ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಕಿನ ಭಾಗ್ಯ!
Team Udayavani, Apr 28, 2023, 7:05 AM IST
ಹಳೆಯಂಗಡಿ: ಸುರತ್ಕಲ್‌ನಿಂದ ಕುಂದಾಪುರದ ವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಮುಖ ಜಂಕ್ಷನ್‌ಗಳಲ್ಲಿ ಹೈಮಾಸ್ಟ್ ದೀಪವನ್ನು ಅಳವಡಿಸಬೇಕೆಂಬ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಲು ಕೊನೆಗೂ ಹೆದ್ದಾರಿಯ ನಿರ್ವಹಣೆ ನಡೆಸುತ್ತಿರುವ ನವಯುಗ ಸಂಸ್ಥೆ ಮುಂದಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಪ್ರದೇಶಗಳಾದ ಮುಕ್ಕ, ಹಳೆಯಂಗಡಿ, ಮೂಲ್ಕಿ, ಬಪ್ಪನಾಡು, ಪಡುಬಿದ್ರಿ, ಕಾಪು, ಕಟಪಾಡಿ, ಬಲಾಯಿಪಾದೆ, ಕಿನ್ನಿಮೂಲ್ಕಿ, ಸಂತೆಕಟ್ಟೆ, ಬ್ರಹ್ಮಾವರ, ಕೋಟ, ಸಾಲಿಗ್ರಾಮ, ಕುಂದಾಪುರ ಶಾಸಿŒ ಸರ್ಕಲ್‌ಗಳಲ್ಲಿ ಬೃಹತ್ ಹೈಮಾಸ್ಟ್ ದೀಪಗಳನ್ನು ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿದೆ.
ಸುಮಾರು 100 ಅಡಿ (33 ಮೀಟರ್) ಎತ್ತರದ ಈ ಕಂಬದಲ್ಲಿ ಎಂಟು ದೀಪಗಳು ಪ್ರಜ್ವಲಿಸಲಿವೆ. ಪ್ರತೀ ಒಂದು ದೀಪದ ಗುತ್ಛಕ್ಕೆ ಸುಮಾರು 8 ಲಕ್ಷ ರೂ. ವೆಚ್ಚವಾಗಲಿದೆ ಎಂದು ನವಯುಗ ಸಂಸ್ಥೆಯ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾದ ಬಳಿಕ ಪ್ರಮುಖ ಜಂಕ್ಷನ್‌ಗಳಲ್ಲಿ ರಸ್ತೆಯ ಅಕ್ಕಪಕ್ಕದ ದಾರಿ ದೀಪಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಇದೀಗ ಈ ಬೃಹತ್ ಹೈಮಾಸ್ಟ್ ದೀಪ ಗಳಿಂದ ರಾತ್ರಿ ಸಮಯದಲ್ಲಿ ಬೆಳಕಿನ ಭಾಗ್ಯ ಸಿಗಲಿದೆ.
ಈ ಕಾಮಗಾರಿಯ ಜತೆಗೆ ಕೆಲವೊಂದು ಕಡೆಯಲ್ಲಿ ಸರ್ವಿಸ್ ರಸ್ತೆ ಹಾಗೂ ರಸ್ತೆ ಅಭಿವೃದ್ಧಿಯಾಗಿ ದಾರಿ ದೀಪವನ್ನು ಅಳವಡಿಸುವ ಕಾಮಗಾರಿ ಕೂಡ ನಡೆಯಲಿದೆ.
ನಾಗರಿಕ ಸಮಿತಿ ಮನವಿ
ಎರಡು ವರ್ಷಗಳ ಹಿಂದೆ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಅವರ ನೇತೃತ್ವದ ಮೂಲ್ಕಿ ನಾಗರಿಕ ಸಮಿತಿಯು ಪ್ರಮುಖ ಜಂಕ್ಷನ್‌ಗಳಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ವಿಸ್ತೃತವಾದ ಮನವಿಯನ್ನು ಸುಮಾರು 38 ಸಂಘ – ಸಂಸ್ಥೆಗಳ ಸಹಿತ ನಗರ ಪಂಚಾಯತ್, ಗ್ರಾ.ಪಂ.ಗಳ ಬೇಡಿಕೆಯ ಶಿಫಾರಸಿನೊಂದಿಗೆ ನವಯುಗ್ ಸಂಸ್ಥೆಗೆ ನೀಡಿತ್ತು. ಅಲ್ಲದೇ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನವಯುಗ ಸಂಸ್ಥೆಯ ವಿದ್ಯುತ್ ಗುತ್ತಿಗೆದಾರ ಬಾಬು ರೆಡ್ಡಿ ಅವರಲ್ಲಿಯೂ ಮನವಿ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.