಿಗೆ ಆಮ್‌ ಆದ್ಮಿ ಪಕ್ಷದ ಪ್ರಚಾರ ಮತ್ತು ಜನಸಂಪರ್ಕ ಸಮಿತಿ ಅಧ್ಯಕ್ಷ “ಮುಖ್ಯಮಂತ್ರಿ’ ಚಂದ್ರು ನೀಡುವ ಎಚ್ಚರಿಕೆ ಇದು.
ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾ ಗಿದ್ದು, ಸಾಮಾಜಿಕ ವ್ಯವಸ್ಥೆಯಲ್ಲಿ ಇವೆರಡೂ ಮಾರಕ ಎಂದು ಮೂರೂ ಪಕ್ಷಗಳ ನಾಯಕರುಗಳೇ ಹೇಳುತ್ತಾರೆ. ಆದರೆ, ಅಂತಹವರಿಗೇ ಮಣೆಹಾಕುವ ಮೂಲಕ ಪರೋಕ್ಷವಾಗಿ ಅನ್ನು ಪೋಷಿಸುತ್ತಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿಗೆ ಬೇಕಿಲ್ಲ ಎನ್ನುವಂತೆ ಜನರಿಗೂ ಮನದಟ್ಟಾಗಿದ್ದು, ಇದರ ಸುಳಿವು ನಾವು ಮತ್ತು ನಮ್ಮ ಅಭ್ಯರ್ಥಿಗಳು ಮತದಾರರನ್ನು ಭೇಟಿಯಾದಾಗ ದೊರೆ ಯುವ ಸ್ಪಂದನೆಯಿಂದ ಸ್ಪಷ್ಟವಾಗುತ್ತಿದೆ. ಹಾಗಾಗಿ, ಚುನಾ   ವಣೆ ಯಲ್ಲಿ ಹೆಚ್ಚು ಸೀಟುಗಳನ್ನು ನಾವು ಗೆಲ್ಲದಿರಬಹುದು. ಆದರೆ, 40-50 ಕಡೆಗಳಲ್ಲಿ ಪ್ರಬಲ ಪೈಪೋಟಿ ನೀಡ ಲಿದ್ದು, 20-25 ಸಾವಿರ ಮತಗಳನ್ನು ಗಳಿ  ಸುವ ಮೂಲಕ ಉಳಿದ ಪಕ್ಷಗಳಿಗೆ ಎಚ್ಚರಿಕೆ ಗಂಟೆ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಚುನಾವಣೆ ಪ್ರಚಾರದ ಬ್ಯುಸಿಯಲ್ಲಿದ್ದ ಅವರು “ಉದಯವಾಣಿ’ಯೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದರು.

– ಆಮ್‌ ಆದ್ಮಿ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ 2ನೇ ಅವಧಿಗೆ ಗದ್ದುಗೆ ಏರಿದೆ. ಆದರೂ, ಕರ್ನಾಟಕದ ಜನರನ್ನು ತಲುಪುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅದಕ್ಕೆ ಸಾಧ್ಯವಾಗಿಯೇ ಇಲ್ಲ. ಇನ್ನು ಚುನಾವಣೆ ಗೆಲುವು ದೂರದ ಮಾತು ಆಗಲಿಲ್ಲವೇ?
– ಉತ್ತರ ಭಾರತಕ್ಕೆ ಹೋಲಿಸಿದರೆ, ದಕ್ಷಿಣ ಭಾರತ ದಲ್ಲಿ ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿàವಾಲ್‌ ಅವರನ್ನು ನಾವು ತಲುಪಿಸಿದ್ದೇವೆಯೇ ಎಂಬುದರ ಬಗ್ಗೆ ನನಗೆ ಗುಮಾನಿ ಇದೆ. ಆದರೆ, ಅವರು ಮಾಡಿದ ಕೆಲಸಗಳು ರಾಜ್ಯದ ಜನರನ್ನು ತಲುಪಿವೆ. ಆಡಳಿತ ವ್ಯವಸ್ಥೆಯನ್ನು ಸ್ವತ್ಛಗೊಳಿಸಿದ “ಪೊರಕೆ’ ಜನರ ಮನಸ್ಸಿನಲ್ಲಿದೆ. ಇದರ ಜತೆಗೆ ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ.

