ಎಂಜಿಎಂ ಕಾಲೇಜಿಗೆ ನ್ಯಾಕ್‌ ಎ+ ಮಾನ್ಯತೆ – ಹರ್ಷಾಚರಣೆ

ಇನ್ನಷ್ಟು ಸಾಧನೆಗೆ ಅವಕಾಶ: ಡಾ| ಬಲ್ಲಾಳ್‌

Team Udayavani, Apr 27, 2023, 7:10 AM IST

ಎಂಜಿಎಂ ಕಾಲೇಜಿಗೆ ನ್ಯಾಕ್‌ ಎ+ ಮಾನ್ಯತೆ – ಹರ್ಷಾಚರಣೆ

ಉಡುಪಿ: ಎಂಜಿಎಂ ಕಾಲೇಜು ನ್ಯಾಕ್‌ ಎ+ ಗ್ರೇಡ್‌ ಪಡೆ ದಿರುವ ಹಿನ್ನೆಲೆಯಲ್ಲಿ ಬುಧವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಹರ್ಷಾ ಚರಣೆಯಲ್ಲಿ ಈ ಪ್ರಕ್ರಿಯೆ ಯಲ್ಲಿ ಸಹಕರಿಸಿದವರನ್ನು ಅಭಿನಂದಿಸಲಾಯಿತು.

ಉಡುಪಿ ಜಿಲ್ಲಾ ಭೌಗೋಳಿಕ ಪ್ರದೇಶದಲ್ಲಿ ಆರಂಭಗೊಂಡ ಪ್ರಥಮ ಕಾಲೇಜಾದ ಎಂಜಿಎಂ ಕಾಲೇಜಿಗೆ ಹಲವು ವರ್ಷಗಳ ಸತತ ಪ್ರಯತ್ನಗಳಿಂದ ನ್ಯಾಕ್‌ ಎ+ ಶ್ರೇಣಿ ಮಾನ್ಯತೆ ದೊರಕಿದೆ. ಇದಕ್ಕಾಗಿ ಪ್ರಯತ್ನಿಸಿದ ಇಡೀ ತಂಡ ಅಭಿನಂದನೀಯ. ಮುಂದೆ ಎ++ ಗ್ರೇಡ್‌ ದೊರಕುವಂತಾಗಲು ಈಗಿಂದೀಗಲೇ ಪ್ರಯತ್ನಿಸಬೇಕು ಎಂದು ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಅಧ್ಯಕ್ಷ, ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಕರೆ ನೀಡಿದರು.

ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಸಿಗಲೂ ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಅವರು ಉತ್ಸುಕರಾಗಿದ್ದು ಆ ಕುರಿತೂ ಪ್ರಯತ್ನಗಳು ನಡೆಯಲಿವೆ. ಈ ಎಲ್ಲ ಸಾಧನೆಗಳಿಗೆ ಪೂರಕವಾದ ಮೂಲ ಸೌಲಭ್ಯ, ಮಾನವ ಸಂಪನ್ಮೂಲ ಲಭ್ಯ ಇದೆ ಎಂದು ಡಾ| ಬಲ್ಲಾಳ್‌ ಹೇಳಿದರು.

ಮಾಹೆ ವಿ.ವಿ. ಸಹಕುಲಪತಿ ಡಾ| ನಾರಾಯಣ ಸಭಾಹಿತ್‌ ಮಾತನಾಡಿ, ಕಾಲೇಜಿಗೆ ಈ ಸ್ಥಾನ ಪ್ರಾಪ್ತಿಯಾಗಿರುವುದು ತಂಡ ಪ್ರಯತ್ನದ ಫ‌ಲವಾಗಿದೆ. ಯಶಸ್ಸಿನ ಹಿಂದೆ ಪ್ರಯತ್ನದ ಬಲವಿರುತ್ತದೆ. ಮುಂದಿನ ದಿನಗಳಲ್ಲಿ ಎ++ ಗ್ರೇಡ್‌ ಸಿಗುವಂತಾಗಬೇಕು ಎಂದು ಶುಭ ಕೋರಿದರು.

ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ವಹಿಸಿದ್ದರು. ಟ್ರಸ್ಟ್‌ ವಿಶ್ವಸ್ತ ಟಿ. ಅಶೋಕ್‌ ಪೈ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಪ್ರಸ್ತಾವನೆಗೈದರು. ಕಂಪ್ಯೂಟರ್‌ ಸೈನ್ಸ್‌ ವಿಭಾಗ ಮುಖ್ಯಸ್ಥ ಡಾ| ವಿಶ್ವನಾಥ ಪೈ ಸ್ವಾಗತಿಸಿ, ಐಕ್ಯೂಎಸಿ ಸಮನ್ವಯಕಾರ ಪ್ರೊ| ಅರುಣ ಕುಮಾರ್‌ ವಂದಿಸಿದರು. ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು.

ನ್ಯಾಕ್‌ ಮಾನ್ಯತೆ ದೊರಕಲು ಸಹಕರಿಸಿದ ಹಿಂದಿನ ಪ್ರಾಂಶುಪಾಲರಾದ ಪ್ರೊ| ಕುಸುಮಾ ಕಾಮತ್‌, ಡಾ| ದೇವಿದಾಸ್‌ ನಾಯ್ಕ, ಮಾಹೆ ವಿ.ವಿ. ಅಧಿಕಾರಿಗಳಾದ ಕ್ರಿಸ್ಟೋ ಫ‌ರ್‌ ಸುಧಾಕರ್‌, ಸಂದೀಪ್‌ ಶೆಣೈ, ನಿವೃತ್ತ ಪ್ರಾಧ್ಯಾಪಕ ಡಾ| ಸುರೇಶ ರಮಣ ಮಯ್ಯ, ಏಳು ಮಾನದಂಡಗಳ ವಿಭಾಗ ಸಂಚಾಲಕರನ್ನು, ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ಯು.ವಿನೀತ್‌ ರಾವ್‌, ಪ್ರಾಂಶುಪಾಲರು, ಐಕ್ಯೂಎಸಿ ಸಂಚಾಲಕರು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಧನುಷ್‌ ಅವರನ್ನು ಅಭಿನಂದಿಸಲಾಯಿತು.

ಟಾಪ್ ನ್ಯೂಸ್

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ

Train

Train; ದೀಪಾವಳಿಗೆ ಬೆಂಗಳೂರು- ಕಾರವಾರ ವಿಶೇಷ ರೈಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

12

Manipal ಪರಿಸರದ 15-20 ಪಕ್ಷಿ ಪ್ರಭೇದ ಕಣ್ಮರೆ; ಇ ಬರ್ಡ್‌ ಪೋರ್ಟಲ್‌ನಲ್ಲಿ ದಾಖಲಾತಿ

11

Shirva: ಹುಲಿ ವೇಷ ಹಾಕಿ ಅನಾರೋಗ್ಯಪೀಡಿತ ಬಾಲಕನಿಗೆ ನೆರವು ನೀಡಿದ ಪೋರರು!

10

Katpadi: ತ್ಯಾಜ್ಯ ಗುಂಡಿಯಾಗುತ್ತಿದೆ ಕುರ್ಕಾಲು ಮದಗ

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.