![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 27, 2023, 3:45 PM IST
ಯುವನಟ ವಿಘ್ನೇಶ್ ಮತ್ತು ಸಂಗೀತಾ ಭಟ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಹೊಸ ಸಿನಿಮಾಕ್ಕೆ “ಕ್ಲಾಂತ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಸಿನಿಮಾದ ಟೈಟಲ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತು.
“ಅನುಗ್ರಹ ಪರ್ವ ಮೀಡಿಯಾ’ ಬ್ಯಾನರಿನಲ್ಲಿ ಉದಯ್ ಅಮ್ಮಣ್ಣಾಯ ಕೆ. ನಿರ್ಮಿಸುತ್ತಿರುವ “ಕ್ಲಾಂತ’ ಸಿನಿಮಾಕ್ಕೆ ವೈಭವ ಪ್ರಶಾಂತ್ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸದ್ದಿಲ್ಲದೆ “ಕ್ಲಾಂತ’ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದ್ದು, ಇದರ ನಡುವೆಯೇ ತಮ್ಮ ಸಿನಿಮಾದ ಟೈಟಲ್ ಅನ್ನು ಘೋಷಿಸಿಕೊಂಡಿದೆ.
ಇದೇ ವೇಳೆ ಮಾತನಾಡಿದ “ಕ್ಲಾಂತ’ ಸಿನಿಮಾದ ನಿರ್ದೇಶಕ ವೈಭವ ಪ್ರಶಾಂತ್, “ಇದೊಂದು ಲವ್ ಕಂ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ವೀಕೆಂಡ್‌ನಲ್ಲಿ ಮನೆಯವರಿಗೆ ತಿಳಿಸದೆ ಹುಡುಗ-ಹುಡುಗಿ ಅಪರಿಚಿತ ಸ್ಥಳವೊಂದಕ್ಕೆ ಹೋಗಿ, ಅಲ್ಲಿ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ. ಇದರಿಂದ ಹೇಗೆ ಪಾರಾಗುತ್ತಾರೆ ಎಂಬುದೇ ಸಿನಿಮಾದ ಕಥೆಯ ಒಂದು ಎಳೆ’ ಎಂದು ಕಥಾಹಂದರ ವಿವರಿಸಿದರು.
“ಕ್ಲಾಂತ’ ಎಂಬ ಪದಕ್ಕೆ ಸಂಸ್ಕೃತದಲ್ಲಿ ದಣಿವು, ಆಯಾಸ ಎಂಬ ಅರ್ಥವಿದೆ. ಸಿನಿಮಾದ ಕಥೆಗೆ ಸೂಕ್ತವಾಗಿದೆ ಎಂಬ ಕಾರಣಕ್ಕೆ ಇದನ್ನೇ ಟೈಟಲ್ ಆಗಿ ಇಟ್ಟುಕೊಂಡಿದ್ದೇವೆ’ ಎಂಬುದು ನಿರ್ಮಾಪಕ ಉದಯ್ ಅಮ್ಮಣ್ಣಾಯ ಮಾತು. “ಬಹಳ ವರ್ಷಗಳ ನಂತರ ಒಂದು ಒಳ್ಳೆಯ ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುವುದಕ್ಕೆ ಖುಷಿಯಾಗುತ್ತಿದೆ. ಒಳ್ಳೆಯ ಸಬ್ಜೆಕ್ಟ್ ಮೂಲಕ ಮತ್ತೆ ಸಿನಿಮಾಕ್ಕೆ ಬರಬೇಕು ಎಂಬ ಯೋಚನೆಯಲ್ಲಿದ್ದಾಗ “ಕ್ಲಾಂತ’ ಸಿನಿಮಾ ಸಿಕ್ಕಿತು. ಇಡೀ ಚಿತ್ರತಂಡದ ಜೊತೆಗೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ. ನನಗೆ ಸಿನಿಮಾದಲ್ಲಿ ಒಂದಷ್ಟು ಫೈಟ್ಸ್ ದೃಶ್ಯಗಳಿದ್ದು, ಕಾಡಿನಲ್ಲೇ ಬಹುತೇಕ ಶೂಟಿಂಗ್ ನಡೆಸಲಾಗಿದೆ’ ಎಂಬುದು ಸಂಗೀತಾ ಭಟ್ ಮಾತು.
ಇಲ್ಲಿಯವರೆಗೆ ಒಂದಷ್ಟು ತುಳು ಮತ್ತು ಕೊಂಕಣಿ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿರುವ ನಟ ವಿಘ್ನೇಶ್, “ಕ್ಲಾಂತ’ ಸಿನಿಮಾದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. “ಹೊಸಥರದ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂಬುದು ವಿಘ್ನೇಶ್ ಮಾತು.
ಕಲಾವಿದರಾದ ಪ್ರವೀಣ್ ಜೈನ್, ಸ್ವಪ್ನಾ ಮೊದಲಾದವರು ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.