![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 26, 2023, 6:13 PM IST
ಪಣಜಿ: ಮೋಜಿಗಾಗಿ ಗೋವಾಕ್ಕೆ ಬರುವ ಕೆಲವು ಪ್ರವಾಸಿಗರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಇಂತಹ ಘಟನೆಗಳು ಹಲವು ಬಾರಿ ನಡೆದಿವೆ. ಘಟನೆಯ ವಿಡಿಯೋಗಳು ಕೂಡ ವೈರಲ್ ಆಗಿವೆ. ಸಂಬಂಧಪಟ್ಟವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಏತನ್ಮಧ್ಯೆ, ಇದೇ ರೀತಿಯ ಘಟನೆಯು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೆಲವು ಪ್ರವಾಸಿಗರು ಬಾಡಿಗೆ ಕ್ಯಾಬ್‍ನ ಮೇಲೆ ಹತ್ತಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋದ ಪ್ರಕಾರ, ಬಾಡಿಗೆ ಕ್ಯಾಬ್‍ನ ಮೇಲೆ ಇಬ್ಬರು ಯುವಕರು ನೃತ್ಯ ಮಾಡುತ್ತಿದ್ದಾರೆ. ಕಾರಿನ ಎರಡು ಬಾಗಿಲುಗಳು ತೆರೆದಿವೆ ಮತ್ತು ಇಬ್ಬರು ಕಾರಿನ ಮೇಲೆ ನೃತ್ಯ ಮಾಡುತ್ತಿದ್ದಾರೆ, ಯಾರೋ ಅವರ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದಾರೆ. ಇದೇ ವೇಳೆ ಇದೇ ಘಟನೆಯ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿದ್ದಾರೆ. ವಿಡಿಯೋದಲ್ಲಿ, ನೋಂದಣಿಯ ಮಹೀಂದ್ರ ಥಾರ್ ಬಾಡಿಗೆ ಕ್ಯಾಬ್ ಆಗಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ. ಪ್ರವಾಸಿಗರು ಈ ರೀತಿ ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡಿ ಮೋಜು ಮಸ್ತಿ ನಡೆಸುತ್ತಿರುವುದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಗೋವಾದ ಜನತೆ ಖಂಡಿಸಿದ್ದಾರೆ. ಆದರೆ ಈ ವೀಡಿಯೊ ಗೋವಾದ ಯಾವ ಭಾಗದಲ್ಲಿ ನಡೆದ ಘಟನೆಯಾಗಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭಿಸಿಲ್ಲ. ಆದರೆ ಇಂತಹ ಘಟನೆಗಳು ಗೋವಾದಲ್ಲಿ ನಿತ್ಯವೂ ನಡೆಯುತ್ತಿದ್ದು, ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರು ಸಂಚಾರ ನಿಯಮ ಉಲ್ಲಂಘಿಸಿ ವಿಚಿತ್ರ ಕೆಲಸಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದೆ. ಕೆಲವೊಮ್ಮೆ ತೆರೆದ ವಾಹನಗಳಲ್ಲಿ ಹಾಡು ನೃತ್ಯ ಮಾಡುತ್ತ ಸಾಗುವುದು, ಅಲ್ಲದೆ, ಕೆಲವೊಮ್ಮೆ ಪ್ರವಾಸಿಗರು ಬೀಚ್‍ಗೆ ವಾಹನಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಗೋವಾದಲ್ಲಿ ಎಲ್ಲವೂ ನಡೆಯುತ್ತಾ? ಗೋವಾದಲ್ಲಿ ಪ್ರವಾಸಿಗರು ಬಂದು ಬೇಕಾಬಿಟ್ಟಿ ಮೋಜು ಮಸ್ತಿ ಮಾಡಬಹುದಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನತೆ ಪ್ರಶ್ನಿಸುವಂತಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.