ಲಂಕೆಗೆ ಮತ್ತೆ ಇನ್ನಿಂಗ್ಸ್ ಜಯ
Team Udayavani, Apr 29, 2023, 6:40 AM IST
ಗಾಲೆ: ಪ್ರವಾಸಿ ಐರ್ಲೆಂಡ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯವನ್ನೂ ಇನ್ನಿಂಗ್ಸ್ ಅಂತರದಿಂದ ಗೆದ್ದ ಶ್ರೀಲಂಕಾ, 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ.
ಗಾಲೆಯಲ್ಲಿ ಶುಕ್ರವಾರ ಕೊನೆಗೊಂಡ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ಇನ್ನಿಂಗ್ಸ್ ಹಾಗೂ 10 ರನ್ನುಗಳಿಂದ ಜಯಿಸಿತು. ಇಲ್ಲೇ ಆಡಲಾದ ಮೊದಲ ಟೆಸ್ಟ್‌ನಲ್ಲಿ ಲಂಕಾ ಇನ್ನಿಂಗ್ಸ್ ಹಾಗೂ 280 ರನ್ನುಗಳ ಜಯಭೇರಿ ಮೊಳಗಿಸಿತ್ತು.
ದ್ವಿತೀಯ ಟೆಸ್ಟ್‌ನಲ್ಲಿ ಐರ್ಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನೇ ನೀಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 492 ರನ್ ಪೇರಿಸಿತ್ತು. ಇಬ್ಬರಿಂದ ಶತಕವೂ ದಾಖಲಾಗಿತ್ತು. ಪಾಲ್ ಸ್ಟರ್ಲಿಂಗ್ 103, ಕರ್ಟಿಸ್ ಕ್ಯಾಂಫರ್ 111 ರನ್ ಹೊಡೆದಿದ್ದರು. ಆದರೆ ಶ್ರೀಲಂಕಾ ಇದಕ್ಕೂ ಮಿಗಿಲಾದ ಬ್ಯಾಟಿಂಗ್ ಪ್ರದರ್ಶಿಸಿತು. ಮೂರೇ ವಿಕೆಟಿಗೆ 704 ರನ್ ರಾಶಿ ಹಾಕಿತು. ನಿಶಾನ್ ಮದುಷ್ಕ 205, ದಿಮುತ್ ಕರುಣಾರತ್ನೆ 115, ಕುಸಲ್ ಮೆಂಡಿಸ್ 245 ಮತ್ತು ಏಂಜೆಲೊ ಮ್ಯಾಥ್ಯೂಸ್ ಅಜೇಯ 100 ರನ್ ಹೊಡೆದರು.
212 ರನ್ನುಗಳ ಹಿನ್ನಡೆಗೆ ಸಿಲುಕಿದ ಐರ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 202 ರನ್ನಿಗೆ ಕುಸಿಯಿತು. ರಮೇಶ್ ಮೆಂಡಿಸ್ 5, ಅಸಿತ ಫೆರ್ನಾಂಡೊ 3, ಪ್ರಭಾತ್ ಜಯಸೂರ್ಯ 2 ವಿಕೆಟ್ ಕೆಡವಿದರು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಉರುಳಿಸಿದ ಜಯಸೂರ್ಯ ಪಂದ್ಯಶ್ರೇಷ್ಠ, ಕುಸಲ್ ಮೆಂಡಿಸ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.