ಪೂಂಛ್ ದಾಳಿಗೆ ಮೂರು ತಿಂಗಳಿಂದ ಹೊಂಚು!
ರಜೌರಿ-ಪೂಂಛ್ ನಲ್ಲಿದ್ದ ವ್ಯಕ್ತಿಯಿಂದ 3 ಉಗ್ರರಿಗೆ ಆಶ್ರಯ, ಪಾಕ್‌ನಲ್ಲೇ ಸಿದ್ಧವಾಗಿತ್ತು ಪ್ಲ್ರಾನ್
Team Udayavani, Apr 27, 2023, 8:40 AM IST
ಶ್ರೀನಗರ: ಜಮ್ಮುಕಾಶ್ಮೀರದ ಪೂಂಛ್ ನಲ್ಲಿ ಏ.20ರಂದು ದೇಶದ ಐವರು ವೀರ ಯೋಧರನ್ನು ಕೊಂದು ಹಾಕಿದ ಪ್ರಕರಣದ ಹಿಂದಿನ ಸಂಚಿನ ಅಂಶಗಳು ಒಂದೊಂದಾಗಿ ಬಯಲಿಗೆ ಬರಲಾರಂಭಿಸಿವೆ. ಪೂಂಛ್- ರಜೌರಿ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ವ್ಯಕ್ತಿಯ ಮನೆಯಲ್ಲಿ ಉಗ್ರರು ವಾಸವಾಗಿದ್ದರು. ಅವರು ಮೂರು ತಿಂಗಳಿಂದ ಸ್ಫೋಟಕಗಳ ಮೂಲಕ ರಾಷ್ಟ್ರೀಯ ರೈಫಲ್ಸ್‌ನ ಟ್ರಕ್ ಅನ್ನು ಸ್ಫೋಟಿಸುವ ದುಷ್ಟ ಸಂಚನ್ನು ರೂಪಿಸುತ್ತಿದ್ದರು. ಜತೆಗೆ ಈಗಾಗಲೇ ಗುಪ್ತಚರ ಸಂಸ್ಥೆಗಳು ತರ್ಕಿಸಿರುವಂತೆ ದಾಳಿಯ ಮೂಲ ಯೋಜನೆ ಪಾಕಿಸ್ತಾನದಲ್ಲಿಯೇ ಸಿದ್ಧವಾಗಿತ್ತು ಎನ್ನುವುದೂ ಈಗ ದೃಢಪಟ್ಟಿದೆ.
ಪಾಕಿಸ್ತಾನ ಪ್ರೇರಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಭಾಗವೇ ಆಗಿರುವ ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಪ್) ಎನ್ನುವ ಹೊಸ ಸಂಘಟನೆ ಈ ಕೃತ್ಯವನ್ನು ಎಸಗಿರುವ ಬಗ್ಗೆ ಹೊಣೆ ಹೊತ್ತುಕೊಂಡಿದೆ. ಒಟ್ಟು ಮೂವರು ಉಗ್ರರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರಿಗೆ ಸ್ಥಳೀಯ ಹ್ಯಾಂಡ್ಲರ್ ಒಬ್ಬ ನಿರಂತರವಾಗಿ ದುಷ್ಕೃತ್ಯ ಎಸಗುವ ಬಗ್ಗೆ ಸೂಚನೆಗಳನ್ನು ನೀಡುತ್ತಿದ್ದ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಬಿರುಸಿನ ಶೋಧ: ಕುತ್ಸಿತ ಕೃತ್ಯವೆಸಗಿದ ಉಗ್ರರಿಗಾಗಿ ಎನ್‌ಎಸ್‌ಜಿ ಬಿರುಸಿನ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದೆ. ಪೂಂಛ್ – ರಜೌರಿ ದಟ್ಟಡವಿಯಲ್ಲಿ ಶೋಧ ನಡೆಸುವ ನಿಟ್ಟಿನಲ್ಲಿ ಡ್ರೋನ್‌ಗಳನ್ನು, ಶ್ವಾನದಳ ಮತ್ತು ಲೋಹ ವಸ್ತುಗಳನ್ನು ಪತ್ತೆ ಹಚ್ಚುವ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 50 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಏಳರಿಂದ ಎಂಟು ಮಂದಿ ಉಗ್ರರು ಘಟನೆ ನಡೆದ ಭಿಂಬರ್ ಗಾಲಿಯ ಸಮೀಪ ಇರುವ ಕಣಿವೆಯಲ್ಲಿ ಅಡಗಿಕೊಂಡು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂಬ ಗುಮಾನಿ ತನಿಖಾ ಸಂಸ್ಥೆಗಳದ್ದು.
ವಿಡಿಯೊ ಚಿತ್ರೀಕರಣ: ಸ್ಫೋಟ ಕೃತ್ಯ ನಡೆಸಿದ ಉಗ್ರರು ಒಟ್ಟಾರೆ ಘಟನೆಯ ವಿಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.