ನೇತ್ರಾವತಿಯಲ್ಲಿ ಕ್ಷೀಣಿಸುತ್ತಿದೆ ನೀರು; ಓಡಸಾಲಿನ ಮೂಲಕ ಮೂಲಕ ನೀರು ಹರಿಸಬೇಕಾದ ಸ್ಥಿತಿ?
ನೀರು ಹರಿಸುವ ಪ್ರಯತ್ನ ಯಾವ ಹಂತಕ್ಕೆ ತಲುಪಲಿದೆ ಎಂದು ಹೇಳುವಂತಿಲ್ಲ.
Team Udayavani, Apr 28, 2023, 6:41 PM IST
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಒಳಹರಿವು ಸಂಪೂರ್ಣ ನಿಂತು ಹೋಗಿ ಮಂಗಳೂರು ಸೇರಿದಂತೆ ಇತರ ಭಾಗಗಳಲ್ಲಿ ನೀರಿನ ಅಭಾವ ಉಂಟಾಗುವ ಆತಂಕ ಎ ದುರಾಗಿದ್ದು, ಸುಮಾರು ಮೂರು ವರ್ಷಗಳ ಹಿಂದಿನಂತೆ ಈ ಬಾರಿಯೂ ತುಂಬೆ
ಡ್ಯಾಂಗೆ ಓಡಸಾಲು(ಬೋಟ್‌ವೇ)ಗಳ ಮೂಲಕ ನೀರು ಹರಿಸಬೇಕಾದ ಸಾಧ್ಯತೆ ಹೆಚ್ಚಿದೆ.
2019ರಲ್ಲಿ ಜೂನ್ ತಿಂಗಳಿನವರೆಗೂ ಮಳೆ ಬಾರದೆ ತೀವ್ರ ನೀರಿನ ಸಂಕಷ್ಟ ಎದುರಾಗಿ ತುಂಬೆ ಡ್ಯಾಂ ಕೂಡ ಖಾಲಿಯಾಗಿತ್ತು. ಆ ವೇಳೆ ಸರಪಾಡಿಯ ಎಂಆರ್ ಪಿಎಲ್ ಡ್ಯಾಂ(ಎಎಂಆರ್ ಡ್ಯಾಂ ನಿರ್ಮಾಣದ ಬಳಿಕ ನಿರುಪಯುಕ್ತವಾಗಿದೆ)ಬಳಿಕ ಕೊಂಚ ನೀರಿನ ಸಂಗ್ರಹವಿದ್ದು, ಆ ವೇಳೆ ಎಂಆರ್‌ಪಿಎಲ್ ಡ್ಯಾಂನ ಗೇಟ್ ತೆರೆದು ಮರಳನ್ನು ಸರಿಸಿ ನದಿಯಲ್ಲೇ ನೀರು ಹರಿಯುವುದಕ್ಕೆ ವ್ಯವಸ್ಥೆ ಮಾಡಿ ತುಂಬೆ ಡ್ಯಾಂಗೆ ನೀರು ಹರಿಸಲಾಗಿತ್ತು.
ಪ್ರಸ್ತುತ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 4 ಮೀ. ವರೆಗೆ ತಲುಪಿದ್ದು, ಪ್ರಸ್ತುತ ಹರೇಕಳದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ನೂತನವಾಗಿ ನಿರ್ಮಾಣಗೊಂಡಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನಿಂದ ನೀರನ್ನು ತುಂಬೆ ಡ್ಯಾಂಗೆ ಹಿಂದಕ್ಕೆ ಪಂಪ್ ಮಾಡಿ ತುಂಬಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆ ನೀರು ಕೂಡ ಖಾಲಿಯಾದರೆ
ಓಡಸಾಲಿನ ಮೂಲಕ ನೀರು ಹರಿಸುವುದು ಅನಿವಾರ್ಯವಾಗಲಿದೆ. ಆದರೆ ಅದಕ್ಕಿಂತ ಮುಂಚೆ ಮಳೆ ಬಂದರೆ ಇದರ ಪ್ರಮೇಯ ಸೃಷ್ಟಿಯಾಗದು ಎನ್ನಲಾಗುತ್ತಿದೆ.
