JEE ಮೈನ್ಸ್‌ನಲ್ಲಿ ಬೆಂಗಳೂರಿನ ಇಬ್ಬರು ರಾಜ್ಯಕ್ಕೆ ಟಾಪರ್
Team Udayavani, Apr 30, 2023, 7:24 AM IST
ಬೆಂಗಳೂರು: 2023ನೇ ಸಾಲಿನ ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಮೈನ್ಸ್) ಫಲಿತಾಂಶ ಶನಿವಾರ ಪ್ರಕಟವಾಗಿದೆ. ಬೆಂಗಳೂರಿನ ತನಿಷ್.ಎಸ್.ಖುರಾನಾ ಹಾಗೂ ರಿಧಿ ಮಹೇಶ್ವರಿ ಕ್ರಮವಾಗಿ ರಾಜ್ಯದ ಪ್ರಥಮ ಹಾಗೂ ದ್ವಿತೀಯ ಟಾಪರ್‌ಗಳಾಗಿದ್ದಾರೆ.
ತನಿಷ್ ಅಖೀಲ ಭಾರತ ಮಟ್ಟದಲ್ಲಿ 22 ಹಾಗೂ ರಿಧಿ ಅಖೀಲ 23ನೇ ರ್‍ಯಾಂಕ್ ಪಡೆದಿದ್ದಾರೆ. ನಿವೇದ್ ಎ. ನಂಬಿಯಾರ್ 35ನೇ ರ್‍ಯಾಂಕ್ ಪಡೆದು, ಕರ್ನಾಟಕದ ಮೂರನೇ ಟಾಪರ್ ಆಗಿದ್ದಾರೆ. ನಿರಾಲ್ ಚರಣ್ 54ನೇ ರ್‍ಯಾಂಕ್, ರಿಶಿತ್ ಗುಪ್ತಾ 93ನೇ ರ್‍ಯಾಂಕ್ ಪಡೆದಿದ್ದಾರೆ. ಎ.ಲೇಖಶ್ರೀ 51ನೇ ರ್‍ಯಾಂಕ್, ಮರುಮಾಮೂಲ ವೆಂಕಟ ಪ್ರಣಯ್ 71ನೇ ರ್‍ಯಾಂಕ್, ಅಚಿಂತ್ಯಾ ಮಾಥುರ್ 85ನೇ ರ್‍ಯಾಂಕ್, ಬಿ.ಶಶಾಂಕ್ ವಿಶೇಷ ಚೇತನ ವಿಭಾಗದಲ್ಲಿ 2ನೇ ರ್‍ಯಾಂಕ್, ಸೂರಜ್ ಗುರುನಾಥ್ ಕಾಗಲ್ಕರ್ 7ನೇ ರ್‍ಯಾಂಕ್ ಪಡೆದಿದ್ದಾರೆ.
ರಾಜ್ಯದ ಹಲವಾರು ವಿದ್ಯಾರ್ಥಿಗಳು ಜೆಇಇ ಮೈನ್ಸ್‌ನಲ್ಲಿ ಅಖೀಲ ಭಾರತ ಮಟ್ಟದ ಟಾಟ್ 100 ರ್‍ಯಾಂಕ್‌ನಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಎಕ್ಸ್‌ಪರ್ಟ್ ಪಿಯು ಕಾಲೇಜಿನ 21 ವಿದ್ಯಾರ್ಥಿಗಳು ಟಾಪ್ 200 ರ್‍ಯಾಂಕ್‌ನಲ್ಲಿ ವಿವಿಧ ಸ್ಥಾನ ಪಡೆದಿದ್ದಾರೆ. ಐಐಟಿ ಸೇರಿದಂತೆ ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಜೆಇಇ ಮೈನ್ಸ್ ನಡೆಸುತ್ತದೆ.
ಪ್ರಾಧ್ಯಾಪಕರ ಮಾರ್ಗ ದರ್ಶನದಿಂದ ಸಾಧನೆ
ಪ್ರಾಧ್ಯಾಪಕರು ಕಾಲೇಜು ಹಾಗೂ ಕೋಚಿಂಗ್ ಕೇಂದ್ರದಲ್ಲಿ ನೀಡಿದ ತರಬೇತಿ, ಮಾರ್ಗದರ್ಶನ ಪ್ರೋತ್ಸಾಹ ದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಕಠಿನ ಪರಿಶ್ರಮದಿಂದ ಅಧ್ಯಯನ ಮಾಡಿದ್ದು, ತಮಗೆ ಬೋಧಿಸಿದ ಶಿಕ್ಷಕರು, ಪ್ರೋತ್ಸಾಹ ನೀಡಿದ ಪಾಲಕರಿಗೆ ಋಣಿಯಾಗಿದ್ದೇವೆ ಎಂದು ರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ಟಾಪರ್‌ಗಳಾಗಿರುವ ಬೆಂಗಳೂರಿನ ತನಿಷ್.ಎಸ್.ಖುರಾನಾ ಹಾಗೂ ರಿಧಿ ಮಹೇಶ್ವರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.