– ರಾಜ್ಯದಲ್ಲಿರುವ ಮೂರೂ ಪ್ರಮುಖ ರಾಜಕೀಯ ಪಕ್ಷಗಳಿಗಿಂತ ಆಪ್‌ ಹೇಗೆ ಪರ್ಯಾಯ?
– ಈಗಾಗಲೇ ಮೂರೂ ಪಕ್ಷಗಳನ್ನು ಜನ ನೋಡಿ ದ್ದಾರೆ. ಅವುಗಳ ಕೆಸರೆರಚಾಟದಿಂದ ಬೆತ್ತಲಾಗಿವೆ. ಇನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂ ಗಾಣ ಸೇರಿದಂತೆ ನೆರೆ ರಾಜ್ಯಗಳು ಈಗಲೂ ರಾಷ್ಟ್ರೀಯ ಪಕ್ಷಗಳನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಕರ್ನಾಟಕದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಒಂದಿಲ್ಲೊಂದು ಅವಧಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತಕ್ಕೆ ಪ್ರಾದೇಶಿಕ ಪಕ್ಷವನ್ನೇ ಅವಲಂಬಿಸಿವೆ. ಆ ಪಾತ್ರವನ್ನು ಈ ಬಾರಿ ಆಪ್‌ ನಿರ್ವಹಿಸುವ ಎಲ್ಲ ಸಾಧ್ಯತೆಗಳೂ ಇವೆ.

– ರಾಜ್ಯದ ಮಟ್ಟಿಗೆ ಹೇಳುವುದಾದರೆ ಆಪ್‌ನಲ್ಲಿ ಹೇಳಿಕೊಳ್ಳುವ ಅಥವಾ ಹೆಚ್ಚು ಪರಿಚಿತವಾದ ಒಂದು “ಫೇಸ್‌’ ಇಲ್ಲ. ಹೀಗಿರುವಾಗ, ಜನರನ್ನು ಹೇಗೆ ಸೆಳೆಯುತ್ತೀರಿ?
– ಮಧ್ಯಮ ಮತ್ತು ಕೆಳಮಧ್ಯಮವರ್ಗಗಳಿಗೆ ಐದು ವರ್ಷಕ್ಕೊಮ್ಮೆ ದರ್ಶನ ನೀಡುವ ರಾಜಕಾರಣಿಗಳ ಫೇಸ್‌ ಬೇಕಿಲ್ಲ. ಕೈಗೆಟಕುವಂತೆ ಅಡುಗೆ ಅನಿಲ ಮತ್ತು ವಿದ್ಯುತ್‌, ಶಿಕ್ಷಣ, ಆರೋಗ್ಯ, ರೈತರಿಗೆ ತಮ್ಮ ಬೆಳೆಗಳಿಗೆ ಉತ್ತಮ ಬೆಲೆ, ಕಡಿಮೆ ಬೆಲೆಯಲ್ಲಿ ರಸಗೊಬ್ಬರ ಇತ್ಯಾದಿಗಳೇ ಅವರಿಗೆ ಪ್ರಮುಖ. ಈಗಾಗಲೇ ಇವುಗಳನ್ನು ಕಲ್ಪಿಸುವುದಾಗಿ ಗ್ಯಾರಂಟಿ ಕೊಟ್ಟಾಗಿದೆ. ಅವುಗಳನ್ನು ತಲುಪಿಸುವುದೊಂದೇ ಬಾಕಿ ಇದೆ.