ಸುಮಾರು 3 ವರ್ಷಗಳ ಹಿಂದೆ ಕೆಲವು ಕಡೆ ಇದೇ ರೀತಿ ಓಡಸಾಲಿನ ಹೂಳು ತೆಗೆದು ಬಂಟ್ವಾಳ ನಗರಕ್ಕೆ ನೀರು ಪೂರೈಸುವ ಜಕ್ರಿಬೆಟ್ಟು ಜಾಕ್‌ವೆಲ್ ಹಾಗೂ ತುಂಬೆ ಡ್ಯಾಂಗೆ ನೀರು ಹರಿಸಲಾಗಿತ್ತು. ಪ್ರಸ್ತುತ ಜಕ್ರಿಬೆಟ್ಟು ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಪ್ರದೇಶದಲ್ಲೂ ಕೊಂಚಮಟ್ಟಿನ ನೀರಿನ ಸಂಗ್ರಹವಿದ್ದು, ಹೀಗಾಗಿ ಬಂಟ್ವಾಳ ನಗರಕ್ಕೆ ನೀರಿನ ಆತಂಕ ಇಲ್ಲ ಎನ್ನಲಾಗುತ್ತಿದೆ.
ಆದರೆ ಮುಂದಿನ ದಿನಗಳಲ್ಲಿ ಜಕ್ರಿಬೆಟ್ಟಿನ ನೀರು ಯಾವ ಹಂತಕ್ಕೆ ತಲುಪುತ್ತದೆ ಎಂದು ಹೇಳುವಂತಿಲ್ಲ. ಜತೆಗೆ ಮಳೆಯೇ ಬಾರದೆ ಇದ್ದರೆ ಓಡಸಾಲಿನ ಮೂಲಕ ನೀರು ಹರಿಸುವ ಪ್ರಯತ್ನ ಯಾವ ಹಂತಕ್ಕೆ ತಲುಪಲಿದೆ ಎಂದು ಹೇಳುವಂತಿಲ್ಲ.
ಏನಿದು ಓಡಸಾಲು ?
ಹಿಂದಿನ ಕಾಲದಲ್ಲಿ ರಸ್ತೆಯೇ ಇಲ್ಲದ ಪರಿಸ್ಥಿತಿಯಲ್ಲಿ ಉಪ್ಪಿನಂಗಡಿ ಭಾಗದಿಂದ ಸರಕುಗಳನ್ನು ಮಂಗಳೂರಿಗೆ ದೋಣಿಯ ಮೂಲಕ ನದಿಯಲ್ಲೇ ಸಾಗಿಸಲಾಗುತ್ತಿತ್ತು. ಆಗ ಅಣೆಕಟ್ಟುಗಳಿಲ್ಲದೆ ಉಪ್ಪಿನಂಗಡಿಯಿಂದ ಮಂಗಳೂರಿನವರೆಗೂ ನದಿಯಲ್ಲೇ ಸಾಗಬಹುದಿತ್ತು. ನದಿ ಯಲ್ಲಿ ನೀರು ಕಡಿಮೆಯಾದ ಸಂದರ್ಭದಲ್ಲಿ ಯಾವುದೇ ಕಲ್ಲುಗಳಿಲ್ಲದ ಜಾಗದಲ್ಲಿ ದೋಣಿ ಸಾಗಬೇಕಾದ ಹಿನ್ನೆಲೆ ಓಡಸಾಲಿನ ವ್ಯವಸ್ಥೆ ಇತ್ತು. ಆದರೆ ಈಗ ಅಂತಹ ಓಡಸಾಲು ಹೂಳಿನಿಂದ ತುಂಬಿ ಸಂಪೂರ್ಣ ಮುಚ್ಚಿಹೋಗಿದೆ.
ಸದ್ಯ ಬಂಟ್ವಾಳಕ್ಕೆ ಆತಂಕವಿಲ್ಲ
ಸದ್ಯಕ್ಕೆ ಸರಪಾಡಿ ಎಂಆರ್‌ಪಿಎಲ್ ಡ್ಯಾಂ ಪ್ರದೇಶದಲ್ಲಿ ಸ್ವಲ್ಪ ಮಟ್ಟಿನ ನೀರಿನ ಸಂಗ್ರಹವಿದ್ದು, ಮುಂದಿನ ದಿನಗಳಲ್ಲಿ ತುಂಬೆ ಡ್ಯಾಂನಲ್ಲಿ ನೀರು ಖಾಲಿಯಾದರೆ ಸರಪಾಡಿ ಡ್ಯಾಂನ ಬಳಿಯಿರುವ ನೀರು ಯಾವ ಹಂತಕ್ಕೆ ತಲುಪುತ್ತದೆ ಎಂದು ಹೇಳುವಂತಿಲ್ಲ. ಆದರೂ ಆಗ ಒಂದೆರಡು ಮಳೆ ಬಂದು ಸ್ವಲ್ಪ ಮಟ್ಟಿಗೆ ಒಳಹರಿವು ಇದ್ದರೆ ಈ ಓಡಸಾಲಿನ ಮೂಲಕ ನೀರು ಹರಿಸುವ ಪ್ರಯತ್ನ ಯಶಸ್ವಿಯಾಗುವ ಸಾಧ್ಯತೆ ಇದೆ.
*ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.