ರಣಕಣದಲ್ಲೂ ಸ್ತ್ರೀ ಶಕ್ತಿ: ಫಿರಂಗಿ ಪಡೆಗೆ 5 ಮಹಿಳೆಯರ ಮೊದಲ ಬ್ಯಾಚ್ ಸೇರ್ಪಡೆ
Team Udayavani, Apr 30, 2023, 8:30 AM IST
ಹೊಸದಿಲ್ಲಿ: ಭಾರತೀಯ ರಕ್ಷಣ ಕ್ಷೇತ್ರದಲ್ಲಿ ಸ್ತ್ರೀ ಪಾಬಲ್ಯ ಹೆಚ್ಚಿಸುವ ಮತ್ತೂಂದು ಮಹತ್ತರ ಹೆಜ್ಜೆಗೆ ದೇಶ ಸಾಕ್ಷಿಯಾಗಿದ್ದು, ಇದೇ ಮೊದಲ ಬಾರಿಗೆ ಸೇನೆಯ ಫಿರಂಗಿ ಪಡೆಗೆ(ಆರ್ಟಿಲರಿ ರೆಜಿಮೆಂಟ್)ಐವರು ಮಹಿಳೆಯರ ಮೊದಲ ಬ್ಯಾಚ್ ಸೇರ್ಪಡೆಗೊಂಡಿದೆ. ಈ ಮೂಲಕ ದೇಶ ರಕ್ಷಣೆಗಾಗಿ ರಣರಂಗದಲ್ಲೂ ಶತ್ರುಗಳ ವಿರುದ್ಧ ಸೆಣಸಾಡಲು ಮಹಿಳೆಯರು ಕಾಲಿಟ್ಟಂತಾಗಿದೆ.
ಚೆನ್ನೈಯಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿರುವ ಲೆಫ್ಟಿನೆಂಟ್ ಮೆಹಕ್ ಸೈನಿ, ಲೆಫ್ಟಿನೆಂಟ್ ಸಾಕ್ಷಿ ದುಬೆ, ಲೆಫ್ಟಿನೆಂಟ್ ಅದಿತಿ ಯಾದವ್, ಲೆಫ್ಟಿನೆಂಟ್ ಪಿಯುಸ್ ಮುದ್ಗಿಲ್, ಲೆಫ್ಟಿನೆಂಟ್ ರೇಖಾ ಸಿಂಗ್ ಶನಿವಾರ ಸೇನೆಯ ಫಿರಂಗಿ ಪಡೆಗೆ ಸೇರ್ಪಡೆಗೊಂಡಿದ್ದಾರೆ. ಆರ್ಟಿಲ್ಲರಿ ರೆಜಿಮೆಂಟ್ಗೆ ಮಹಿಳಾ ಅಧಿಕಾರಿಗಳ ನೇಮಕ ಸೇನಾ ಇತಿಹಾಸದಲ್ಲಿ ಇದೇ ಮೊದಲು.
ವಿಶೇಷವೆಂದರೆ ಈ ಐವರ ಪೈಕಿ ಮೂವರನ್ನು ಭಾರತ-ಚೀನ ಗಡಿಯಲ್ಲಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಬಳಿ ಇರುವ ಘಟಕ ಗಳಲ್ಲಿ ನಿಯೋಜಿಸಲಾಗಿದ್ದು, ಇನ್ನಿಬ್ಬರನ್ನು ಭಾರತ- ಪಾಕಿಸ್ಥಾನದ (ಎಲ್ಒಸಿ)ಗಡಿಯಲ್ಲಿ ನಿಯೋಜಿ ಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಭೂತಾನ್ನ ಐವರು ಪುರುಷ ಕೆಡೆಟ್ಗಳು, 24 ಮಹಿಳಾ ಕೆಡೆಟ್ಗಳು ಕೂಡ ಚೆನ್ನೈಯ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿ ದ್ದಾರೆ. ಶನಿವಾರ ಚೆನ್ನೈಯಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್ನಲ್ಲಿ ಒಟ್ಟಾರೆ 186 ಕೆಡೆಟ್ಗಳು ತರಬೇತಿ ಪೂರ್ಣಗೊಳಿಸಿ ಸೇನೆಗೆ ಸೇರ್ಪಡೆ ಗೊಂಡರು. ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಎಸ್.ಎಂ.ಶಫೀಯುದ್ದೀನ್ ಅಹ್ಮದ್ ಅವರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ರಕ್ಷಣೆಗೆ ವಿಶೇಷ ತರಬೇತಿ
ಭಾರತೀಯ ಸೇನೆಯ ಯುದ್ಧನಿಪುಣ ವಿಭಾಗವಾ ಗಿರುವ ಆರ್ಟಿಲರಿ ರೆಜಿಮೆಂಟ್ನಲ್ಲಿ ಮಹಿಳಾ ಸಿಬಂದಿಗೆ ಯಾವುದೇ ಕಠಿನ ಪರಿಸ್ಥಿತಿಯನ್ನೂ ಯಶಸ್ವಿ ಯಾಗಿ ನಿಭಾಯಿಸಲು ವಿಶೇಷ ರಕ್ಷಣ ತರಬೇತಿ ನೀಡಲಾಗಿದೆ. ಈ ಪೈಕಿ ರಾಕೆಟ್ ನಿರ್ವಹಣೆಯೂ ಸೇರಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪತಿ ನೆತ್ತರಿತ್ತ ಭೂಮಿಗೆ ಈಗ ಪತ್ನಿಯಿಂದ ರಕ್ಷಣೆ!
2020ರಲ್ಲಿ ಪೂರ್ವ ಲಡಾಖ್ನಲ್ಲಿ ಭಾರತೀಯ ಸೇನೆ ಮತ್ತು ಚೀನ ಸೇನೆ ನಡುವೆ ನಡೆದ ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಯೋಧ ಲ್ಯಾನ್ಸ್ ನಾಯಕ್ ದೀಪಕ್ ಸಿಂಗ್ ಅವರ ಪತ್ನಿ ರೇಖಾ ಸಿಂಗ್ ಶನಿವಾರ ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಗೆ ಸೇರ್ಪ ಡೆಗೊಂಡಿದ್ದಾರೆ. ಯುದ್ಧ ಘಟಕವಾದ ಆರ್ಟಿಲರಿ ರೆಜಿಮೆಂಟ್ಗೆ ಸೇರ್ಪಡೆ ಗೊಂಡ ದೇಶದ ಮೊದಲ ಐವರು ಮಹಿಳಾ ಸಿಬಂದಿಯ ಪೈಕಿ ರೇಖಾ ಕೂಡ ಒಬ್ಬರು. ವಿಶೇಷವೆಂದರೆ ಯಾವ ನೆಲದ ಉಳಿವಿಗಾಗಿ ರೇಖಾರ ಪತಿ ಉಸಿರು ಚೆಲ್ಲಿದರೋ, ಅದೇ ಗಾಲ್ವಾನ್ ನೆಲದ ರಕ್ಷಣೆಗಾಗಿ ಪೂರ್ವ ಲಡಾನ್ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ರೇಖಾ ಅವರನ್ನು ನಿಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.