ನೀರಿನ ವಿಚಾರಕ್ಕೆ ಗಲಾಟೆ: ಗೃಹಿಣಿ ಆತ್ಮಹತ್ಯೆ
Team Udayavani, Apr 27, 2023, 11:22 AM IST
ಬೆಂಗಳೂರು: ನೀರು ತುಂಬುವ ವಿಚಾರಕ್ಕೆ ಅಕ್ಕ-ಪಕ್ಕದವರು ಜಗಳ ಮಾಡಿದ್ದಕ್ಕೆ ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೋಗಿಲು ಮುಖ್ಯರಸ್ತೆಯ ಶ್ರೀನಿವಾಸಪುರದಲ್ಲಿರುವ ಸರ್ಕಾರಿ ವಸತಿ ಸಮುಚ್ಚಯದ ನಿವಾಸಿ ಸರಸ್ವತಿ (35) ಎಂಬಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸರಸ್ವತಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ನಾಗರಾಜ್ ಸಿನಿಮಾಗಳಲ್ಲಿ ಕ್ಯಾಮೆರಾ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ ನೆಲ ಮಹಡಿಯಲ್ಲಿ ವಾಸವಿದ್ದ ಶ್ರೀನಿವಾಸ್-ಭವಾನಿ ದಂಪತಿ ಪ್ರತ್ಯೇಕವಾಗಿ ನೀರಿನ ಟ್ಯಾಂಕ್ ತಂದಿಟ್ಟುಕೊಂಡು ಎಲ್ಲರಿಗಾಗಿ ಇರುವ ನೀರಿನ ಸಂಪ್ ನಿಂದ ಪ್ರತ್ಯೇಕವಾಗಿ ನೀರು ತುಂಬಿಸಿಕೊಳ್ಳುತ್ತಿದ್ದರು. ಇದರಿಂದಾಗಿ ನೀರಿನ ಅಭಾವ ಉಂಟಾಗುತ್ತಿದೆ ಎಂದು ಸರಸ್ವತಿಗೆ ನೆರೆ ಹೊರೆಯವರು ಬೈದಿದ್ದರು. ಕೆಲ ದಿನಗಳಿಂದ ಎರಡೂ ಮನೆಯವರ ನಡುವೆ ಗಲಾಟೆಗಳಾಗಿದ್ದು ಠಾಣೆಯ ಮೆಟ್ಟಿಲೇರಿದಾಗ ಪೊಲೀಸರು ಬುದ್ಧವಾದ ಹೇಳಿ ಕಳಿಸಿದ್ದರು.
ಏ.21ರಂದು ಸಿನಿಮಾ ಕೆಲಸದ ನಿಮಿತ್ತ ನಾಗರಾಜ್ ಧಾರವಾಡಕ್ಕೆ ಹೋದ ಸಂದರ್ಭದಲ್ಲಿ ಮತ್ತೆ ನೀರಿನ ವಿಚಾರವಾಗಿ ಗಲಾಟೆ ಆರಂಭವಾಗಿತ್ತು. ಈ ವೇಳೆ ನೆರೆ ಮನೆಯ ಶ್ರೀನಿವಾಸ್, ಅವರ ಪತ್ನಿ ಭವಾನಿ ಹಾಗೂ ಶಿಲ್ಪಾ ಎಂಬಾಕೆ ಸರಸ್ವತಿಗೆ ಮನಬಂದಂತೆ ಬೈದಿದ್ದರು. ಮನನೊಂದ ಸರಸ್ವತಿ ಗಂಡನಿಗೆ ಕರೆ ಮಾಡಿ “ನನ್ನಿಂದ ಇನ್ನು ಸಹಿಸಲು ಸಾಧ್ಯವಿಲ್ಲ, ನೀನು ಬೇರೆ ಕಡೆ ಮನೆ ಮಾಡುತ್ತಿಲ್ಲ, ನಾನು ಸಾಯುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಳು. ಗಾಬರಿಗೊಂಡ ನಾಗರಾಜ್ ಪಕ್ಕದ ಮನೆಯವರಿಗೆ ಕರೆ ಮಾಡಿ ಅವರನ್ನು ಕಳುಸುವಷ್ಟರಲ್ಲಿ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶ್ರೀನಿವಾಸ್, ಭವಾನಿ ಹಾಗೂ ಶಿಲ್ಪಾ ವಿರುದ್ಧ ನಾಗರಾಜ್ ಯಲಹಂಕ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.