– ನೀವು ಗ್ಯಾರಂಟಿ ಕೊಡ್ತೀರಾ, ಕಾಂಗ್ರೆಸ್‌ ಕೂಡ ಗ್ಯಾರಂಟಿ ಕೊಡ್ತಿದೆ. ಜನ ಯಾವುದನ್ನು ನಂಬಬೇಕು?
– ನಮ್ಮ “ಗ್ಯಾರಂಟಿ ಕಾರ್ಡ್‌’ ಅನ್ನು ಕಾಂಗ್ರೆಸ್‌ ನಕಲು ಮಾಡಿದೆ. ಅಷ್ಟಕ್ಕೂ ನಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಗಲೇ ಈ ಎಲ್ಲ ಸೌಲಭ್ಯಗಳನ್ನು ಕೊಟ್ಟಿದ್ದೇವೆ. ಕಾಂಗ್ರೆಸ್‌ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಗ್ಯಾರಂಟಿ ಕೊಡಬಹುದಿತ್ತಲ್ಲಾ?

– ಎಲ್ಲಿಯೂ ಸಲ್ಲದವರು ಆಪ್‌ಗೆ ಸಲ್ಲುತ್ತಾರೆ ಎಂಬ ಆರೋಪವಿದೆಯಲ್ಲಾ?
– ಹಾಗೇನಿಲ್ಲ, ಎರಡೂ ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್‌ ವಂಚಿತ 20- 22 ಜನ ಆಪ್‌ ಸೇರಲು ಸಿದ್ಧರಾಗಿದ್ದರು. ಆದರೆ, ನಮ್ಮಲ್ಲಿ ಹಣ- ಹೆಂಡ ವಿತರಣೆಗೆ ಅವಕಾಶ ಇಲ್ಲ. ಅಭ್ಯರ್ಥಿಗಳಿಗೂ ಪ್ರಚಾರಕ್ಕೆ ಹಣ ನೀಡುವುದಿಲ್ಲ. ಬೇಕಿದ್ದರೆ ಸೆಲೆಬ್ರಿಟಿಗಳು, ಅತಿಥಿಗಳನ್ನು ಕರೆಸುವ ವ್ಯವಸ್ಥೆ, ಪ್ರಚಾರ ಸಾಮಗ್ರಿಗಳನ್ನು ಮಾತ್ರ ನೀಡುತ್ತವೆ. ಹಾಗಾಗಿ, ಅವರು ಮನಸ್ಸು ಮಾಡಲಿಲ್ಲ.

ಕೇಜ್ರಿವಾಲ್‌ ಕರ್ನಾಟಕ ಭೇಟಿ ಬಗ್ಗೆ ಹೇಳಿ…
– ಅರವಿಂದ್‌ ಕೇಜ್ರಿವಾಲ್‌ ಕರ್ನಾಟಕಕ್ಕೆ ಬರಲು ಉತ್ಸುಕರಾಗಿದ್ದಾರೆ. ಆದರೆ, ದೆಹಲಿಯಲ್ಲಿ ಅವರನ್ನು ಐಟಿ-ಇಡಿ ಮತ್ತಿತರ ತನಿಖಾ ಸಂಸ್ಥೆಗಳು ವಿವಿಧ ರೀತಿಯ ತಂತ್ರಗಾರಿಕೆಯಿಂದ ಕಟ್ಟಿಹಾಕುವ ಕೆಲಸ ಮಾಡುತ್ತಿದೆ. ಇದರಿಂದ ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಚುನಾವಣೆ ಅವಧಿಯಲ್ಲಿ ಕನಿಷ್ಠ ಎರಡು-ಮೂರು ಬಾರಿ ಭೇಟಿ ನೀಡಲಿದ್ದಾರೆ. ಈ ವೇಳೆ ಬೆಂಗಳೂರಿಗೂ ಬರುತ್ತಾರೆ.

– ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

4

Dr G Parameshwar: ಸೆನ್‌ ಠಾಣೆಗಳಿಗೂ ಎಸ್ಪಿ ಕೇಡರ್‌: ಗೃಹ ಸಚಿವ

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

Bellary; ಸಿದ್ರಾಮಯ್ಯ 5 ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ

9

Puttur: ಅಮರ್‌ ಜವಾನ್‌ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.